ವಿದ್ಯಾರ್ಥಿಗಳ ಜ್ಞಾನ ವಿಕಾಸವಾಗಬೇಕು ಸಿದ್ದರಾಮಯ್ಯ
ಬೆಂಗಳೂರು: ಡೀಸೆಲ್, ಪೆಟ್ರೋಲ್ ಬೆಲೆ ಇಳಿಕೆಯ ಬಗ್ಗೆ ನಾನು ತಕರಾರು ಮಾಡ್ತಿಲ್ಲ, ಆದರೆ ಈ ವರ್ಷದ ಮಾರ್ಚ್ ನಿಂದ ಈ ವರೆಗೆ ಬೆಲೆ ಎಷ್ಟು ಹೆಚ್ಚಾಗಿದೆ? ಐದು ರಾಜ್ಯಗಳ ಚುನಾವಣೆ ಆದ ಮೇಲೆ ಬರೀ ಎರಡೇ ತಿಂಗಳಲ್ಲಿ 11 ರೂಪಾಯಿಗಿಂತ ಬೆಲೆ ಹೆಚ್ಚು ಮಾಡಿದ್ದಾರೆ. ಈಗ ಇಳಿಸಿದ್ದು ಎಷ್ಟು? ಇದು ಹೆಚ್ಚು ಮಾಡಿ, ಇಳಿಸಿದ್ದು ಅಷ್ಟೆ.2014 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸುತ್ತಿದ್ದ ಅಬಕಾರಿ ಸುಂಕ ಎಷ್ಟಿತ್ತು …