kannanadu

ಅನರ್ಹರು ಹುದ್ದೆ ಅಲಂಕರಿಸಿದರೆ, ದೇಶದ ಭವಿಷ್ಯಕ್ಕೆ ಮಾರಕ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದ್ದೆ ವಾಮವಾರ್ಗ ಹಾಗೂ ಭ್ರಷ್ಟಾಚಾರದಿಂದ. ಬಿಜೆಪಿಯವರು ಹೇಳೋದೆಲ್ಲಾ ತತ್ವ ಸಿದ್ಧಾಂತ ಆದರೆ ಮಾಡೋದು ಭ್ರಷ್ಟಾಚಾರ. ಈಗ ಅನೇಕ ವಿಚಾರಗಳಲ್ಲಿ ಸರ್ಕಾರದ ಅಕ್ರಮ ಬಗ್ಗೆ ಚರ್ಚೆ ಆಗುತ್ತಿದೆ. ದುರ್ದೈವ ಸಂಗತಿ ಏನೆಂದರೆ ಬೇರೆ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಹಾಗೂ ಶಿಕ್ಷಣ ಇಲಾಖೆ ಭ್ರಷ್ಟಾಚಾರಕ್ಕೆ ಬಹಳ ವ್ಯತ್ಯಾಸವಿದೆ. ಈ ಇಲಾಖೆಯಲ್ಲಿ ಅನರ್ಹರು ಹುದ್ದೆ ಅಲಂಕರಿಸಿದರೆ, ದೇಶದ ಭವಿಷ್ಯಕ್ಕೆ ಮಾರಕವಾಗುತ್ತದೆ. ಬಿಜೆಪಿ ಸರ್ಕಾರ ಲ್ಯಾಪ್ ಟಾಪ್ ಖರೀದಿಯಿಂದ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮದವರೆಗೂ ಪ್ರತಿ ಹಂತದಲ್ಲೂ …

ಅನರ್ಹರು ಹುದ್ದೆ ಅಲಂಕರಿಸಿದರೆ, ದೇಶದ ಭವಿಷ್ಯಕ್ಕೆ ಮಾರಕ Read More »

ಗ್ರಾಮ ದೇವತೆ ಪೂಜಾ ಮಹೋತ್ಸವದಲ್ಲಿ ಸಿದ್ದರಾಮಯ್ಯ

ಮೈಸೂರು : ಮೈಸೂರಿನ ಹೊಸ ಕಾಮನಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ದೇವತೆ ಶ್ರೀ ಲಕ್ಷ್ಮಿದೇವಮ್ಮ ಕಂತಮ್ಮ ದೇವಾಲಯದ ಪ್ರತಿಷ್ಠಾಪನೆ, ಪೂಜಾ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು.

ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾನೂನಿನ ಕಟ್ಟುನಿಟ್ಟಿನ ಜಾರಿಗೆ ಕ್ರಮ

ಬೆಂಗಳೂರು : ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟಿನ ಆದೇಶದಂತೆ, ರಾಜ್ಯದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಾಗಿದೆ. ಮಾಧ್ಯಮಗಳ ಮೂಲಕವೂ ವ್ಯಾಪಕ ಪ್ರಚಾರ ಸಹ ಆಗಿದೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ಯಾವುದೇ ದ್ವನಿವರ್ಧಕ ಗಳ ಉಪಯೋಗಕ್ಕೆ ಅವಕಾಶವಿಲ್ಲ. ಬೇರೆ ಸಮಯದಲ್ಲಿ ದ್ವನಿ ವರ್ಧಕ ಗಳಿಂದ ಉತ್ಪತ್ತಿಯಾಗುವ ಶಬ್ದದ ಪ್ರಮಾಣ ಯಾವ ಸಾಂದ್ರತೆ ಯಲ್ಲಿರಬೇಕು, ಎಂಬುದರ ಬಗ್ಗೆ, ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಯಾವ ದರ್ಜೆಯ ಅಧಿಕಾರಿಗಳು, ದ್ವನಿವರ್ಧಕಗಳಿಗೆ ಅನುಮತಿ ನೀಡಬಹುದು ಹಾಗೂ ಕಾನೂನು ಬಾಹಿರವಾಗಿ …

ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾನೂನಿನ ಕಟ್ಟುನಿಟ್ಟಿನ ಜಾರಿಗೆ ಕ್ರಮ Read More »

ಗಂಗಮ್ಮ ತಾಯಿ ದರ್ಶನ ಪಡೆದ ಸಹಸ್ರಾರು ಭಕ್ತರು

ದೇವನಹಳ್ಳಿ: ಊರ ಕಾಯುವ ದೇವತೆ, ಇಷ್ಟಾರ್ಥ ಸಿದ್ಧಿಯ ಗಂಗಮ್ಮ ತಾಯಿಯ 52 ನೇ ಜಾತ್ರಾ ಮಹೋತ್ಸವ ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವಕ್ಕೆ ಮೇ 3 ನೇ ತಾರೀಖಿನಿಂದಲೇ ಹಲವಾರು ಪೂಜಾ ವಿಧಿ ವಿಧಾನಗಳು ಆರಂಭಗೊಂಡು, ಪ್ರತಿ ನಿತ್ಯ ತಾಯಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಮೇ. 10 ರ ಬೆಳಗ್ಗೆ ಗಂಗಮ್ಮ ತಾಯಿಯ 52 ನೇ ವರ್ಷದ ಜಾತ್ರಾ ಮಹೋತ್ಸವ ಸಂಪ್ರದಾಯ ಬದ್ಧವಾಗಿ ನೆರವೇರಿತು. ಊರಿಗೇ ಊರೇ ಹಬ್ಬ …

ಗಂಗಮ್ಮ ತಾಯಿ ದರ್ಶನ ಪಡೆದ ಸಹಸ್ರಾರು ಭಕ್ತರು Read More »

ಮಲ್ಲಮ್ಮರವರ ಜೀವನ ಚರಿತ್ರೆಯೇ ವಚನಗಳಾಗಿವೆ: ಎನ್.ಉದಯ ಕುಮಾರ್

ಬೆಂಗಳೂರು : ಪುರಾಣದ ಪುಣ್ಯಕಥೆಗಳು, ಪವಾಡಗಳು, ಶಿವನ ಆರಾಧನೆಯನ್ನು ಬಾಲ್ಯದಿಂದಲೂ ಮೈಗೂಡಿಸಿಕೊಂಡು ಬೆಳೆದವರು ಮಲ್ಲಮ್ಮನವರು. ಮಹಾಸಾಧ್ವಿ ಶಿವಶರಣೆ ಮಲ್ಲಮ್ಮ ನವರು ವಚನಗಳನ್ನು ಬರೆಯಲಿಲ್ಲ ಅಥವಾ ಹೇಳಲಿಲ್ಲ ಮಲ್ಲಮ್ಮನವರ ಜೀವನವೇ ಒಂದು ಅಪೂರ್ವವಾದ ವಚನವಾಗಿದೆ ಎಂದು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್.ಉದಯ ಕುಮಾರ್ ತಿಳಿಸಿದರು. ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರವರ ಜಯಂತಿಯನ್ನು ಆಚರಣೆಮಾಡಿ ಅವರು ಮಾತನಾಡಿದರು. ಶ್ರೀಶೈಲದ ದಕ್ಷಿಣಕ್ಕಿರುವ …

ಮಲ್ಲಮ್ಮರವರ ಜೀವನ ಚರಿತ್ರೆಯೇ ವಚನಗಳಾಗಿವೆ: ಎನ್.ಉದಯ ಕುಮಾರ್ Read More »

ಐದು ದಿನಗಳಲ್ಲಿ 3343 ಟಿಸಿಗಳನ್ನು ನಿರ್ವಹಿಸಿದ ಬೆಸ್ಕಾಂ

ಬೆಂಗಳೂರು: ವಿದ್ಯುತ್ ಪರಿವರ್ತಕಗಳ (ಟಿಸಿ) ನಿರ್ವಹಣೆ ಕಾರ್ಯದ ಮುಂದುವರಿದ ಅಭಿಯಾನದಲ್ಲಿ ಐದು ದಿನಗಳಲ್ಲಿ ಎಲ್ಲ 536 ಸೆಕ್ಷನ್ ಗಳಲ್ಲಿ 3343 ಟಿಸಿಗಳ ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ತಾಂತ್ರಿಕ ಸಮಸ್ಯೆ ಉಂಟಾಗಿರುವ ಎಲ್ಲ ಟಿಸಿಗಳಿಗೆ ಶಾಶ್ವತ ಕಾಯಕಲ್ಪ ಒದಗಿಸಲು ಬೆಸ್ಕಾಂ ಮುಂದಾಗಿದ್ದು ಈ ಅಭಿಯಾನವನ್ನು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸೂಚನೆ ಮೇರೆಗೆ ಬೆಸ್ಕಾಂ ಮೇ 5 ರಂದು ಕೈಗೊಂಡಿತ್ತು. 15 ದಿನಗಳ ಈ ಅಭಿಯಾನದಲ್ಲಿ ತಾಂತ್ರಿಕ ಸಮಸ್ಯೆ ಎದುರಿಸತ್ತಿರುವ ಹಾಗು ಸುರಕ್ಷಿತವಲ್ಲದ ಜನ …

ಐದು ದಿನಗಳಲ್ಲಿ 3343 ಟಿಸಿಗಳನ್ನು ನಿರ್ವಹಿಸಿದ ಬೆಸ್ಕಾಂ Read More »

ಬಳ್ಳಾರಿ ಎಸ್ಪಿ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ:ಕಂಟ್ರೋಲ್‌ ರೂಂ ಪರಿಶೀಲನೆ

ಬಳ್ಳಾರಿ : ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಮಂಗಳವಾರ ಭೇಟಿ ನೀಡಿ ಎಸ್ಪಿ‌ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂ ಪರಿಶೀಲಿಸಿದರು. ಕಂಟ್ರೋಲ್ ರೂಂ ಕಾರ್ಯವೈಖರಿ, ಟ್ರಾಫಿಕ್ ನಿರ್ವಹಣೆ, ಅಪರಾಧಗಳ ತ್ವರಿತಪತ್ತೆ, ನಗರ ಸಂಪೂರ್ಣ ನಿಗಾ ವಹಿಸುವಿಕೆ,ಕಾನೂನು ಸುವ್ಯವಸ್ಥೆ-ಶಾಂತಿಪಾಲನೆ ಕುರಿತ ಮಾಹಿತಿಗಳನ್ನು ಎಸ್ಪಿ ಸೈದುಲು ಅಡಾವತ್ ಅವರಿಂದ ತಿಳಿದುಕೊಂಡರು. ಎಸ್ಪಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂನಿಂದ ಬಳ್ಳಾರಿ ನಗರ ಸಂಪೂರ್ಣ ಪೊಲೀಸ್ ಇಲಾಖೆಯ‌ …

ಬಳ್ಳಾರಿ ಎಸ್ಪಿ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ:ಕಂಟ್ರೋಲ್‌ ರೂಂ ಪರಿಶೀಲನೆ Read More »

ಶಿವರಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ:ಸಂಭ್ರಮದ ಮೆರವಣಿಗೆ

ಬಳ್ಳಾರಿ: ಶಿವರಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವದ ಮೆರವಣಿಗೆಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಬಳ್ಳಾರಿಯ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು.ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಅವರ‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಡಿಸಿ‌ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಎಡಿಸಿ ಮಂಜುನಾಥ ಸೇರಿದಂತೆ ಇನ್ನೀತರರು ಇದ್ದರು.ಮೆರವಣಿಗೆಯು ಶ್ರೀ ಕನಕದುರ್ಗಮ್ಮ ದೇವಸ್ಥಾನದಿಂದ …

ಶಿವರಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ:ಸಂಭ್ರಮದ ಮೆರವಣಿಗೆ Read More »

ತಿಗಳ ಜನಾಂಗದ ಬಗ್ಗೆ ಕಡೆಗಣನೆ ಬೇಡ: ಸಿ. ಜಯರಾಜ್

ದೇವನಹಳ್ಳಿ : ನಮ್ಮಲ್ಲೇ ಜಾತಿ ಪಂಗಡಗಳನ್ನು ವಿಂಗಡಿಸದೆ ತಿಗಳರೆಂದರೆ ಎಲ್ಲರೂ ಒಂದೇ ಎಂದು ಹೇಳಬೇಕು. ಸರ್ಕಾರ ಹಾಗೂ ರಾಜಕಾರಣಿಗಳು ಸಂಘಟನೆಗೆ ಕೊಡುವ ಬೆಲೆಯೇ ಬೇರೆ. ಆದ್ದರಿಂದ ನಾವು ಒಗ್ಗಟ್ಟಾಗಿರಬೇಕು ಎಂದು ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಸಮೀಪದ ಬಿಜ್ಜವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಳ್ಳಹಳ್ಳಿ ಗ್ರಾಮದ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾ ಸಂಸ್ಥಾನ ಪೀಠದ ಆಶ್ರಮದಲ್ಲಿ ಹಾಗೂ ಅಕ್ಷತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಆರ್.ಎಸ್. ದೇವರಾಜ್ ರವರ ನೇತೃತ್ವದಲ್ಲಿಜೆ.ಆರ್.ಮುನಿವೀರಣ್ಣ ಸಂಪಾದಕತ್ವದ ತಿಗಳ ವೈಭವ ಮಾಸ …

ತಿಗಳ ಜನಾಂಗದ ಬಗ್ಗೆ ಕಡೆಗಣನೆ ಬೇಡ: ಸಿ. ಜಯರಾಜ್ Read More »

ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ:ಬಿಸಿಪಾ

ಬೆಂಗಳೂರು: ಕೆಲವರು ಬೇಕಂತಲೇ ಕೃತಕವಾಗಿ ರಸಗೊಬ್ಬರ,ಬಿತ್ತನೆ ಬೀಜಗಳನ್ನು ಕಾಳಸಂತೆಯಲ್ಲಿ ಕಾಯತದಿಟ್ಟು ಮಾರಾಟ ಮಾಡಲು ಕೃತಕವಾಗಿ ರಸಗೊಬ್ಬ,ಬಿತ್ತನೆಬೀಜ ಅಭಾವ ಸೃಷ್ಟಿಸುತ್ತಿದ್ದಾರೆ.ಹೀಗೆ ಕೃತಕವಾಗಿ ಯಾರಾದರೂ ರಸಗೊಬ್ಬರ,ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಸಜಾಲಕ್ಕೆ ರಸಗೊಬ್ಬರ ಬಿತ್ತನೆಬೀಜ ಕೊರತೆಯಾಗದಂತೆ ಹಂತಹಂತವಾಗಿ ನೋಡಿಕೊಳ್ಳಲಾಗುತ್ತಿದೆ.ಯಾವುದೇ ಕಾರಣಕ್ಕೂ ರೈತನಿಗೆ ತೊಂದರೆಯಾಗಲು ಬಿಡುವುದಿಲ್ಲ.2022-23ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ ಸರಬರಾಜು ವಿವರ – 2022-23ರ ಸಾಲಿನ ಮುಂಗಾರು …

ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ:ಬಿಸಿಪಾ Read More »

Translate »
Scroll to Top