ನದಿ ಪಾತ್ರದಲ್ಲಿ ಹೈ ಅಲರ್ಟ್
ಹೊಸಪೇಟೆ: ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ನ ಚೈನ್ ಲಿಂಕ್ ಕಟ್ಟಾಗಿ ಗೇಟ್ ಮೂಲಕ ಅಪಾರ ಪ್ರಮಾಣದ ನೀರು, ನದಿ ಪಾತ್ರಕ್ಕೆ ಹರಿಯುತ್ತಿದೆ. ಕ್ರಸ್ಟ್‌ಗೇಟ್‌ನ ಚೈನ್‌ಲಿಂಕ್ನ ವೆಲ್ಡಿಂಗ್ ಬಿಟ್ಟುಕೊಂಡಿರುವುದರಿಂದ ಗೇಟ್ ಸಂಪೂರ್ಣ ಕುಸಿದಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ತಡ ರಾತ್ರಿ ಈ ಘಟನೆ ನಡೆದಿದೆ.
ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಭಾರೀ ಆತಂಕ ಮೂಡಿಸಿದೆ. ನದಿಪಾತ್ರದ ಜನರಿಗೆ ಅಲರ್ಟ್ ಆಗಿರಲು ಡ್ಯಾಂ ಅಧಿಕಾರಿಗಳ ಸೂಚನೆ ನೀಡಿದ್ದಾರೆ.
105 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಸದ್ಯ ಗೇಟ್ ನಂಬರ್ 19 ರಿಂದ 35 ಸಾವಿರಕ್ಕು ಹೆಚ್ಚು ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದೆ. ಒಟ್ಟಾರೆ 54 ಸಾವಿರ ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗ್ತಿದೆ. ನದಿಪಾತ್ರದ ಜನರಿಗೆ ಅಲರ್ಟ್ ಆಗಿರಲು ಡ್ಯಾಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ.19 ನೇ ಕ್ರಸ್ಟ್ ಗೇಟ್ನ ಚೈನ್ ಲಿಂಕ್ ಕಟ್ಟಾಗಿ ಗೇಟ್ ಕುಸಿದು ಹೋಗಿದೆ. ಈಗ ಸಂಪೂರ್ಣ ಹೊಸ ಗೇಟ್ ಅಳವಡಿಸಬೇಕಾಗಿದೆ. ಹಿರಿಯ ಅಧಿಕಾರಿಗಳು, ಎಂಜಿನಿಯರ್‌ಗಳ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಬದಲಿ ಗೇಟ್ ಅಳವಡಿಸಲು ತಕ್ಷಣದಿಂದಲೇ ಸಿದ್ಧತೆ ನಡೆಯಲಿದೆ ಎಂದು ಡ್ಯಾಂ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ
ಸುದ್ದಿ ತಿಳಿದು ಸ್ಥಳಕ್ಕೆ ಬೇಟಿ ನೀಡಿದ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಘಟನಾ ಸ‍್ಥಳವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡ್ಯಾಂ ಅಧಿಕಾರಿಗಳ ಜೊತೆ ಮಾತನಾಡಿದ್ದೆನೆ, ಜಲಾಶಯಕ್ಕೆ ಶೀಘ್ರದಲ್ಲಯೇ ತಜ್ಞರು ಬೇಟಿ ನೀಡಲಿದ್ದಾರೆ. ಚೈನ್ ಲಿಂಕ್ ಪುರ್ಣ ಕಟ್ ಆಗಿದೆ. ನೀರು ಕೆಳಗೆ ಇಳಿದ ಮೇಲೆ ಗೊತ್ತಾಗಲಿದೆ ಎಂದು ಅಧಿಕಾರಿಗಳು ಹೇಳ್ತಿದ್ದಾರೆ. ನೀರಿನ ಪೋರ್ಸ್ ಪ್ರಮಾಣ ತುಂಬಾ ಇದೆ, ಹೀಗಾಗಿ ಅಲ್ಲಿ ಇಳಿದು ಕೆಲಸ ಮಾಡಲು ಆಗುವುದಿಲ್ಲ.
ಸದ್ಯದ ಮಾಹಿತಿ ಪ್ರಕಾರ 50 ರಿಂದ 60 ಟಿಎಂಸಿ ಖಾಲಿ ಮಾಡಬೇಕಿದೆ. ಮೊದಲಿಗೆ ನಾವು ಡ್ಯಾಂ ಸುರಕ್ಷತೆ ಬಗ್ಗೆ ನೋಡ್ತಾಯಿದ್ದೆವೆ. ಡ್ಯಾಂ ಡಿಸೈನ್ ಮಾಡಿದ ಅಧಿಕಾರಿಗಳು ಇಂಜಿನಿಯರ್ ಗಳು ಹೈದರಾಬಾದ್ ನಿಂದ ಭಾನುವಾರ ಬರಲಿದ್ದಾರೆ. ತಜ್ಞರು ಬಂದ ಮೇಲೆ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈಗ 1 ಲಕ್ಷ ಕ್ಯೂಸೆಕ್ ನೀರು ಹೊರ ಹೋಗ್ತಿದೆ. ಒಂದೇ ಕಡೆ ನೀರಿನ ಒತ್ತಡ ಹೆಚ್ಚಾಗದಂತೇ ತಡೆಯಲು ಡ್ಯಾಂ ನ 32 ಗೇಟ್ ಗಳನ್ನ ಓಪನ್ ಮಾಡ್ತಾಯಿದ್ದಿವಿ. ಎಲ್ಲಾ ಗೆಟ್ ಓಪನ್ ಮಾಡಿರೋದ್ರಿಂದ ಹಳ್ಳಿಗಳಿಗೆ ಎಲ್ಲಾ ಕಡೆ ಮಾಹಿತಿ ನೀಡಿದ್ದೆವೆ. 2 ಲಕ್ಣ 35 ಸಾವಿರ ಕ್ಯೂಸೆಕ್ ವರೆಗೆ ನೀರು ಬಿಟ್ಟರೆ ನದಿ ಪಾತ್ರದ ಜನರು ಆತಂಕ ಪಡುವ ಅಗತ್ಯವಿಲ್ಲ 2.50 ಲಕ್ಷ ಕ್ಕಿಂತ ಹೆಚ್ಚಿನ ನೀರಿನ ಹೊರಹರಿವು ಆದಾಗ ಕೆಲವು ಕಡೆ ಎಫೆಕ್ಟ್ ಆಗುವ ಸಾದ್ಯತೆಯಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.