ಕೈಮುಗಿದು ದರ್ಶನ್ ಅಭಿಮಾನಿಗಳ ಕ್ಷಮೆ ಕೇಳಿದ ತೆಲುಗು ಯೂಟ್ಯೂಬರ್ : ದಾಸನ ಅಭಿಮಾನಿಗಳು ದಿಲ್ ಕುಶ್ !
ತೆಲುಗು ಸ್ಟಾರ್ ನಟರ ಅಭಿಮಾನಿಗಳು ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆಯುತ್ತಲೇ ಇದೆ. ಇತ್ತೀಚೆಗೆ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ವೀಡಿಯೋವನ್ನು ದರ್ಶನ್ ಅಭಿಮಾನಿಯೊಬ್ಬರು ಹಂಚಿಕೊಂದು ‘ಬಾಸ್ ಈಸ್ ಬ್ಯಾಕ್’ ಎಂದು ಬರೆದುಕೊಂಡಿದ್ದರು. ಅದಕ್ಕೆ ಕೆಲ ತೆಲುಗು ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡಿದ್ದೇ ಇದಕ್ಕೆಲ್ಲಾ ಕಾರಣ.
ತಮ್ಮ ನೆಚ್ಚಿನ ನಟನ ಬಗ್ಗೆ ಅಣಕವಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ತಿರುಗಿ ಬಿದ್ದಿದ್ದರು. ಹೀಗೆ ಟೀಕೆಗೆ ಟೀಕೆ, ನೆಗೆಟಿವ್ ಟ್ವೀಟ್‌ಗೆ ನೆಗೆಟಿವ್ ಟ್ವೀಟ್ ಸೇರಿ ದೊಡ್ಡ ಸರಪಳಿ ಆಯಿತು. ಇದು ನಿಧಾನವಾಗಿ ಪರಸ್ಪರ ಟ್ರೋಲ್ ಮಾಡುವ ಮಟ್ಟಕ್ಕೆ ಹೋಯಿತು. ದರ್ಶನ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ತೆಲುಗು ನೆಟ್ಟಿಗರು ನೆಗೆಟಿವ್ ಆಗಿ ಬಿಂಬಿಸಿ ವ್ಯಂಗ್ಯವಾಡಿದ್ದರು. ಅದಕ್ಕೆ ಪ್ರತಿಯಾಗಿ ದರ್ಶನ್ ಅಭಿಮಾನಿಗಳು ತೆಲುಗು ಸ್ಟಾರ್‌ಗಳನ್ನು ಟ್ರೋಲ್ ಮಾಡಲು ನಿಂತರು.
‘ಡೆವಿಲ್’ ಮುಗಿಯುತ್ತಿದ್ದಂತೆ ಪ್ರೇಮ್‌ಗೆ ಗ್ರೀನ್ ಸಿಗ್ನಲ್ ಕೊಟ್ರಾ ದರ್ಶನ್? ರಕ್ಷಿತಾ ಪ್ರಡ್ಯೂಸರ್? ಕೆವಿಎನ್ ಕಥೆಯೇನು?
‘ಡೆವಿಲ್’ ಮುಗಿಯುತ್ತಿದ್ದಂತೆ ಪ್ರೇಮ್‌ಗೆ ಗ್ರೀನ್ ಸಿಗ್ನಲ್ ಕೊಟ್ರಾ ದರ್ಶನ್? ರಕ್ಷಿತಾ ಪ್ರಡ್ಯೂಸರ್? ಕೆವಿಎನ್ ಕಥೆಯೇನು?
‘ಕೆಎಫ್ಐ ಕ್ರಿಮಿನಲ್ ದರ್ಶನ್’ ಎಂಬ ಹ್ಯಾಷ್‌ಟ್ಯಾಗ್ ವೈರಲ್ ಮಾಡಿ ತೆಲುಗು ನಟರ ಅಭಿಮಾನಿಗಳು ಟ್ರೆಂಡ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ #TollywoodUnderDBossFoot ಎಂಬ ಹ್ಯಾಷ್‌ಟ್ಯಾಗ್ ಅನ್ನು ದರ್ಶನ್ ಅಭಿಮಾನಿಗಳು ಟ್ರೆಂಡ್ ಮಾಡಿದ್ದರು. ಪರಸ್ಪರ ಕೆಟ್ಟ ಕೆಟ್ಟದ್ದಾಗಿ ಮೀಮ್ಸ್ ಡಿಸೈನ್ ಮಾಡಿ ವೈರಲ್ ಮಾಡಲು ಆರಂಭಿಸಿದ್ದರು. ನೋಡ ನೋಡುತ್ತಲೇ ಇದು ಕೆಟ್ಟ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಪವನ್ ಕಲ್ಯಾಣ್ ಅಭಿಮಾನಿಗಳು ಇದನ್ನು ಇಲ್ಲಿಗೆ ಬಿಟ್ಟು ಬಿಡೋಣ ಎಂದರು. ಆದರೆ ದರ್ಶನ್ ಅಭಿಮಾನಿಗಳು ಅಷ್ಟಕ್ಕೇ ಸುಮ್ಮನಾಗಲಿಲ್ಲ.
ತೆಲುಗು ನಟರ ಕೆಲ ಅಭಿಮಾನಿಗಳು ಈಗ ಕೂಡ ದರ್ಶನ್ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಕೆಲ ತೆಲುಗು ಯೂಟ್ಯೂಬರ್‌ಗಳು ಈ ಬಗ್ಗೆ ವೀಡಿಯೋ ಮಾಡಿದ್ದಾರೆ. ದರ್ಶನ್ ಯಾರು? ಹಿನ್ನೆಲೆ ಏನು? ಆತನ ಸಿನಿಮಾ ಕಲೆಕ್ಷನ್ ಎಷ್ಟು ಆಗುತ್ತದೆ ಗೊತ್ತಾ? ನಮ್ಮ ನಟರ ಸಿನಿಮಾಗಳ ಮುಂದೆ ದರ್ಶನ್ ಸಿನಿಮಾ ಕಲೆಕ್ಷನ್ ಏನೇನು ಅಲ್ಲ, ಅಂತೆಲ್ಲಾ ವ್ಯಂಗ್ಯ ಮಾಡಿ ವೀಡಿಯೋಗಳನ್ನು ಮಾಡಿದ್ದಾರೆ. ಇದೇ ರೀತಿ ವೀಡಿಯೋ ಮಾಡಿದ್ದ ಯೂಟ್ಯೂಬರ್ ಈಗ ಕ್ಷಮೆ ಕೇಳಿ ಹೊಸ ವೀಡಿಯೋ ಅಪ್‌ಲೋಡ್ ಮಾಡಿದ್ದಾನೆ. ಅದನ್ನು ದರ್ಶನ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
Sampada ನನ್ನ ಸಿನಿಮಾದ ಹಾಡುಗಳು ಟ್ರೆಂಡ್ ಆಗ್ತಿರೋದು ಬಹಳ ಖುಷಿ
Sampada ನನ್ನ ಸಿನಿಮಾದ ಹಾಡುಗಳು ಟ್ರೆಂಡ್ ಆಗ್ತಿರೋದು ಬಹಳ ಖುಷಿSampada ನನ್ನ ಸಿನಿಮಾದ ಹಾಡುಗಳು ಟ್ರೆಂಡ್ ಆಗ್ತಿರೋದು ಬಹಳ ಖುಷಿ
ತಮ್ಮ ವೀಡಿಯೋಗೆ ಬಂದ ನೆಗೆಟಿವ್ ಕಾಮೆಂಟ್ಸ್ ನೋಡಿ ಅಂಜಿ ಎಂಬ ಯೂಟ್ಯೂಬರ್ ಕ್ಷಮೆ ಕೇಳಿ ವೀಡಿಯೋ ಪೋಸ್ಟ್ ಮಾಡಿದ್ದಾನೆ. ‘ಸಿನಿಪಂಚ್ ವಿತ್ ಅಂಜಿ’ ಎಂಬ ಯೂಟ್ಯೂಬ್‌ನಲ್ಲಿ ಅಂಜಿ ಎಂಬಾತ “ದರ್ಶನ್ ಯಾರು?” ಎಂಬ ಟೈಟಲ್ ಕೊಟ್ಟು ವೀಡಿಯೋ ಮಾಡಿದ್ದನು. ಅದರಲ್ಲಿ ಕನ್ನಡ ನಟ ದರ್ಶನ್ ಯಾರು? ಆತನ ಹಿನ್ನೆಲೆ ಏನು? ಈವರೆಗೆ ಆತನ ಸಿನಿಮಾ 100 ಕೋಟಿ ರೂ. ಕಲೆಕ್ಷನ್ ದಾಟಿಲ್ಲ. ಪ್ರಭಾಸ್, ಪವನ್ ಸಿನಿಮಾಗಳು ಮೊದಲ ದಿನವೇ 100 ಕೋಟಿ ರೂ. ಕಲೆಕ್ಷನ್ ಮಾಡುತ್ತವೆ ಎಂದಿದ್ದ.
ದರ್ಶನ್ ಫ್ಯಾನ್ಸ್ vs ತೆಲುಗು ನೆಟ್ಟಿಗರ ಮಧ್ಯೆ ಕಿರಿಕ್; ಅಷ್ಟಕ್ಕೂ ಏನಾಯ್ತು?
ದರ್ಶನ್ ಫ್ಯಾನ್ಸ್ vs ತೆಲುಗು ನೆಟ್ಟಿಗರ ಮಧ್ಯೆ ಕಿರಿಕ್; ಅಷ್ಟಕ್ಕೂ ಏನಾಯ್ತು?
ಸದ್ಯ ದರ್ಶನ್ ಅಭಿಮಾನಿಗಳ ಕ್ಷಮೆ ಕೋರಿ ಯೂಟ್ಯೂಬರ್ ಅಂಜಿ ವೀಡಿಯೋ ಪೋಸ್ಟ್ ಮಾಡಿದ್ದಾನೆ. “ದರ್ಶನ್ ಅಭಿಮಾನಿಗಳು ಕ್ಷಮಿಸಿ. ನನ್ನ ಯೂಟ್ಯೂಬ್ ಚಾನಲ್‌ನಲ್ಲಿ ಒಂದು ವೀಡಿಯೋ ಮಾಡಿದ್ದೆ. ನಾನು ಅದರಲ್ಲಿ ಕೆಟ್ಟದಾಗಿ ಏನು ಹೇಳಲಿಲ್ಲ. ದರ್ಶನ್ ಸಿನಿಮಾಗಳ ಕಲೆಕ್ಷನ್ ಬಗ್ಗೆ ಮಾತನಾಡಿದ್ದೆ. ಅದಕ್ಕೆ ಬಂದ ನೆಗೆಟಿವ್ ಕಾಮೆಂಟ್ಸ್ ಶಾಕ್ ಆಯಿತು. ಇನ್ನು ಮುಂದೆ ನಾನು ದರ್ಶನ್ ಬಗ್ಗೆ ವೀಡಿಯೋ ಮಾಡಲ್ಲ. ತೆಲುಗರು, ಕನ್ನಡಿಗರು ಯಾರೇ ಆಗಿದ್ದರೂ ನಾವು ಭಾರತೀಯರು” ಎಂದು ಆತ ಹೇಳಿದ್ದಾನೆ. ಈ ವೀಡಿಯೋವನ್ನು ದರ್ಶನ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.