ಸಿಪಿಎ ವಿಶ್ವಾದ್ಯಂತ ಚೈತನ್ಯಶೀಲ ಶಕ್ತಿಯಾಗಲು ಅನುವು ಮಾಡಿಕೊಟ್ಟಿದೆ

ಬೆಳಗಾವಿ, ಡಿ. 23: ಕಾಮನ್‌ ವೆಲ್ತ್ ಸಂಸದೀಯ ಸಂಘಟನೆ(ಸಿಪಿಎ) ಸಂಸದೀಯ ಪ್ರಜಾಪ್ರಭುತ್ವ ಆಳವಾದ ಬೇರು ಬಿಡಲು ಮತ್ತು ವಿಶ್ವಾದ್ಯಂತ ಚೈತನ್ಯಶೀಲ ಶಕ್ತಿಯಾಗಲು ಅನುವು ಮಾಡಿಕೊಟ್ಟಿದೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಬುಧವಾರ ಸಂಜೆ ಸುವರ್ಣ ವಿಧಾನಸೌಧದ ರಾಜ್ಯ ವಿಧಾನಮಂಡಲದ ಕೇಂದ್ರ ಸಭಾಂಗಣದಲ್ಲಿ ನಡೆದ ಸಿಪಿಎ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಕಾಗೇರಿ, ಸಿಪಿಎ ತನ್ನ ಎಲ್ಲಾ ಸಮ್ಮೇಳನಗಳಲ್ಲಿ ಶಾಸಕರ ಸಾಮರ್ಥ್ಯ ವರ್ಧನೆ, ಬಜೆಟ್ ಪ್ರಸ್ತಾವನೆಗಳು ಮತ್ತು ಪರಿಸರ ಸಮಸ್ಯೆಗಳಂತಹ ಮಹತ್ವದ ವಿಷಯಗಳನ್ನು ಕೈಗೆತ್ತಿಕೊಂಡು ವಿಶ್ಲೇಷಿಸುತ್ತಿದೆ. “ಪ್ರತಿ ವಿಷಯ ಮತ್ತು ಪ್ರತಿ ಚರ್ಚೆಯು ಅರ್ಥಪೂರ್ಣವಾಗಿದೆ ಮತ್ತು ಅದರ ಫಲಿತಾಂಶವು ಸಮಗ್ರವಾಗಿದೆ” ಎಂದೂ ಸ್ಪೀಕರ್ ಹೇಳಿದರು. ಉಗಾಂಡಾದಲ್ಲಿ ನಡೆದ ಸಿಪಿಎ ಸಮ್ಮೇಳನದ ಸಮಯದಲ್ಲಿ ಆಯಾ ದೇಶಗಳ ಸಾರ್ವಭೌಮತ್ವವನ್ನು ರಕ್ಷಿಸುವುದು ಒಂದು ವಿಷಯವಾಗಿತ್ತು.

ಕೆಲವು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ದೇಶದ ಉಗಾಂಡಾದಲ್ಲಿ ನಡೆದ ಸಿಪಿಎ ಸಮ್ಮೇಳನದಲ್ಲಿ ನಾನು ಮಾತನಾಡಿ, ನನ್ನ ದೇಶವನ್ನು ಸಮರ್ಥಿಸಿಕೊಂಡಿದ್ದೆ ಎಂದು ಶ್ರೀ ಕಾಗೇರಿ ಹೇಳಿದರು. ಸಿಪಿಎಯ ಚಟುವಟಿಕೆಗಳಲ್ಲಿ ವಿಶೇಷವಾಗಿ ಚರ್ಚಾ ಕೌಶಲ್ಯವನ್ನು ಹೆಚ್ಚಿಸುವ ಮತ್ತು ದೀರ್ಘಕಾಲೀನ, ದೀರ್ಘ ಬಾಳಿಕೆ ಬರುವ ಸುಸ್ಥಿರ ಪರಿಹಾರಗಳೊಂದಿಗೆ ಸಾಮಾನ್ಯ ಜನರ ಸಮಸ್ಯೆಗಳನ್ನು ವಿಶ್ಲೇಷಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುವಂತೆ ಸದಸ್ಯರಿಗೆ ಶ್ರೀ ಕಾಗೇರಿ ಕರೆ ನೀಡಿದರು. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಸಚಿವರುಗಳಾದ ಶ್ರೀ ಜೆ.ಸಿ.ಮಾಧುಸ್ವಾಮಿ ಮತ್ತು ಶ್ರೀ ಕೋಟಾ ಶ್ರೀನಿವಾಸಪೂಜಾರಿ, ವಿಧಾನಮಂಡಲದ ಉಭಯ ಸದನಗಳ ಕಾರ್ಯದರ್ಶಿಗಳು ಮತ್ತು ಹಲವಾರು ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.


Leave a Comment

Your email address will not be published. Required fields are marked *

Translate »
Scroll to Top