ಮದ್ಯಪ್ರಿಯರಿಗೆ ಶಾಕ್ ನೀಡಿದ ರಾಜ್ಯಸರ್ಕಾರ..!

Kannada Nadu
ಮದ್ಯಪ್ರಿಯರಿಗೆ ಶಾಕ್ ನೀಡಿದ ರಾಜ್ಯಸರ್ಕಾರ..!

ಬೆಂಗಳೂರು: ಇತ್ತೀಚಿಗಷ್ಟೇ ಬಸ್ ಪ್ರಯಾಣ ದರ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ್ದ ರಾಜ್ಯ ಸರ್ಕಾರ, ಇದೀಗ ಮದ್ಯಪ್ರಿಯರಿಗೆ ಶಾಕ್ ನೀಡಿದ್ದು, 10 ರೂ.ನಿಂದ 45 ರೂ.ವರೆಗೂ ಬೆಲೆ ಏರಿಕೆಯಾಗಿದೆ. ಪರಿಷ್ಕೃತ ದರವೂ ಇಂದಿನಿAದಲೇ ಜಾರಿಯಾಗಿದೆ. ವಿಶೇಷತೆ ಎಂದರೆ ಒಂದು ವರ್ಷದಲ್ಲಿ ಬಿಯರ್ ಬೆಲೆ ಮೂರರಷ್ಟು ಏರಿಕೆಯಾಗಿದೆ.
ಸಾಧಾರಣವಾಗಿ ಬಜೆಟ್ ನಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್ ಮಂಡನೆಯಾಗುವ ಮೊದಲೇ ಬಿಯರ್ ದರ ಏರಿಕೆಯಾಗಿದೆ.ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು ಸರ್ಕಾರ ಹೆಚ್ಚಳ ಮಾಡಿದೆ. ದುಬಾರಿ ಬೆಲೆಯ ಬಿಯರ್ ದರ ಏರಿಕೆಯಾಗಿಲ್ಲ. ಬದಲಾಗಿ 300 ರೂ. ಒಳಗಡೆ ಇರುವ ಮದ್ಯದ ದರವನ್ನು ಅಬಕಾರಿ ಇಲಾಖೆ ಏರಿಸಿದೆ.
ಪ್ರಸಕ್ತ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಅಬಕಾರಿಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಜೆಟ್ಗೂ ಮುನ್ನವೇ ಬಿಯರ್ ದರ ಏರಿಕೆ ಮಾಡಿದೆ. ಈಗಾಗಲೇ ರಾಜ್ಯ ಸರ್ಕಾರವು ವಿವಿಧ ವಸ್ತುಗಳ ಹಾಗೂ ಸೇವೆಗಳ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ. ಇದರ ನಡುವೆ ಮದ್ಯ ಪ್ರಿಯರಿಗೂ ದೊಡ್ಡ ಶಾಕ್ ಕೊಡಲಾಗಿದೆ. ಒಂದೊAದು ಸೇವೆ ಹಾಗೂ ವಸ್ತುಗಳ ಬೆಲೆ ಏರಿಕೆಗೆ ಸಾರ್ವಜನಿಕರು ತಮ ವಿರೋಧವನ್ನು ವ್ಯಕ್ತಪಡಿಸುತ್ತಲ್ಲೇ ಇದ್ದಾರೆ. ಇದರ ನಡುವೆ ಬಿಯರ್ ಬೆಲೆಯೂ ಭರ್ಜರಿ ಹೆಚ್ಚಳವಾಗಿದೆ.
ಇನ್ನು ಬಿಯರ್ ಬೆಲೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಕಂಪನಿಗಳು ಹಾಗೂ ಮದ್ಯ ಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಬಿಯರ್ ಬೆಲೆ ಕರ್ನಾಟಕದಲ್ಲಿ ಹೆಚ್ಚಳವಾಗಿದೆ.ಬಿಯರ್ ದರ ಪರಿಷ್ಕರಿಸಲು ಕಳೆದ 2024ರ ಆಗಸ್ಟ್ನಲ್ಲಿಯೇ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ನಾನಾ ಕಾರಣಗಳಿಂದ ದರ ಪರಿಷ್ಕರಣೆ ಕಡತಕ್ಕೆ ಮುಖ್ಯಮಂತ್ರಿಗಳು ಸಹಿ ಹಾಕಿರಲಿಲ್ಲ. ಈಗ, ಮುಖ್ಯಮಂತ್ರಿಗಳು ದರ ಏರಿಕೆಗೆ ಸಮತಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಿಮಿಯಂ ಬಿಯರ್ ಬೆಲೆ ಏರಿಕೆಗೆ ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತಕರಾರು ವ್ಯಕ್ತಪಡಿಸಿದೆ. ದೇಶದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚಿನ ಬೆಲೆಗೆ ಬಿಯರ್ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಬಿಯರ್ ಮಾರಾಟ ಕಡಿಮೆಯಾಗಿದೆ ಎಂದು ಹೇಳಿದೆ.
ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಿಯರ್ ಮಾರಾಟ ಎರಡು ಪಟ್ಟು ಹೆಚ್ಚಾಗಿದೆ. ಕೋವಿಡ್ ನಂತರದ ಅವಧಿಯಲ್ಲಿ ಗ್ರಾಹಕರ ನಡವಳಿಕೆಯಲ್ಲಿನ ಬದಲಾವಣೆ ಮತ್ತು ಬೇಸಿಗೆಯ ತಾಪಮಾನದಲ್ಲಿನ ಏರಿಕೆ ಕೂಡ ಬಿಯರ್ ಬೇಡಿಕೆ ಹೆಚ್ಚಲು ಕಾರಣ ಎಂದು ಮೂಲಗಳು ತಿಳಿಸಿವೆ.ಯಾವುದೇ ಮಾದರಿಯ ಬಿಯರ್ ಬಾಟಲ್ ತೆಗೆದುಕೊಂಡರೂ 10 ರೂಪಾಯಿ ದರ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.ಕಳೆದ ವರ್ಷದ ಅಂತ್ಯದಲ್ಲಿ ಕರ್ನಾಟಕದಲ್ಲಿ ಲಿಕ್ಕರ್ ಬೆಲೆಗಳನ್ನು ಪರಿಷ್ಕರಣೆ ಮಾಡಲಾಗಿತ್ತು. ಆಗಸ್ಟ್ 27ರಿಂದ ಹೊಸ ದರ ಜಾರಿಯಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಪ್ರೀಮಿಯಂ ಬ್ರಾಂಡ್ಗಳ ದರದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು.ಪ್ರಮುಖವಾಗಿ ರಮ್, ವಿಸ್ಕಿ, ಬ್ರಾಂದಿಗಳ ಬೆಲೆ ಕಡಿಮೆಯಾಗಿತ್ತು.
ಸ್ಟಾಕ್ ಮಾಡಲು ಹೆದರಿಕೆ :ಮದ್ಯದ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಮದ್ಯ ತಯಾರಕರು ಬ್ರಾಂಡ್ಗಳನ್ನು ಮಾರುಕಟ್ಟೆಗೆ ಪೂರೈಸುತ್ತಿಲ್ಲ. ಏಕೆಂದರೆ ದರ ಹೆಚ್ಚಳವಾದರೆ ಅಥವಾ ಕಡಿಮೆಯಾದರೆ ಮತ್ತೆ ಲೇಬಲ್ ಬದಲಾಯಿಸಬೇಕು. ಹಾಗಾಗಿ ಅವರು ಪೂರೈಕೆ ಸ್ಥಗಿತಗೊಳಿಸಿರುವುದರಿಂದ ಕೊರತೆ ಎದುರಾಗಿದೆ. ಬಾರ್, ರೆಸ್ಟೋರೆಂಟ್, ರೀಟೇಲ್ ಮಳಿಗೆಗಳು ಸೇರಿ ಬಹುತೇಕ ಮದ್ಯದ ಅಂಗಡಿಗಳಲ್ಲಿ ಪ್ರೀಮಿಯಂ ಬ್ರಾಂಡ್ ಬಿಯರ್ಗಳೇ ದೊರಕುತ್ತಿಲ್ಲ.
ಬಾರ್, ರೆಸ್ಟೋರೆಂಟ್ ಹಾಗೂ ಸಗಟು ಮಾರಾಟಗಾರರು ಬಿಯರ್ಗಳನ್ನು ದಾಸ್ತಾನು ಮಾಡುತ್ತಿಲ್ಲ. ಏಕೆಂದರೆ ದೊಡ್ಡ ಪ್ರಮಾಣದಲ್ಲಿ ಬಿಯರ್ ದಾಸ್ತಾನು ಮಾಡಿದಲ್ಲಿ ಒಂದು ವೇಳೆ ಸರ್ಕಾರ ದರ ಹೆಚ್ಚಳ ಅಥವಾ ಇಳಿಕೆ ಮಾಡಿದರೆ ಆಗ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎನ್ನುತ್ತಾರೆ ಬಾರ್ ಮಾಲೀಕರು.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದರು. ಆ ಬಳಿಕ ಬಸ್ ಪಾಸ್ ಹಾಗೂ ಬಸ್ ಬಾಡಿಗೆ ದರ ಕೂಡ ಹೆಚ್ಚಳವಾಗಿತ್ತು. ಇದರ ನಡುವೆಯೇ ಹಾಲಿನ ದರ ಹೆಚ್ಚಳ ಬಗ್ಗೆಯೂ ಒಕ್ಕೂಟಗಳಿಂದ ಒತ್ತಾಯ ಕೇಳಿ ಬರುತ್ತಿದೆ.
ಯಾವ ಬ್ರಾಂಡ್ ಬೀಯರ್ ದರ ಎಷ್ಟು ಏರಿಕೆ?
ಲೆಜೆಂಡ್ -145(100)
ಪವರ್ ಕೂಲ್ -155(130)
ಬ್ಲ್ಯಾಕ್ ಫೋರ್ಟ್ -160(145)
ಹಂಟರ್ -190 (180)
ವುಡ್ಪೆಕರ್ ಕ್ರೆಸ್ಟ್ – 250(240)

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";