ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ- ಜೆಡಿಎಸ್ ನಾಯಕರ ಉದ್ದೇಶ ಈಡೇರಲ್ಲ: ಸಚಿವ ಶರಣ್ ಪ್ರಕಾಶ್ ಪಾಟೀಲ್

ಬಿಜೆಪಿ- ಜೆಡಿಎಸ್ ನಿಂದ  ಆಧಾರಹಿತ ಆರೋಪ

4 ವರ್ಷದಲ್ಲಿ ಬಿಜೆಪಿಯಿಂದ ರಾಜ್ಯದ ಲೂಟಿ

ಬೆಂಗಳೂರು : ಬಹುಮತ ಹೊಂದಿರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ-ಜೆಡಿಎಸ್ ನಾಯಕರ ಉದ್ದೇಶ ಯಾವುದೇ ಕಾರಣಕ್ಕೂ ಈಡೇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ದೋಸ್ತಿ  ಪಕ್ಷಗಳ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಸೋಮವಾರ ಬೆಂಗಳೂರಿನ ಶಿವಾಜಿನಗರದಲ್ಲಿರುವ  ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು  ಬೌರಿಂಗ್ ಹಾಗೂ ಚರಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರಣ ಕೇಳಿ ನೋಟೀಸ್ ನೀಡಿರುವ ವಿಚಾರವಾಗಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

 

ರಾಜ್ಯದ ಜನತೆ ನಮಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ನೀಡಿದ್ದರು. ಈಗ ನಮ್ಮ ಸರ್ಕಾರ ಅಸ್ಥಿರಗೊಳ್ಳಲಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನವನ್ನು  ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜನತೆಯ ಮುಂದೆ ಮಾಡುವ ಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವೀಯಾಗುವುದಿಲ್ಲ ಎಂದು ವಾಗ್ದಳಿ ನಡೆಸಿದರು. 

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮೂಡಾ) ದಲ್ಲಿ ಹಗರಣ ನಡೆದಿದೆ ಎಂದು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅಷ್ಟಕ್ಕೂ ಮೂಡಾದಲ್ಲಿ  ಹಗರಣ ಏನಾಗಿದೆ?. ಈ ಹಗರಣ ಮಾಡಿದವರು ಯಾರು? ಇದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಹಗರಣವಲ್ಲವೇ?  ಎಂದು ತಿರುಗೇಟು ನೀಡಿದರು.

“ಮೂಡಾದಲ್ಲಿ ನಡೆದಿರುವ ಹಗರಣ ಏನೆಂಬುದನ್ನು ಪಾದಯಾತ್ರೆ ನಡೆಸುತ್ತಿರುವ ಎರಡು ಪಕ್ಷಗಳ ನಾಯಕರು ಹೇಳಬೇಕು. ಹಿಂದೆ ನಾಲ್ಕು ವರ್ಷ ಆಡಳಿತ ನಡೆಸಿದ ಬಿಜೆಪಿ ಲೂಟಿ ಹೊಡೆದಿದೆ. ಪ್ರತಿಯೊಂದು ಇಲಾಖೆಯಲ್ಲೂ ನೂರಾರು ಕೋಟಿ ಹಗರಣ ನಡೆಸಿರುವ ಇವರು ಈಗ ಯಾವ ಮುಖ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ” ಎಂಧು ಪಾಟೀಲ್ ಪ್ರಶ್ನೆಸಿದರು.

 

ರಾಜ್ಯದ ಜನತೆ ಬಿಜೆಪಿ  ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ. ಸದ್ಯಕ್ಕೆ ಬಿಜೆಪಿ ಸ್ಥಿತಿ ನೀರಿನಿಂದ  ತಗೆದ ಮೀನಿನ ಹಾಗಾಗಿದೆ. ಅಸ್ಥಿತ್ವ ಉಳಿಸಿಕೊಳ್ಳಲು ಪಾದಯಾತ್ರೆ ನಾಟಕ  ಮಾಡುತ್ತಿದ್ದಾರೆ. ಇದನ್ನು ಕನ್ನಡಿಗರು ಮುರ್ಖರಲ್ಲ. ನೀವು ಎಷ್ಟೇ ಪಾದಯಾತ್ರೆ ಮಾಡಿದರೂ ಜನತೆ ನಂಬುವ ಸ್ಥಿತಿಯಲ್ಲಿ ಇಲ್ಲ.ಮುಂಬರುವ ಯಾವುದೇ ಚುನಾವಣೆಗಳಲ್ಲಿ ಈ ಎರಡೂ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪಾಟೀಲ್ ಎಚ್ಚರಿಕೆ ಕೊಟ್ಟರು. 

ಇನ್ನು ಜೆಡಿಎಸ್ ವಿರುದ್ದವೂ ಕಿಡಿಕಾರಿದ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು, ಸರ್ಕಾರ ಕೆಡವಿದವರ ಜೊತೆ ಜೆಡಿಎಸ್ ಹೋಗಿರುವುದು ಅತ್ಯಂತ ನಾಚಿಕೇಡಿನ ಸಂಗತಿ. ನಾವು ಹಿಂದೆ ಆ ಪಕ್ಷಕ್ಕೆ  ಆಶ್ರಯ ಕೊಟ್ಟಿದ್ದೇವು. ವಾಸ್ತವವಾಗಿ  ಜೆಡಿಎಸ್ ನಮಗೆ ಬೆಂಬಲ ನೀಡಬೇಕಿತ್ತು ಎಂದು ಹೇಳಿದರು.

ಜೆಡಿಎಸ್ ನಾಯಕರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ..? ಎಂದು ಪ್ರಶ್ನೆಸಿದ ಅವರು, ಸರ್ಕಾರ ಕೆಡವಿದವರ ಜೊತೆ ಸರ್ಕಾರ ಮಾಡಲು ಜೆಡಿಎಸ್ ಹೋಗಿದೆ. ಬರುವ ದಿನಗಳಲ್ಲಿ ಜೆಡಿಎಸ್ ರಾಜ್ಯದಲ್ಲಿ ಸಂಪೂರ್ಣವಾಗಿ ನೆಲ ಕಚ್ಚಲಿದೆ ಎಂದು ಭವಿಷ್ಯ ನುಡಿದರು. 

 

 

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top