ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಒಬ್ಬ ಜನ ಸೇವೆಗೆ ಪಣ ತೊಟ್ಟು ನಿಂತಿದ್ದು, ಎಬಿಡಿ ಸಂಸ್ಥೆ ರಾಜೀವ್ ಗೌಡ ಕ್ಷೇತ್ರದ ಜನತೆಗೆ ಅನುಕೂಲವಾಗಲೆಂದು ಕ್ಷೇತ್ರಕ್ಕೆ 10 ಆಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ. ಶಿಡ್ಲಘಟ್ಟ ರೇಷ್ಮೆ ನಾಡು ಎಂದು ಹೆಸರುವಾಸಿಯಾಗಿರುವ ಜನರ ಸೇವೆಗೆಂದು ಆಂಬುಲೆನ್ಸ್ ಬೇಕಾದರೆ ನಂಬರ್ ಗೆ ಕರೆ ಮಾಡಿ ಎಂದು ಹೇಳುವ ರಾಜೀವ್ ಗೌಡ ಈ ದಿನ ಆಂಬುಲೆನ್ಸ್ ಸೇವೆ ಮರೀಚಿಕೆಯಾಗಿದೆ.
ಸಮಾಜ ಸೇವಕರೊಬ್ಬರು ಸಮಾಜ ಸೇವೆಗಾಗಿ ಹತ್ತು ಆಂಬ್ಯುಲೆನ್ಸ್ ಕೊಡುಗೆ ನೀಡಿ ರಾಜಕೀಯ ಪ್ರಚಾರಕ್ಕಾಗಿ ಜನರ ಮೆಚ್ಚುಗೆಗೆ ಟುಲು ಭರವಸೆಗಳನ್ನು ನೀಡಿ ಜನರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ. ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಂತಾಮಣಿ ತಾಲೂಕಿನ ಕೈವಾರದ ಸಮೀಪದ ಮಾರಪ್ಪನಹಳ್ಳಿ ಗ್ರಾಮದ ನಿವಾಸಿ ಡಯಾಲಿಸಿಸ್ ಆರೋಗ್ಯದ ಸಮಸ್ಯೆ ಉಸಿರಾಟದ ಸಮಸ್ಯೆ ಬಳಲುತ್ತಿದ್ದ ವ್ಯಕ್ತಿಗೆ ಆಂಬುಲೆನ್ಸ್ ಅವಶ್ಯಕತೆಯಿಂದ ಎಬಿಡಿ ಕಚೇರಿಗೆ ಕರೆ ಮಾಡಿದರೆ ಶಿಡ್ಲಘಟ್ಟ ಕ್ಷೇತ್ರಕ್ಕೆ ಸೀಮಿತ ಅಷ್ಟೇ ಎಂದು ಹೇಳಿ ಬೇರೆ ಕ್ಷೇತ್ರಕ್ಕೆ ಆಂಬುಲೆನ್ಸ್ ಕಳಿಸಲಾಗುವುದಿಲ್ಲ ಎಂದು ಎಬಿಡಿ ಸಂಸ್ಥೆ ಕಚೇರಿಯ ಸಿಬ್ಬಂದಿ ಧನುಶ್ರೀ ಬೇಕಾಬಿಟ್ಟಿ ಉತ್ತರ ನೀಡಿದರು.
ರೋಗಿ ಅಂಬ್ಯುಲೆನ್ಸ್ ಇಲ್ದೆ ಪರದಾಡುತ್ತಿದ್ರು ಆರೋಗ್ಯದ ಬಗ್ಗೆ ಕಾಳಜಿ ಇಲ್ಲ ಜನರ ನೆರೆವಿಗೆ ಧಾವಿಸಿ ಆಂಬುಲೆನ್ಸ್ ನೆಪದಲ್ಲಿ ಹಾಗೂ ಕಚೇರಿಯ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಮುಂದೆ ಇಟ್ಟುಕೊಂಡು ರಾಜಕೀಯ ಲಾಭ ಪಡೆಯುತ್ತಿದ್ದಾರೆ ರಾಜೀವ್ ಗೌಡ ದಿನದ 24 ಗಂಟೆಯೂ ನಿರಂತರ 10 ಆಂಬ್ಯುಲೆನ್ಸ್ ಸೇವೆ ಸಲ್ಲಿಸಲಿದ್ದು ಇದರ ಸದುಪಯೋಗವನ್ನ ಜನರು ಪಡೆದುಕೊಳ್ಳಬೇಕು ಅಂತಿದ್ದಾರೆ. ಸಾರ್ವಜನಿಕರ ಆಸ್ಪತ್ರೆಗೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಜನರು ಆರೋಗ್ಯದ ಸಮಸ್ಯೆಗೆ ಬರುತ್ತಿರುತ್ತಾರೆ ಆದರೆ ಈ ಆಸಾಮಿ ಸಮಾಜಸೇವೆಯ ನೆಪದಲ್ಲಿ ಕ್ಷೇತ್ರಕ್ಕೆ ಮಾತ್ರ ಸೀಮಿತ ಇಟ್ಟಿರುವ ಆಂಬುಲೆನ್ಸ್ ಗಳು ಬಡಕುಟುಂಬಗಳ ಜೊತೆ ಚೆಲ್ಲಾಟವಾಡುತ್ತಿರುವ ಎಬಿಡಿ ಸಂಸ್ಥೆ.
ಇತ್ತ ಹಳ್ಳಿಗಳಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಹೆಚ್ಚಾಗುತ್ತಿದ್ದು, ರೋಗಿಗಳು ಆಸ್ವತ್ರೆ ಬರಲು ಸಾಧ್ಯವಾಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಮಧ್ಯೆ ಸಂಕಷ್ಟ ಸಂದರ್ಭದಲ್ಲಿ ಸಮಾಜಸೇವೆಗೆ ಬಂದ ರಾಜೀವ್ ಗೌಡ… ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಬಾರದು ಅಂಬುಲೆನ್ಸ್ ಸೇವೆ ಆದರೆ ಹೊರಜಿಲ್ಲೆಗಳಿಂದ ಬಂದವರಿಗೂ ಅನುಕೂಲವಾಗಬೇಕು ಎಬಿಡಿ ಗ್ರೂಪ್ ಕಚೇರಿಯ ಸಿಬ್ಬಂದಿ ಧನುಶ್ರೀ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೆ ಬೇಕಾಬಿಟ್ಟಿ ಮಾತನಾಡಿರುವುದು ಖಂಡನಿಯ ಅದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೂ ಸಮಾಜ ಸೇವಕ ಕಾದುನೋಡಬೇಕಾಗಿದೆ…
ಬೇಕಾಬಿಟ್ಟಿ ಉತ್ತರ ನೀಡಿದ ಎಬಿಡಿ ಸಂಸ್ಥೆ ಸಿಬ್ಬಂದಿ ಧನುಶ್ರೀ : ಚಿಂತಾಮಣಿ ತಾಲ್ಲೂಕಿನ ಕೈವಾರ ಸಮೀಪದ ಮಾರಪ್ಪನಹಳ್ಳಿ ಗ್ರಾಮದ ನಿವಾಸಿಯಾದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿದ್ದಾರೆ ಆದರೆ ಅವರ ಆರೋಗ್ಯದ ಸಮಸ್ಯೆ ಹೆಚ್ಚುತ್ತಿದೆ ವೈದ್ಯರು ಸಲಹೆ ಯಂತೆ ಬೆಂಗಳೂರು ಆಸ್ಪತ್ರೆಗೆ ರವಾನಿಸಬೇಕಿತ್ತು. ಎಬಿಡಿ ಕಚೇರಿಗೆ ಆಂಬುಲೆನ್ಸ್ ಗೆ ಕರೆ ಮಾಡಿದರೆ ಅವರ ಸಿಬ್ಬಂದಿ ಧನುಶ್ರೀ ಆರೈಕೆ ಉತ್ತರ ನೀಡಿ ಶಿಡ್ಲಘಟ್ಟ ಕ್ಷೇತ್ರಕ್ಕೆ ಆಂಬುಲೆನ್ಸ್ ಮಾತ್ರ ಸೇವೆ ಬೇರೆ ಕ್ಷೇತ್ರಕ್ಕೆ ಆಂಬುಲೆನ್ಸ್ ಕೊಡಲಾಗುವುದಿಲ್ಲ ಎಂದು ಉತ್ತರ ನೀಡಿದರು.”