ಚಿಕ್ಕಬಳ್ಳಾಪುರದ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಶಿಡ್ಲಘಟ್ಟದ ನಾಯಕ ಪುಟ್ಟ ಆಂಜನಪ್ಪ ಕಾಂಗ್ರೆಸ್ ಸೇರ್ಪಡೆ
ಚಿಕ್ಕಬಳ್ಳಾಪುರ: ‘ಹಸ್ತ’ ಎನ್ನುವುದು ಕೇವಲ ಗುರುತಲ್ಲ, ಇದು ರೈತರ ನೇಗಿಲು ಹಿಡಿಯುವ ಹಸ್ತ, ಕಾರ್ಮಿಕರ ಶ್ರಮದ ಹಸ್ತ, ಮಹಿಳೆಯರ ಶಕ್ತಿಯ ಹಸ್ತ, ಯುವಕರ ಭವಿಷ್ಯದ ಹಸ್ತ. ಹಸ್ತ ಈ ದೇಶ ಮತ್ತು ಜನರ ಶಕ್ತಿ. ಕಾಂಗ್ರೆಸ್ ಎಂದರೆ ಹಲವು ನದಿಗಳ ಸಂಗಮ. ಕಾಂಗ್ರೆಸ್ ಪಕ್ಷ ಪವಿತ್ರವಾದ ದೇವಸ್ಥಾನ. ನಾವೆಲ್ಲಾ ಈ ದೇಶವನ್ನು ಕಾಪಾಡಲು ಈ ದೇವಸ್ಥಾನದಲ್ಲಿ ಸೇರಿದ್ದೇವೆ. ನೀವು ಈಶ್ವರ, ವೆಂಕಟೇಶ್ವರ ಹೀಗೆ ಯಾವುದೇ ದೇವಸ್ಥಾನಕ್ಕೆ ಹೋದರು ದೇವರು ಆಶೀರ್ವಾದ ಮಾಡುವುದು ಈ ಹಸ್ತದಿಂದ.