ಕುತೂಹಲ ಮೂಡಿಸಿದ ’ಟ್ವೆಂಟಿ ಒನ್ ಅವರ್ಸ್’ ಟ್ರೇಲರ್


ಇತ್ತೀಚೆಗೆ ಚಂದನವನದಲ್ಲಿ ಹೊಸತನದ ಸಿನಿಮಾಗಳು ಹೆಚ್ಚಾಗಿ ರಿಲೀಸ್ ಆಗುತ್ತಿವೆ. ಆ ಸಾಲಿಗೆ ಸದ್ಯ ಡಾಲಿ ಧನಂಜಯ್ ಅಭಿನಯದ ’ಟ್ವೆಂಟಿ ಒನ್ ಅವರ್ಸ್’ ಸಿನಿಮಾ ಸೇರಲಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಈ ಸಿನಿಮಾದಲ್ಲಿ ತಂತ್ರಜ್ಞಾನವೂ ಹೈಲೈಟ್ ಎನ್ನಬಹುದು. ಜಾಹಿರಾತು ವಿಭಾಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಜೈಶಂಕರ್ ಪಂಡಿತ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಅವರು ಆಕ್ಷನ್-ಕಟ್ ಹೇಳಿರುವ ಮೊದಲ ಸಿನಿಮಾ ಎಂಬುದು ವಿಶೇಷ. ’ಟ್ವೆಂಟಿ ಒನ್ ಅವರ್ಸ್’ ಚಿತ್ರ ಇದೇ ಮೇ ೨೦ರಂದು ರಿಲೀಸ್‌ಗೆ ಸಿದ್ಧವಾಗಿದ್ದು, ಕೆ.ಆರ್.ಜಿ ಸ್ಟೂಡಿಯೋಸ್ ಮೂಲಕ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಾಯಕ ಧನಂಜಯ್ ’ನಿನ್ನೆ ಈ ಚಿತ್ರದ ಕುರಿತು ಪೋಸ್ಟ್ ಹಾಕಿದಾಗ, ಯಾವ ಗ್ಯಾಪ್‌ನಲ್ಲಿ ಈ ಸಿನಿಮಾ ಮಾಡಿದಿಯಾ ಗುರು… ಅಂತ ಅಭಿಮಾನಿಗಳು, ಗೆಳೆಯರು ಕೇಳಿದರು. ಮೊದಲ ಲಾಕ್ ಡೌನ್ ನಂತರ ಮಾಡಿರುವ ಸಿನಿಮಾ ಇದು. ಮಲೆಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುತ್ತಾಳೆ. ಆಕೆಯ ಹುಡುಕಾಟದ ಸುತ್ತ ನಡೆಯುವ ಕಥೆಯಿದು. ನಾನು ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕರ್ನಾಟಕ ಹಾಗೂ ಕೇರಳದಲ್ಲಿ ನಡೆಯುವ ಕಥೆಯಾಗಿರುವುದರಿಂದ ಕನ್ನಡ ಹಾಗೂ ಮಲೆಯಾಳಂನಲ್ಲಿ ಸಂಭಾ?ಣೆ ಇರುತ್ತದೆ. ಆದರೆ ಕರ್ನಾಟಕದಲ್ಲಿ ಈ ಚಿತ್ರ ಪೂರ್ತಿ ಕನ್ನಡದ ಸಂಭಾ?ಣೆಯಲ್ಲಿ ಬಿಡುಗಡೆಯಾಗುತ್ತದೆ. ಇಲ್ಲಿ ಬಿಡುಗಡೆಯಾದ ನಂತರ ಕೇರಳದಲ್ಲಿ ತೆರೆ ಕಾಣುತ್ತದೆ. ಇದು ಒಳ್ಳೆಯ ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರ ಇರುವ ತಂಡ. ಬಹಳ ದಿನಗಳ ನಂತರ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವೊಂದರಲ್ಲಿ ನಟಿಸಿದ್ದೇನೆ. ನಿಮ್ಮ ಪ್ರೋತ್ಸಾಹವಿರಲಿ’ ಎಂದು ಹೇಳಿದರು.


ನಂತರ ’ನಾನು ಮೂಲತಃ ಕರ್ನಾಟದವನು. ಆದರೆ ಕೇರಳದಲ್ಲಿದ್ದೀನಿ. ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಖ್ಯಾತ ನಟರು ಅಭಿನಯಿಸಿರುವ ಜಾಹೀರಾತುಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ. ಇಪ್ಪತ್ತೊಂದು ಗಂಟೆಗಳಲ್ಲಿ ನಡೆಯುವ ವಿಶೇ? ಕಥೆ ಹೊಂದಿರುವ ಚಿತ್ರವಿದು. ಧನಂಜಯ್ ನಿರ್ದೇಶಕರ ನಟ. ಅವರ ಜೊತೆ ಕೆಲಸ ಮಾಡಿದ್ದು ಸಂತೋ? ತಂದಿದೆ. ದುರ್ಗಾ ಕೃ?, ಸುದೇವ್ ನಾಯರ್, ರಾಹುಲ್ ಮಾಧವ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನೋಡಿ ಹಾರೈಸಿ’ ಎಂದರು ನಿರ್ದೇಶಕ ಜೈಶಂಕರ್ ಪಂಡಿತ್. ’ನಾನು ಈ ಹಿಂದೆ ’ಓಲ್ಡ್ ಮಾಂಕ್’ ಚಿತ್ರದಲ್ಲಿ ನಟಿಸಿದ್ದೆ. ಈ ಚಿತ್ರದಲ್ಲಿ ಉತ್ತಮ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಧನಂಜಯ್ ಜೊತೆಗೆ ಅಭಿನಯಿಸಿದ್ದು ಖುಷಿಯ ವಿಚಾರವೆಂದರು’ ನಟ ಸುದೇವ್ ನಾಯರ್. ’ನಾನು ಉಡುಪಿಯವನು. ಆದರೆ ಕೇರಳದಲ್ಲಿ ಬೆಳದಿದ್ದು. ಹಿಂದೆ ಟ.ಎನ್.ಸೀತಾರಾಮ್ ಅವರ ’ಕಾಫಿತೋಟ’ದಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರದಲ್ಲಿ ನಟಿಸಿದ್ದೇನೆ. ನಿಮ್ಮ ಪ್ರೋತ್ಸಾಹವಿರಲಿ’ ಎನ್ನುತ್ತಾರೆ ನಟ ರಾಹುಲ್ ಮಾಧವ್.


ಇದೇ ಸಂದರ್ಭದಲ್ಲಿ ನಿರ್ಮಾಪಕರಾದ ಬಾಲಕೃ? ಎನ್.ಎಸ್, ಅಭಿ?ಕ್ ರುದ್ರಮೂರ್ತಿ, ಸುನೀಲ್ ಗೌಡ, ಹಾಗೂ ಪ್ರವೀಣ್ ಮಹದೇವ್ ಸಹ ನಿರ್ಮಾಣದ ಬಗ್ಗೆ ಮಾತನಾಡಿದರು. ರುಪರ್ಟ್ ಫನಾಂಡಿಸ್ ಸಂಗೀತ ನಿರ್ದೇಶನ, ತಿರುನವುಕ್ಕರಸು ಛಾಯಾಗ್ರಹಣ, ರಿಚರ್ಡ್ ಕೆವಿನ್ ಸಂಕಲನ ಹಾಗೂ ಪ್ರತಾಪ್ ಆರ್ ಮೆಂಡನ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಸುಕೃತ್ ವಿ ಹಾಗೂ ಡಿ.ವಿ.ಬಾಲಸುಬ್ರಹ್ಮಣ್ಯ ಸಂಭಾ?ಣೆ ಬರೆದಿದ್ದಾರೆ. ಶೋಭಾ ಅಂಜನಪ್ಪ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

Leave a Comment

Your email address will not be published. Required fields are marked *

Translate »
Scroll to Top