ವೈಭವದ ಮೈಸೂರು ದಸರಾ ಕ್ರೀಡಾಕೂಟ ಇಡೀ ದೇಶಕ್ಕೆ ಮಾದರಿಯಾಗಿದೆ :

10 ದಿನಗಳ ಕ್ರೀಡಾಕೂಟದಲ್ಲಿ ರಾಜ್ಯದ 6000 ಕ್ಕೂ ಹೆಚ್ಚು ಸಾವಿರ ಕ್ರೀಡಾಪಟು ಗಳು ಭಾಗಿ

ಮೈಸೂರು: ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳ ವೈಭವದ ಸಂಕೇತ ಈ ನಮ್ಮ ಮೈಸೂರು ದಸರಾ ದೊಡ್ಡ ಹಬ್ಬವಾಗಿದೆ, ನಾಡಹಬ್ಬ ದಸರಾ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ದಸರಾ ಕ್ರೀಡಾಕೂಟಕ್ಕೆ ವಿಶೇಷ ಗೌರವ ದೊರೆಯುತ್ತಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ತಿಳಿಸಿದರು

 

ಬುಧವಾರ ಮೈಸೂರು ನಗರದ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟ & ಸಿಎಂ ಕಪ್ 2023 ರ ಉದ್ಘಾಟನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಅವರು ಉದ್ಘಾಟಿಸಿದರು.

ಅಕ್ಟೋಬರ್ 11 ರಿಂದ 21 ರವರೆಗೆ 10 ದಿನಗಳ ಕಾಲ ಇದೇ ಮೊದಲ ಭಾರಿಗೆ ಹಮ್ಮಿಕೊಂಡಿರುವ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು ಆರು ಸಾವಿರಕ್ಕೂ ಹೆಚ್ಚು ಕ್ರೀಡಾಪಟು ಪಾಲ್ಗೊಂಡು 35 ವೈವಿಧ್ಯಮಯ ಕ್ರೀಡೆಗಳಲ್ಲಿ ಪಾಲ್ಗೊಂಡು ವಿಜೇತರಾಗಿ ನಗದು ಬಹುಮಾನ ಪಡೆಯುವುದು ದಸರಾ ಕ್ರೀಡಾಕೂಟದ ಪ್ರಮುಖ ಆಕರ್ಷಣೆ ಆಗಿದೆ.

 

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರೀಡಾ ಸಚಿವ ಬಿ.ನಾಗೇಂದ್ರ ರವರು ಸದೃಢ ದೇಹ ಸದೃಢ ಮನಸ್ಸನ್ನು ಹೊಂದಿರುತ್ತದೆ ಎಂಬ ವಿವೇಕವಾಣಿಯಂತೆ ಯುವಜನರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕ್ರೀಡೆಗಳು ನಮ್ಮ ನಾಡಿನ ಸರ್ವಾಗೀಣ ಭವಿಷ್ಯವನ್ನು ರೂಪಿಸುವಲ್ಲಿ ಹಾಗೂ ಸದೃಢ ಮತ್ತು ಸಶಕ್ತ ರಾಷ್ಟ್ರವನ್ನು ನಿರ್ಮಿಸುವಲ್ಲಿ ಯುವ ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇನ್ನು ವಿಶೇಷ ನನಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜವಾಬ್ದಾರಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರಿಗೆ ಅನಂತ ಧನ್ಯವಾದಗಳು ತಿಳಿಸುತ್ತೇನೆ. ತೊಂಬತ್ತರ ದಶಕದಲ್ಲಿ ಆರಂಭವಾದ ರಾಜ್ಯಮಟ್ಟದ ದಸರಾ ಕ್ರೀಡಾಕೂಟವು ಕ್ರಮೇಣವಾಗಿ ವಿಕಾಸವಾಗುತ್ತ ಇಂದು ಇಡೀ ದೇಶಕ್ಕೆ ಮಾದರಿ ಮೈಸೂರು ದಸರಾ ಕ್ರೀಡಾಕೂಟವಾಗಿದೆ.

ಇತ್ತೀಚೆಗೆ ನಡೆದ ಚೀನಾದಲ್ಲಿ ನಡೆದ  ಏಷ್ಯಾನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಸಾಧನೆ ವಿಶೇಷವಾಗಿದ್ದು, ಕರ್ನಾಟಕದ ರಾಜೇಶ್ವರಿ ಗಾಯಕವಾಡ, ರೋಹನ್ ಬೋಪಣ್ಣ, ದಿವ್ಯಾ, ಆದಿತಿ ಅಶೋಕ್, ಮಿಥುನ್ ಮಂಜುನಾಥ್, ಸಾಯಿ ಪ್ರತೀಕ್ ಇನ್ನಿತರ ಕ್ರೀಡಾಪಟು ಪಡೆದ ಪದಕಗಳು ನಮ್ಮೆಲ್ಲರಿಗೆ ಸ್ಫೂರ್ತಿಯ ಚಿಲುಮೆಯಾಗಿದೆ ರಾಜ್ಯದ ಕ್ರೀಡಾಪಟುಗಳ ನಮ್ಮ ಸರ್ಕಾರ ಸದಾ ಜೊತೆಗಿದ್ದು ಸಹಕಾರ ನೀಡುತ್ತೆ ಎಂದರು.

 

 ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಡಾ.ಕೆ. ಗೋವಿಂದರಾಜ್ ಅವರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ತನ್ವಿರ್ ಸೇಠ್ ಅವರು,

ಸ್ಥಳೀಯ ಶಾಸಕರಾದ ಹರೀಶ್ ಗೌಡ ಅವರು, ದರ್ಶನ್ ದೃವನಾರಾಯಣ್ ಅವರು, ಶ್ರೀವತ್ಸ ಅವರು, ಎಂ.ಎಲ್.ಸಿ ಮಂಜೇಗೌಡ ಅವರು, ಉಪ ಮಹಾಪೌರರಾದ ಡಾ. ರೂಪ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಎನ್.ಮಂಜುನಾಥ್ ಪ್ರಸಾದ್ ಅವರು, ಆಯುಕ್ತರಾದ ಶಶಿಕುಮಾರ್ ಅವರು, ಉಪ ನಿರ್ದೇಶಕರಾದ ಜಿತೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top