ಬೆಂಗಳೂರಲ್ಲಿ ಉಂಟಾಗಲಿದೆ ಕೃತಕ ನೆರೆ ಪರಿಸ್ಥಿತಿ….!
ಬೆಂಗಳೂರು: ರಾಜ್ಯದಾದ್ಯಂತ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ಹಲವೆಡೆ ಈಗಾಗಲೇ ಅನೇಕ ಅನಾಹುತಗಳು ಸಂಭವಿಸಿವೆ. ಬೆಂಗಳೂರಿನಲ್ಲಿಯೂ ಹಲವೆಡೆ ಕೃತಕ ನೆರೆ ಪರಿಸ್ಥಿತಿ ಉಂಟಾಗಿದೆ. ಕೆಲವು ದಿನಗಳ ಹಿಂದಷ್ಟೇ ಕೆಆರ್ ಸರ್ಕಲ್ ಅಂಡರ್ಪಾಸ್ನಲ್ಲಿ ಕಾರೊಂದು ನೀರಿನಲ್ಲಿ ಮುಳುಗಿ ಯುವತಿಯೊಬ್ಬರು ಮೃತಪಟ್ಟಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮುಂಗಾರು ಮಳೆಗೆ ಬೆಂಗಳೂರು ಹೇಗೆ ಸಿದ್ಧಗೊಂಡಿದೆ ಮತ್ತು ಮಹಾನಗರದಲ್ಲಿ ಪ್ರವಾಹ ಭೀತಿ ಎದುರಿಸುತ್ತಿರುವ ಎಷ್ಟು ಪ್ರದೇಶಗಳಿವೆ ಎಂಬುದನ್ನು ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಸಮಿತಿಯ ಪಟ್ಟಿ ಮಾಡಿದೆ. ರಾಜ್ಯ ನೈಸರ್ಗಿಕ …