ಮಸ್ಕಿ,ಮಾ,21 : ಪ್ರತಾಪ್ ಗೌಡ ಪಾಟೀಲ್ ಫೌಂಡೇಶನ್ ಮಸ್ಕಿ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಪ್ರಾರಂಬಿಸಲಾಯಿತು ನಂತರ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು ಮಸ್ಕಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು. 20ರಿಂದ 30 ರೂ ಹಣ ಕೊಟ್ಟು ನೀರಿನ ಬಾಟಲ್ ಖರೀದಿ ಮಾಡುವಷ್ಟು ಶಕ್ತಿ ಸಾಮಾನ್ಯ ಜನರಿಗೆಇರುವುದಿಲ್ಲ ಅನೇಕ ರೈತರು ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ಒಂದು ಒಳ್ಳೆಯ ಉಚಿತವಾದ ಶುದ್ಧ ಕುಡಿಯುವ ನೀರು ಬೇಸಿಗೆಯಲ್ಲಿ ಹಳ್ಳಿಯಿಂದ ಪಟ್ಟಣಕ್ಕೆ ಬರುವಂತಹ ಜನರಿಗೆ ಬೇಸಿಗೆಯ ನೀರಿನ ದಾಹವನ್ನ ನೀಗಿಸುವಂತಹ ಕೆಲಸ ಮಾಡಿಕೊಂಡು ಬಂದಿದ್ದೇವೆ.ಇನ್ನೂ ಅನೇಕ ಸಮಾಜಮುಖಿ ಕೆಲಸ ಮಾಡುತ್ತೇವೆ ಎಂದರು.
ಪ್ರತಾಪ್ ಗೌಡ ಪಾಟೀಲ್ ಫೌಂಡೇಶನ್ ಮಸ್ಕಿ ವತಿಯಿಂದ ಮಸ್ಕಿ ನಗರದ ಪ್ರಮುಖ ಸ್ಥಳಗಳಲ್ಲಿ ನೀರಿನ ಅರವಟ್ಟಿಗೆ ಮಾಡುವುದರ ಮೂಲಕ ಜನರಿಗೆ ನೀರಿನ ದಾಹ ತೀರಿಸುವಂತಹ ಪುಣ್ಯದ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎಂದು ಮೌನೇಶ ನಾಯಕ್ ಹೇಳಿದರು. ಇಂದು ನಗರದ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ, ಅಶೋಕ್ ವೃತ್ತದ ಪಕ್ಕದಲ್ಲಿ ಹಾಗೂ ವಾಲ್ಮೀಕಿ ವೃತ್ತ ಹತ್ತಿರ ಪ್ರತಾಪ್ ಗೌಡ ಪಾಟೀಲ್ ಅವರು ಅರವಟ್ಟಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು ಹಾಗೂ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ,ಡಾ. ಬಿಎಚ್ ದಿವಟರ, ದೊಡ್ಡಪ್ಪ ಕಡಬೂರು, ಚೇತನ್ ಪಾಟೀಲ್, ಮಲ್ಲಣ್ಣ ಬ್ಯಾಳಿ, ಡಾ ಸಂತೋಷ ಪತ್ತಾರ, ಸುರೇಶ ವಿಶ್ವಕರ್ಮ, ಕಾಳಪ್ಪವಿಶ್ವಕರ್ಮ, ಮಲ್ಲಯ್ಯ ನಾಯಕ್ ಮಲ್ಕಾಪುರ್, ಮೌನೇಶ್ ನಾಯಕ್, ಬಸವರಾಜ ಬುಕ್ಕಣ್ಣ, ಡಾ.ನಾಗನಗೌಡ,ಮಸ್ಕಿಯ ಪ್ರಮುಖ ಹಿರಿಯರು ಮತ್ತು ಪುರಸಭೆ ಸದಸ್ಯರು ಹಾಗೂ ಶ್ರೀ ಪ್ರತಾಪಗೌಡ ಪಾಟೀಲ್ ಫೌಂಡೇಶನ್ ಅಧ್ಯಕ್ಷರಾದ ಪ್ರಸನ್ನ ಪಾಟೀಲ್ ಹಾಗೂ ಫೌಂಡೇಶನ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.