ಬ್ಯಾಂಗ್ ಚಿತ್ರಕ್ಕೆ ಹಿನ್ನೆಲೆ  ಧ್ವನಿ ಕೊಟ್ಟು ಪ್ರೋತ್ಸಾಹಿಸಿದ : ಕಿಚ್ಚ ಸುದೀಪ್

ಶಾನ್ವಿ ಶ್ರೀವಾತ್ಸವ್ ಅಭಿನಯದ ಡಾರ್ಕ್ ಕಾಮಿಡಿ ಆಕ್ಷನ್ ಚಿತ್ರ ‘ಬ್ಯಾಂಗ್’ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಆಗಸ್ಟ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಇದೀಗ ಚಿತ್ರಕ್ಕೆ ಸ್ಟಾರ್ ಸ್ಪರ್ಶ ಸಿಕ್ಕಿದೆ. ‘ಬ್ಯಾಂಗ್’ ಚಿತ್ರಕ್ಕೆ ಕಿಚ್ಚ ಸುದೀಪ್, ಹಿನ್ನೆಲೆ ಧ್ವನಿ ನೀಡಿದ್ದು ಚಿತ್ರತಂಡದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.