ಇಂಡಿಯನ್ ಮೂವ್ ಮೆಂಟ್ ಪಾರ್ಟಿಯಿಂದ ರಾಜ್ಯದಲ್ಲಿ 15 ಅಭ್ಯರ್ಥಿಗಳು ಕಣಕ್ಕೆ – ಮೊದಲ ಹಂತದಲ್ಲಿ 7 ಉಮೇದುವಾರರ ಪಟ್ಟಿ ಪ್ರಕಟ
ಬೆಂಗಳೂರು : ಇಂಡಿಯನ್ ಮೂವ್ ಮೆಂಟ್ ಪಾರ್ಟಿಯಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಒಟ್ಟು 15 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಮೊದಲ ಹಂತದಲ್ಲಿ 7 ಉಮೇದುವಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇಂಡಿಯನ್ ಮೂವ್ ಮೆಂಟ್ ಪಾರ್ಟಿ ರಾಜ್ಯಾಧ್ಯಕ್ಷ ಮಹದೇವ್ ಉರಗಾಂವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ರಿಸ್ಟೋಫರ್ ರಾಜ್ ಕುಮಾರ್, ಪಕ್ಷದ ಮುಖಂಡ ರಾಮಚಂದ್ರಯ್ಯ, ಮಹಿಳಾ ಘಟಕದ ಅಧ್ಯಕ್ಷರಾದ ರಷೀದಾ ಬೇಗಂ ಅವರು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು. ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಕ್ರಿಸ್ಟೋಫರ್ ರಾಜ್ ಕುಮಾರ್ ಅವರಿಗೆ ಇದೇ ಸಂದರ್ಭದಲ್ಲಿ …