eshwarkandre

ಹುಲಿ ಉಗುರಿನ ವಿಚಾರಕ್ಕೆ ಕೇಂದ್ರದಿಂದ ಸುತ್ತೋಲೆ ಬಂದಿದೆ, ಈ ಬಗ್ಗೆ ಮಾಡಿ ತೀರ್ಮಾನಿಸುತ್ತೇವೆ -ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ಹುಲಿ ಉಗುರಿನ ವಿಚಾರಕ್ಕೆ ಕೇಂದ್ರದಿಂದ ನಮಗೆ ಸುತ್ತೋಲೆ ಬಂದಿದೆ. ಹುಲಿ ಉಗುರಿನ ವಿಚಾರಕ್ಕೆ ರಾಜ್ಯ ಮಟ್ಟದಲ್ಲಿ ಆದೇಶ ಹೊರಡಿಸಿದ್ದೀರಿ. ಇದು ನಿಮ್ಮ ವ್ಯಾಪ್ತಿಗೆ ಬರಲ್ಲ, ನಾವು ನರ್ಧಾ ರ ಮಾಡ್ತೀವಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಕೇಂದ್ರ ರ್ಕಾ ರದ ಅಧಿಕಾರಿಗಳ ಜೊತೆ ರ್ಚೆ ಮಾಡ್ತೇವೆ. ನಮ್ಮ ಆದೇಶದ ಗಡುವು ಮುಗಿದಿದೆ, ಕೆಲವರು ವಾಪಸ್ ತಂದಿದ್ದಾರೆ. ಕಾನೂನು ಇಲಾಖೆ ಜೊತೆಗೆ ರ್ಚೆ ಮಾಡಿ ತೀರ್ಮಾನ ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಮಣ್ಣಿನ ಗಣಪ ಪೂಜಿಸಿ, ಪರಿಸರ ಸಂರಕ್ಷಿಸಲು ಈಶ್ವರ ಖಂಡ್ರೆ ಮನವಿ

ಪರಿಸರದಿಂದ ಹುಟ್ಟಿದ ಗಣಪನಿಗೆ ಶ್ರದ್ಧಾ, ಭಕ್ತಿ ಸಮರ್ಪಿಸಲು, ಪರಿಸರ ಸ್ನೇಹಿಯಾದ ಗಣಪತಿ ಮೂರ್ತಿಗಳ ಪೂಜೆಯೇ ಸೂಕ್ತ ಪದ್ಧತಿ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬನ್ನೇರುಘಟ್ಟ, ಮೈಸೂರು ಮೃಗಾಲಯ ಅಭಿವೃದ್ಘಿಗೆ ಮಾಸ್ಟರ್ ಪ್ಲಾನ್ ಗೆ ಖಂಡ್ರೆ ಸೂಚನೆ

ಮೈಸೂರಿನಲ್ಲಿರುವ ಜಗದ್ವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಬೆಂಗಳೂರು ಹೊರ ವಲಯ ಬನ್ನೇರುಘಟ್ಟದಲ್ಲಿರುವ ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಮಹಾ ಯೋಜನೆ (ಮಾಸ್ಟರ್ ಪ್ಲಾನ್) ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ದಿವ್ಯಾಂಗರ ಸಮಸ್ಯೆ ಪರಿಹರಿಸಲು ಸಂಪುಟದಲ್ಲಿ ಚರ್ಚೆ: ಈಶ್ವರ ಖಂಡ್ರೆ

ಜನ ಸ್ಪಂದನಾ ಕಾರ್ಯಕ್ರಮದಲ್ಲಿ ವಿಕಲಚೇತನರ ಸಮಸ್ಯೆಗಳನ್ನು ಆಲಿಸಲು ವೇದಿಕೆಯಿಂದ ಕೆಳಗೆ ಇಳಿದು ಬಂದ ಈಶ್ವರ ಖಂಡ್ರೆ ಹಾಗೂ ರಹೀಂಖಾನ್ ಅವರು ದಿವ್ಯಾಂಗರಿಂದ ಮನವಿ ಪತ್ರ ಸ್ವೀಕರಿಸಿದರು.

ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ – ಈಶ್ವರ ಖಂಡ್ರೆ

ಜಿಲ್ಲೆಯ ಆಡಳಿತ ಸುಗಮವಾಗಿ ನಡೆಯಬೇಕು. ಜನರಿಗೆ ಸರ್ಕಾರಿ ಸೌಲಭ್ಯ, ಸೇವೆ ಯಾವುದೇ ಅಡ್ಡಿ ಇಲ್ಲದೆ ದೊರಕಬೇಕು. ತಾವು ಎಂದಿಗೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಂಸದ ಭಗವಂತ ಖೂಬಾ ಅವರ ಹೆಸರು ಹೇಳದೆ ತಿರುಗೇಟು ನೀಡಿದ್ದಾರೆ.

ಸಾಧ್ಯವಾದಷ್ಟು ಬೇಗ 5 ಗ್ಯಾರೆಂಟಿಗಳು ಜಾರಿ: ಈಶ್ವರ ಖಂಡ್ರೆ

ತುಮಕೂರು: ಕಾಂಗ್ರೆಸ್ ಪಕ್ಷ ನೀಡಿರುವ ೫ ಗ್ಯಾರಂಟಿಗಳ ಜಾರಿಯಲ್ಲಿ ಯಾವುದೇ ಗೊಂದಲವಿಲ್ಲ. ತಕ್ಷಣವೇ ಜಾರಿ ಮಾಡುವಂತೆ ಈಗಾಗಲೇ ಸೂಚನೆ ಕೊಡಲಾಗಿದೆ. ಆದಷ್ಟು ಬೇಗ ಭರವಸೆಗಳನ್ನು ಈಡೇರಿರಲಿವೆ ಎಂದು ನೂತನ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಇಂದಿಲ್ಲಿ ತಿಳಿಸಿದರು.

Translate »
Scroll to Top