ಬೆಂಗಳೂರಿನಲ್ಲಿ ತನ್ನ ಮೆಗಾ ಸರ್ವೀಸ್ ಕ್ಯಾಂಪ್ ಅನ್ನು ಆಯೋಜಿಸಿದ ಜಾವಾ ಯೆಜ್ಡಿ ಮೋಟಾರ್ಸೈಕಲ್ಸ್
ಬೆಂಗಳೂರು : ಜಾವಾ ಯೆಜ್ಡಿ ಮೋಟಾರ್ಸೈಕಲ್ಸ್ ಕಂಪನಿ ತನ್ನ ಅತ್ಯಂತ ಯಶಸ್ವಿ ಮೆಗಾ ಸರ್ವೀಸ್ ಕ್ಯಾಂಪ್ ಅನ್ನು ಕರ್ನಾಟಕದ ಬೆಂಗಳೂರಿನಲ್ಲಿ ಆಯೋಜಿಸಿದೆ. ಹಲವು ರಾಜ್ಯಗಳಾದ್ಯಂತ ನಡೆದ ಅನೇಕ ಕ್ಯಾಂಪ್ ಗಳ ಯಶಸ್ಸಿನ ಸ್ಫೂರ್ತಿಯಿಂದ ನಡೆಯುವ ಈ ನಾಲ್ಕು ದಿನದ ಕ್ಯಾಂಪ್ ಬೆಂಗಳೂರಿನಲ್ಲಿ ಏಪ್ರಿಲ್ 4ರಿಂದ ಏಪ್ರಿಲ್ 7ರವರೆಗೆ ನಡೆಯಲಿದೆ. ಈ ಕ್ಯಾಂಪ್ ಈ ಪ್ರದೇಶಗಳಲ್ಲಿರುವ 2019 ಮತ್ತು 2020ರ ಜಾವಾ ಮೋಟಾರ್ಸೈಕಲ್ ಮಾಡೆಲ್ ಗಳ ಮಾಲೀಕರಿಗೆ ಸರ್ವೀಸ್ ಪಡೆಯುವ ಅವಕಾಶ ಒದಗಿಸಲಿದೆ.