14 ವರ್ಷದ ಕೀರ್ತಿ ಜೈನ್ ಅವರ ಅಂಗಾಂಗಗಳ ದಾನ

ಬೆಂಗಳೂರು: ದುಃಖದ ನಡುವೆಯೂ ಸದ್ಭಾವನೆಯ ದ್ಯೋತಕವಾಗಿ ನಗರದ ಬಾಲ್ಡಿವಿನ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿರುವ 14 ವರ್ಷದ ಕೃತಿ ಜೈನ್ ಅವರ ಅಂಗಾಂಗಳು 9 ಮಂದಿಯ ಬದುಕಿಗೆ ಆಸರೆಯಾಗಿವೆ. ತಂದೆ ವಿರೇಂದ್ರ ಕುಮಾರ್ ಜೈನ್, ತಾಯಿ ಮೋನಿಕಾ ಅವರು ತಮ್ಮ ಪ್ರೀತಿಯ ಪುತ್ರಿಯ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದರು. ಇತ್ತೀಚೆಗೆ ಕೃತಿ ಜೈನ್ ದುರಂತದಲ್ಲಿ ಜೀವ ಕಳೆದುಕೊಂಡಳು. ಜೈನ್ ಕುಟುಂಬದ ನಿಸ್ವಾರ್ಥತೆಯಿಂದಾಗಿ ಆಕೆಯ ಅಂಗಗಳು ಕಸಿಗಾಗಿ ಕಾಯುತ್ತಿದ್ದ ಜೀವಗಳನ್ನು ಅರಳುವಂತೆ ಮಾಡಿದೆ. ಈ ಮೂಲಕ ಕೃತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.