ನೆಟ್ ಹಾಗೂ ಕೆ – ಸೆಟ್ ಪರೀಕ್ಷಾ ತರಬೇತಿ ಕಾರ್ಯಗಾರ

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗಾವಕಾಶ ಕೋಶ ಸ್ನಾತಕೋತ್ತರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸ್ನಾತಕೊತ್ತರ ವಿದ್ಯಾರ್ಥಿಗಳಿಗಾಗಿ ನೆಟ್ ಮತ್ತು ಕೆ ಸೆಟ್ ಪರೀಕ್ಷಾ ತರಬೇತಿ ಕಾರ್ಯಗಾರವನ್ನು ಸೆ.06ರಂದು ಕಾಲೇಜಿನ ವಾಣಿಜ್ಯಶಾಸ್ತ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯೋಗಾವಕಾಶ ಕೋಶದ ಸಂಚಾರಕರಾದ ಪ್ರೊ ವೆಂಕಟೇಶ್ ಬಾಬು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.