ನಿವೇಶನ ನೀಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡೇ ಇಲ್ಲ

ದೇವನಹಳ್ಳಿ,ಜನವರಿ,28 : ಕೊರೊನಾ ಸಂದರ್ಭದಲ್ಲೂ ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದ ಸರ್ಕಾರ ಇನ್ನು ಅಭಿವೃದ್ಧಿ ಕಾರ್ಯಕ್ರಮಗಳ ಕಡೆ ಗಮನ ಹರಿಸುತ್ತದೆಯೇ ಎಂದು ಬಿಜೆಪಿ ಸರ್ಕಾರದ ಕಾರ್ಯ ವೈಖರಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಸ್. ರವಿ ಟೀಕಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಸಮೀಪದ ನಾರಾಯಣಪುರ ಗ್ರಾಮದಲ್ಲಿ ಪಂಚಾಯತಿ ಉಪಕೇಂದ್ರದ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಇದ್ದಾಗಲಷ್ಟೇ ಜನರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ನೀಡಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿ, ಜನರಿಗೆ ನೀಡಿತ್ತು.

ನಿರ್ಮಾಣ ವೆಚ್ಚ ಅಧಿಕ ಇರುವ ಸಮಯದಲ್ಲಿ ಜನರಿಗೆ ಮನೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುತ್ತಿದ್ದು, ಈ ಯೋಜನೆ ಪೂರ್ಣವಾಗುವುದು ಸಂಶಯವಿದೆ. ಐಒಸಿ ಅವರ ಸಹಯೋಗದಿಂದ ಸಿಆರ್ ಎಫ್ ಫಂಡ್ ಇಂದ ಹಾಗೂ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರ ಸಹಯೋಗದೊಂದಿಗೆ ಗ್ರಾಮಕ್ಕೆ ಸುಸಜ್ಜಿತವಾದ ಶಾಲಾ ಕಟ್ಟಡದ ಅವಶ್ಯಕತೆಯನ್ನು ಗುರುತಿಸಿದಾ್, ಐಒಸಿ ಯವರು ಒಂದು ಕೋಟಿ 18 ಲಕ್ಷಕ್ಕೂ ಹೆಚ್ಚು ಹಣವನ್ನು ಅವರ ಸಿ ಆರ್ ಎಫ್ ಫಂಡ್ ನಿಂದ ಹಳೆ ಕಟ್ಟಡ ಕೆಡವಿ ಎಂಟು ಕೊಠಡಿಗಳ ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಜೊತೆಗೆ ಪಂಚಾಯತಿ ಉಪಕೇಂದ್ರಕ್ಕೂ ಶಂಕುಸ್ಥಾಪನೆ ನೆರವೇರಿದೆ. ವಿಧಾನ ಪರಿಷತ್ ಸದಸ್ಯನಾಗಿ ನನ್ನ ಅನುದಾನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ತಿಳಿಸಿದರು.

ಸೋಮಣ್ಣ ದಕ್ಷ ಸಚಿವ: ವಸತಿ ಸಚಿವರಾಗಿದ್ದಾಗ ಸೋಮಣ್ಣನವರು ನಿರ್ಗತಿಕರಿಗೆ ಮನೆ ಹಂಚುವ ಕೆಲಸ ಮಾಡಿದ್ದು, ಈಗ ಅವರಿಗೂ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ. ಅವರ ಸರ್ಕಾರದಲ್ಲಿ ಅವರಿಗೇ ಬೆಂಬಲವಿಲ್ಲ ಎನಿಸುತ್ತದೆ. ಬಿಜೆಪಿಗೂ ಅಂತ್ಯ ಸಮೀಪಿಸುತ್ತಿದೆ: ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರದ ಅನಾವರಣ, ಇದರಿಂದ ಬಿಜೆಪಿಯ ಅವನತಿಯ ಕಾಲ ದಿನೇ ದಿನೇ ಸಮೀಪಿಸುತ್ತಿದೆ. ಉಪ ಚುನಾವಣೆಗಳು, ಸ್ಥಳೀಯ ಚುನಾವಣೆಗಳ ಫಲಿತಾಂಶವೇ ಇದಕ್ಕೆ ಸಾಕ್ಷಿ. ಬಿಜೆಪಿ ಕ್ಷೀಣಿಸಿ, ಕಾಂಗ್ರೆಸ್ ಸಂಘಟಿತವಾಗುತ್ತಿದೆ: ಮುಂದಿನ ದಿನಗಳಲ್ಲಿ ಬಿಜೆಪಿ ಇಂದ ಕಾಂಗ್ರೆಸ್ ಗೆ ವಲಸೆ ಬರುವ ಸಾಧ್ಯತೆ ಇದೆ. ಇದು ಸಹಜ. ಕಾಂಗ್ರೆಸ್ ತತ್ವ ಸಿದ್ಧಾಂತ ಕ್ಕೆ ಒಪ್ಪಿ ಬರುವವರನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ನಮ್ಮ ಹಿರಿಯ ನಾಯಕರೂ ಹೇಳಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ, ಮುನಿನರಸಿಂಹಯ್ಯ, ಜಿ.ಪಂ ಮಾಜಿ ಸದಸ್ಯ ಲಕ್ಷ್ಮೀನಾರಾಯಣಪ್ಪ,ಕೆ.ಸಿ.ಮಂಜುನಾಥ್, ಕೆ.ಪಿ.ಸಿ.ಸಿ ಕಾರ್ಯದರ್ಶಿ ಎ.ಸಿ ಶ್ರೀನಿವಾಸ್,ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ಶಾಂತಕುಮಾರ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಚೇತನ್ ಗೌಡ, ರಾಜಣ್ಣ, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಎ.ಪಿ.ಎಂ.ಸಿ ಉಪಾಧ್ಯಕ್ಷ ಸುಧಾಕರ್,ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಚೈತ್ರ ವೀರೇಗೌಡ, ಗೊಡ್ಲುಮುದ್ದೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಅನಂದಮ್ಮ, ಮತ್ತಿತರ ಮುಖಂಡರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top