ನವದೆಹಲಿ, ನ ೩೦ (ಯುಎನ್‌ಐ) ಒಮಿಕ್ರಾನ್ ಎಂಬ ಹೊಸ ಸೋಂಕಿನ ಪ್ರಬೇಧದ ಹೊಟ್ಟೆ ಬಗೆದು ಅದರಲ್ಲಿ ಅಡಗಿರಬಹುದಾದ ಅಪಾಯಕಾರಿ ವಿಷಯ ಅರಿತು, ಮತ್ತು ಮಾನವ ದೇಹದ ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಮತ್ತು ಕಾರಣಗಳನ್ನು ಪತ್ತೆ ಮಾಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ವಿಜ್ಞಾನಿ ಸಮುದಾಯಕ್ಕೆ ಕರೆ ಕೊಟ್ಟಿದೆ.

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಹೊಸ ಸೋಂಕು ಬಹಳ ತೀವ್ರ ಮತ್ತು ಪರಿಣಾಮಕಾರಿ ಹೀಗಾಗಿ ಜಗತ್ತು ಎಚ್ಚರಿಕೆ ವಹಿಸಬೇಕೆಂದು ಕರೆಕೊಟ್ಟ ಬೆನ್ನಲ್ಲೇ ತಳಿಯನ್ನು ಬೇದಿಸಲು ಜಾಗತಿಕ ವಿಜ್ಞಾನಿ ಸಮುದಾಯ ಎಚ್ಚರಗೊಳ್ಳಬೇಕು, ಸಂಶೋಧನೆ ನಡೆಸಬೇಕು. ಮಾನವ ದೇಹದ ಮೇಲೆ ಉಂಟುಮಾಡಬಹುದಾದ ಅಲ್ಪ ಮತ್ತು ದೀರ್ಘಕಾಲೀನ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಬೇಕು. ಇದರ ಜೊತೆಗೆ ಉಗ್ರ ಸ್ವರೂಪದ ರೂಪಾಂತರಿ ಕೊರೊನಾ ಸೋಂಕು ನಿವಾರಣೆ ಮಾಡುವಂತಹ ವಿನೂತನ ಲಸಿಕೆ ಕಂಡುಹಿಡಿಯಲು ವಿಜ್ಞಾನಿ ಬಳಗ ಮುಂದಾಗಬೇಕೆಂದು ಹೇಳಿದೆ.