kannadanadunews

ದೊಡ್ಡಜಾಲ ಗ್ರಾಮದಲ್ಲಿ ಗ್ರಂಥಾಲಯ ದಿನಾಚರಣೆ

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಮೃದ್ಧ ದೇಶ ನಿರ್ಮಾಣಕ್ಕೆ ಮಕ್ಕಳಿಗೆ ಶ್ರೀ ಪ್ರಿಯಾಂಕ್ ಖರ್ಗೆ ಕರೆ

ಸ್ಟಾರ್ಟ್‌ಅಪ್‌ಗಳ ಸಂಶೋಧನೆಯ ಉತ್ತೇಜನಕ್ಕಾಗಿ ಕರ್ನಾಟಕ ರಿಸರ್ಚ್‌ ಫೌಂಡೇಶನ್‌ ಸ್ಥಾಪನೆ

ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ಟಾರ್ಟ್ಅಪ್ ಮತ್ತು ಉದ್ದಿಮೆಗಳಿಗೆ ನೂತನ ಉತ್ಪನ್ನಗಳ ಸಂಶೋಧನೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣದ ಗುರಿ

ಜೈಲರ್ ಸಿನೆಮಾದಲ್ಲಿ ಶಿವಣ್ಣನ ಅಭಿನಯಕ್ಕೆ ಮನಸೋತ ಪರಭಾಷಿಕರು

ಗುರುವಾರ ಭರ್ಜರಿ ಓಪನಿಂಗ್ ಪಡೆದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ ‘ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವಂತೆ ಕನ್ನಡದ ಸೆಂಚುರಿ ಸ್ಟಾರ್ ಡಾ. ಶಿವರಾಜಕುಮಾರ್ ಅವರಿಗೆ ಹೊಸ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ.

ಡಿ.ಕೆ.ಶಿ ಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಬಿಬಿಎಂಪಿಯಲ್ಲಿ ಅನಗತ್ಯ ಕಮೀಷನ್ ಆರೋಪ

ಬರುವ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದ್ದು, ಇದನ್ನು ತಪ್ಪಿಸಲು ಮತ್ತು ಅವರನ್ನು ಹತ್ತಿಕ್ಕುವ ದುರುದ್ದೇಶದಿಂದ ಬಿಬಿಎಂಪಿ ಗುತ್ತಿಗೆದಾರರು ಅನಗತ್ಯವಾಗಿ ಕಾಮಗಾರಿ ಬಿಲ್ಲು ಪಾವತಿಗೆ ಶೇ 15 ರಷ್ಟು ಕಮಿಷನ್ ನಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಗುತ್ತಿಗೆದಾರ ಎಸ್. ಬಾಲರಾಜೇಗೌಡ ಆರೋಪಿಸಿದ್ದಾರೆ.

ಈಶಾನ್ಯ ಪದವೀಧರರ ಕ್ಷೇತ್ರದ ಎಂಎಲ್’ಸಿ ಆಕಾಂಕ್ಷಿಯಾಗಿದ್ದೇನೆ ; ನಾರಾ ಪ್ರತಾಪ್ ರೆಡ್ಡಿ

ಈಶಾನ್ಯ ಪದವೀಧರರ ಕ್ಷೇತ್ರದ ಎಂಎಲ್’ಸಿ ಸ್ಥಾನದ ಆಕಾಂಕ್ಷಿಯಾಗಿದ್ದು, ಈಗಾಗಲೇ ಕೆಪಿಪಿಸಿಗೆ ಅರ್ಜಿ ಹಾಕಿದ್ದೇನೆ ಎಂದು ಬಳ್ಳಾರಿಯ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಹೇಳಿದರು.

ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರಿಂದ ಮಾತ್ರ ಕಮಿಷನ್ ಆರೋಪ: ಡಿಸಿಎಂ ಡಿ.ಕೆ. ಶಿವಕುಮಾರ್

“ನಮ್ಮ ಸರ್ಕಾರದ ಸಚಿವರು ಶಾಸಕರು ಲಂಚ ಕೇಳಿಲ್ಲ ಎಂದು ಕೇವಲ ಕೆಂಪಣ್ಣ ಮಾತ್ರವಲ್ಲ, ಇತರೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕೇವಲ ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಎಟಿಎಂ ಕಾಂಗ್ರೆಸ್ ಸರ್ಕಾರದ ಮುಲಾಜಿನಲ್ಲಿದ್ದಾರೆ: ಬೊಮ್ಮಾಯಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದ ಎಟಿಎಂ ಸರ್ಕಾರದ ಮುಲಾಜಿನಲ್ಲಿದ್ದಾರೆ. ಹೀಗಾಗಿ ಅವರು ಗುತ್ತಿಗೆದಾರರಿಗೆ ಬಿಲ್ ಕೊಡಿಸಲು ಮಧ್ಯ ಪ್ರವೇಶ ಮಾಡುವುದಿಲ್ಲ. ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ರಿಟ್ಜ್‌ ಕಾರ್ಲಟನ್‌ ನಲ್ಲಿ ಮೂರು ದಿನಗಳ “ಏಷ್ಯಾ ಜುವೆಲ್ಸ್‌ ಶೋ 2023” ಆರಂಭ

ಬೆಂಗಳೂರು : ವರ ಮಹಾಲಕ್ಷ್ಮಿ ಹಾಗೂ ಹಬ್ಬದ ಋತುವಿಗೆ ಮಹಿಳೆಯರನ್ನು ಸೆಳೆಯಲು ಬೆಂಗಳೂರಿನ ರಿಟ್ಜ್ ಕಾರ್ಲಟನ್ ನಲ್ಲಿ ಮೂರು ದಿನಗಳ “ಏಷ್ಯಾ ಜುವೆಲ್ಸ್ ಶೋ 2023” ಆರಂಭವಾಗಿದೆ. ದೇಶದ ಎಲ್ಲಾ ಭಾಗಗಳಿಂದ ಆಭರಣ ಮಾರಾಟಗಾರರು ತನ್ನ ಮಳಿಗೆಗಳನ್ನು ತೆರೆದಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ರಿಯಾಯಿತಿ ನೀಡಲಾಗಿದೆ. ಕೆಲವು ಆಭರಣ ಮಾರಾಟಗಾರರು ಮೇಕಿಂಗ್ ದರ ರದ್ದುಮಾಡಿದ್ದರೆ, ಇನ್ನೂ ಕೆಲ ಮಳಿಗೆಗಳು ಆಭರಣ ಮಾರಾಟದರದಲ್ಲಿ ರಿಯಾಯಿತಿ ನೀಡಿವೆ. ಒಂದೊಂದು ಮಳಿಗೆಯಲ್ಲಿ ಒಂದೊಂದು ಬಗೆಯ ವಿನ್ಯಾಸ, ವೈಶಿಷ್ಟ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.

ವಿಳಂಬ ಧೋರಣೆ ಸರಿಯಲ್ಲ, ಜನರಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಸೇವೆ ನೀಡಿ

ಸಕಾಲ ಯೋಜನೆಯ ಅಡಿ ವಿಳಂಬ ಧೋರಣೆ ಸರಿಯಲ್ಲ, ಜನರಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಸೇವೆಗಳನ್ನು ನೀಡಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ತಾಕೀತು ಮಾಡಿದರು.

Translate »
Scroll to Top