ಅಂದು ಬಿಜೆಪಿ ವಿರುದ್ಧ ‘ಪೇಸಿಎಂ’, ಇಂದು ‘ಚೊಂಬು’ ಅಭಿಯಾನ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು: ೨೦೨೩ರ ವಿಧಾನಸಭೆ ಚುನಾವಣೆ ಸಂರ‍್ಭದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ರ‍್ಕಾರದ ವಿರುದ್ಧ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ‘ಪೇಸಿಎಂ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ವ್ಯಾಪಕವಾಗಿ ಪರಿಣಾಮಕಾರಿಯಾಗಿ ನಡೆಸಿತ್ತು. ಅದು ವಿಧಾನಸಭೆ ಚುನಾವಣೆ ಫಲಿತಾಂಶದ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮವನ್ನು ಕೂಡ ಬೀರಿತ್ತು. ಇಂದು ೨೦೨೪ರ ಲೋಕಸಭೆ ಚುನಾವಣೆ ಸಂರ‍್ಭದಲ್ಲಿ ಕೇಂದ್ರ ರ‍್ಕಾರ ವಿರುದ್ಧ ರಾಜ್ಯ ಕಾಂಗ್ರೆಸ್ ‘ಚೊಂಬು ಅಭಿಯಾನ ಆರಂಭಿಸಿದೆ.

  • ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ ಸಂರ‍್ಭ ಶಾಸಕ ರಿಜ್ವಾನ್ ರ‍್ಷದ್, ಎಐಸಿಸಿ ಕರ‍್ಯರ‍್ಶಿ ಅಭಿಷೇಕ್ ದತ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಎಐಸಿಸಿ ಪ್ರಧಾನ ಕರ‍್ಯರ‍್ಶಿ ಮತ್ತು ರ‍್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸರ‍್ಜೇವಾಲಾ ನೇತೃತ್ವದಲ್ಲಿ ಮೇಕ್ರಿ ರ‍್ಕಲ್ ನಲ್ಲಿ ಚೊಂಬು ಹಿಡಿದುಕೊಂಡು ಮತ್ತು ಚೊಂಬಿನ ಚಿತ್ರವನ್ನು ಹೊಂದಿರುವ ಭಿತ್ತಿಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು. 
  • ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಬೆಂಗಳೂರು ಉತ್ತರ ಲೋಕಸಭೆ ಅಭ್ರ‍್ಥಿ ಪ್ರೊ.ಎಂ.ವಿ.ರಾಜೇಗೌಡ ಇದೇ ರೀತಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ರ‍್ನಾಟಕದ ಜನತೆ, ರೈತರು ಬರ ಪರಿಹಾರ ಕೇಳಿದಾಗ ಬಿಜೆಪಿ ರ‍್ಕಾರ ಖಾಲಿ ‘ಚೊಂಬು ನೀಡಿದೆ.೧೫ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಬರಬೇಕಾದ ಪಾಲು ಕೇಳಿದಾಗ ಕೇಂದ್ರ ‘ಚೊಂಬು ನೀಡಿದೆ ಎಂದು ರಂದೀಪ್ ಸಿಂಗ್ ಸರ‍್ಜೆವಾಲಾ ಆರೋಪಿಸಿದರು. ಇದಲ್ಲದೆ, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ೫,೩೦೦ ಕೋಟಿ ರೂಪಾಯಿಗಳ ಬಜೆಟ್ ಭರವಸೆ ಬಿಡುಗಡೆ ಮಾಡಿಲ್ಲ, ಕೇಂದ್ರಕ್ಕೆ ತೆರಿಗೆಯಾಗಿ ರ‍್ನಾಟಕ ೧೦೦ ರೂಪಾಯಿ ಕೊಡುಗೆ ನೀಡುತ್ತಿದ್ದರೆ ರಾಜ್ಯಕ್ಕೆ ಬರುತ್ತಿರುವ ಅನುದಾನ ಸಹಾಯ ಮೊತ್ತ ಕೇವಲ ೧೩ ರೂಪಾಯಿ ಆಗಿದೆ. ಅಲ್ಲದೆ, ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್‌ಗೆ ಅಗತ್ಯ ಹಣ ಬಂದಿಲ್ಲ ಎಂದು ಆಪಾದಿಸಿದರು.  ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ರ‍್ನಾಟಕ ಹಾಗೂ ದೇಶದ ಜನತೆ ಬಿಜೆಪಿಗೆ ಖಾಲಿ ‘ಚೊಂಬು ನೀಡಲಿದ್ದಾರೆ ಎಂದು ಲೇವಡಿ ಮಾಡಿದರು. ೨೦೨೩ರ ವಿಧಾನಸಭೆ ಚುನಾವಣೆಗೂ ಮುನ್ನ ಗುತ್ತಿಗೆದಾರರಿಂದ ಶೇ.೪೦ರಷ್ಟು ಕಮಿಷನ್‌ ನ್ನು ಬಿಜೆಪಿ ರ‍್ಕಾರ ಪಡೆದಿತ್ತು ಎಂಬ ಆರೋಪವನ್ನು ಬಳಸಿಕೊಂಡು ‘ಪೇಸಿಎಂ ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್‌, ಈ ಬಾರಿ ಕೇಂದ್ರ ರ‍್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿದೆ. ಬರ ಪರಿಹಾರದ ವಿರುದ್ಧ ತೆರಿಗೆ ಹಂಚಿಕೆ ಮತ್ತು ಎನ್‌ಡಿಆರ್‌ಎಫ್ ನಿಧಿಯ ವಿಷಯಗಳ ಕುರಿತು ಕೇಂದ್ರದ ಮೋದಿ ರ‍್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.
Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top