ವೈದ್ಯರು ಮತ್ತು ದಾದಿಯರದು ನಿಸ್ವಾರ್ಥ ಸೇವೆ

ದೇವನಹಳ್ಳಿ: ಹಗಲು ರಾತ್ರಿ ಎನ್ನದೆ, ರೋಗಿಗಳ ಸೇವೆ ಮಾಡುವ ನರ್ಸ್​ ಗಳ ಸೇವೆ ನಿಜಕ್ಕೂ ಶ್ಲಾಘನೀಯ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಅಲ್ಲಿ ವೈದ್ಯರಷ್ಟೇ ರೋಗಿಗಳನ್ನು ಶುಶ್ರೂಷೆ ಮಾಡುವವರು ದಾದಿಯರು. ಎಲ್ಲಕ್ಕಿಂತ ಹೆಚ್ಚಾಗಿ ಕೊರೊನಾ ಸಮಯದಲ್ಲಿ ನರ್ಸ್​ಗಳು ತಮ್ಮ ಜೀವದ ಹಂಗನ್ನು ತೊರೆದು ಸೋಂಕಿತರ ಸೇವೆ ಮಾಡಿದ್ದರು. ಇಂದು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯಾದ್ದರಿಂದ ಅವರಿಗೊಂದು ಗೌರವ ಸಮರ್ಪಣೆ ಮಾಡುತ್ತಿರುವುದಾಗಿ ಪಟ್ಟಣದ ಸುವೀಕ್ಷ ಆಸ್ಪತ್ರೆಯ ವೈದ್ಯರಾದ ಡಾ. ಕವಿತ ನಟರಾಜ್ ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಸುವೀಕ್ಷ ಆಸ್ಪತ್ರೆಯ ಎಲ್ಲ ನರ್ಸ್ ಗಳಿಗೆ ವಿಶ್ವ ದಾದಿಯರ ದಿನದ ಶುಭಾಶಯಗಳನ್ನು ಕೋರಿ ಮಾತನಾಡಿ, ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ತನ್ನದೇ ಕೊಡುಗೆ ನೀಡಿದ ವಿಶ್ವ ವಿಖ್ಯಾತ ನರ್ಸ್, ಫ್ಲಾರೆನ್ಸ್ ನೈಟಿಂಗೇಲ್ ಅವರ ದಿನವನ್ನು ಪ್ರತಿ ವರ್ಷ ದಾದಿಯರ ದಿನವನ್ನಾಗಿ ಆಚರಿಲಾಗುತ್ತಾ ಬರುತ್ತಿದೆ. ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಅವರು ನೀಡಿದ ಕೊಡುಗೆ ಅಪಾರವಾದುದು. ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ‘ಲೇಡಿ ವಿತ್​ ದಿ ಲ್ಯಾಂಪ್’ ಎಂದೂ ಕರೆಯುತ್ತಾರೆ. ಅವರ ಆದರ್ಶ ನಮಗೆ ದಾರಿದೀಪ ಎಂದು ತಿಳಿಸಿದರು.

ಸ್ತ್ರೀ ರೋಗ ತಜ್ಞರಾದ ಡಾ. ನಟರಾಜ್ ಮಾತನಾಡಿ, ಈಗಾಗಲೇ ಆಸ್ಪತ್ರೆಯ ವತಿಯಿಂದ ಉಚಿತ ಅರೋಗ್ಯ ಶಿಬಿರಗಳನ್ನು ಏರ್ಪಡಿಸಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಸುವೀಕ್ಷ ಆಸ್ಪತ್ರೆಗೆ ಬರುವ ಗರ್ಭಿಣಿ ಸ್ತ್ರೀಯರಿಗೆ 9 ತಿಂಗಳ ವರೆಗೂ ಉಚಿತ ಸಮಾಲೋಚನೆ ಇರುತ್ತದೆ. ಹೆರಿಗೆಯ ಖರ್ಚುಗಳು ಅತ್ಯಂತ ಕಡಿಮೆ ದರದಲ್ಲಿ ನೀಡುವ ಮೂಲಕ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದೇವೆ. ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top