ಬೆಂಗಳೂರು : ಗೃಹ ರಕ್ಷಣಾ ಇಲಾಖೆ ಅತ್ಯಂತ ಶಕ್ತಿಯುತವಾಗಿ ಹೊರ ಹೊಮ್ಮಿದೆ. ಬಜೆಟ್‌ನಲ್ಲಿ ಆಡಳಿತ ಅನುಮೋದನೆ ದೊರೆತಿದೆ ಹಾಗಾಗಿ ಸಾಕಷ್ಟು ವಾಹನ ಖರೀದಿ ಮಾಡಲಾಗಿದೆ. ಅಗ್ನಿ ಅವಘಡ ಆದಾಗ ತುರ್ತಾಗಿ ಹೋಗಿ ಅದನ್ನ ನಂದಿಸಬೇಕಿದೆ ಕೇವಲ ಅಗ್ನಿ ಮಾತ್ರವಲ್ಲದೆ, ಜಲ ಸಮಸ್ಯೆ ಆದಾಗಲೂ ಕಾರ್ಯಕ್ಷಮತೆ ಮಾಡಲಾಗ್ತಿದೆ. ಮಲ್ಟಿ ಸ್ಟೋರೇಜ್ ಕಟ್ಟಡಗಳಲ್ಲಿ ಅಗ್ನಿ ಅವಘಡ ಆದಾಗ ಕೂಡ ಆರಿಸುವ ಕೆಲಸ ಮಾಡಲಾಗ್ತಿದೆ.
ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ ಅವರಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗ್ತಿದೆ. ಎಲ್ಲಾ ರೀತಿಯಲ್ಲಿ ಈ ವಿಭಾಗಕ್ಕೆ ಅನುಕೂಲ ಮಾಡಿಕೊಡಲಾಗ್ತಿದೆ. ಜನ ತಮ್ಮ ಆಸ್ತಿ ಪಾಸ್ತಿ ಉಳಿಸಿಕೊಳ್ಳಲು ಅಗ್ನಿ ಶಾಮಕ ಬಳಕೆ ಮಾಡಿಕೊಳ್ಳಬಹುದು. ಕಾರ್ಖಾನೆ ಇರೋ ಕಡೆ ಹೆಚ್ಚು ಅಗ್ನಿ ಶಾಮಕ ಠಾಣೆ ತೆರೆಯಲಾಗ್ತಿದೆ. ಬೆಂಕಿ ನಂದಿಸುವ ಕಾರ್ಯಕ್ರಮ ಮಾಡೋ ಮೂಲಕ, ಸಂಸ್ಥೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಗ್ತಿದೆ. ಬೊಮ್ಮಾಯಿ ಅವರ ಸರ್ಕಾರ ಅನೇಕ ರೀತಿ ಸಹಕಾರಿಯಾಗಿದೆ. ಅತ್ಯಂತ ಖುಷಿಯಿಂದ ವಾಹನಗಳಿಗೆ ಚಾಲನೆ ನೀಡ್ತಿದ್ದೇನೆ.