ಮಲ್ಲಮ್ಮರವರ ಜೀವನ ಚರಿತ್ರೆಯೇ ವಚನಗಳಾಗಿವೆ: ಎನ್.ಉದಯ ಕುಮಾರ್

ಬೆಂಗಳೂರು : ಪುರಾಣದ ಪುಣ್ಯಕಥೆಗಳು, ಪವಾಡಗಳು, ಶಿವನ ಆರಾಧನೆಯನ್ನು ಬಾಲ್ಯದಿಂದಲೂ ಮೈಗೂಡಿಸಿಕೊಂಡು ಬೆಳೆದವರು ಮಲ್ಲಮ್ಮನವರು. ಮಹಾಸಾಧ್ವಿ ಶಿವಶರಣೆ ಮಲ್ಲಮ್ಮ ನವರು ವಚನಗಳನ್ನು ಬರೆಯಲಿಲ್ಲ ಅಥವಾ ಹೇಳಲಿಲ್ಲ ಮಲ್ಲಮ್ಮನವರ ಜೀವನವೇ ಒಂದು ಅಪೂರ್ವವಾದ ವಚನವಾಗಿದೆ ಎಂದು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್.ಉದಯ ಕುಮಾರ್ ತಿಳಿಸಿದರು. ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರವರ ಜಯಂತಿಯನ್ನು ಆಚರಣೆಮಾಡಿ ಅವರು ಮಾತನಾಡಿದರು. ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಗೆ ಸೇರಿದ ರಾಮಪುರದ ರಾಮರೆಡ್ಡಿ ಮತ್ತು ಗೌರಮ್ಮ ದಂಪತಿಗಳಿಗೆ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಸ್ಮರಣೆಯಿಂದ ಜನಿಸಿದ ಹೆಣ್ಣು ಮಗುವೇ ಹೇಮರೆಡ್ಡಿ ಮಲ್ಲಮ್ಮ ನವರು ಎಂದು ಹೇಳಿದರು.

ಮಲ್ಲಮನವರು ದಿನೇ ದಿನೇ ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ತಮ್ಮ ಮನಸ್ಥಿತಿ ಎಲ್ಲವೂ ಬದಲಾಗಿ ಮಲ್ಲಿಕಾರ್ಜುನ ಸ್ವಾಮಿಯ ಭಕ್ತರಾಗಿ, ಆರಾಧ್ಯದೈವರಾಗಿ ಬೆಳೆದರು ಎಂದರು. ನಂತರದಲ್ಲಿ ಮಲ್ಲಮ್ಮ ನವರು ಸಾಂಸಾರಿಕ ಜೀವನದಲ್ಲಿ ತೊಡಗಿಕೊಂಡು ಅಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವಂತಹ ಸ್ಥಿತಿ ಎದುರಾಗುತ್ತದೆ.ಮಲ್ಲಿಕಾರ್ಜುನ ಆರಾಧನೆಯಿಂದ ಎಲ್ಲಾ ಸಮಸ್ಯೆಗಳಿಂದ ಪಾರಾಗಿ ಇತರರಿಗೆ ಮಾದರಿಯಾಗಿ ಬದುಕಿದ ಅವರ ಜೀವನದ ಹಾದಿ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾನಗರ ಕೋಶಾಭಿವೃದ್ದಿ ಕಚೇರಿಯ ವ್ಯವಸ್ಥಾಪಕರಾದ ಪಿ.ಸೌಜನ್ಯಶೀಲಾ, ಜಿಲ್ಲಾಧಿಕಾರಿಗಳ ಕಚೇರಿಯ ಎಫ್.ಡಿ.ಸಿ ರಾಜಕುಮಾರ್, ಮುಖಂಡರಾದ ಹಲಗೂರು ಕುಮಾರ್, ಶಿವಪ್ರಸಾದ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು, ಹಾಗೂ ಸಮಾಜದ ಮುಖಂಡರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top