ಮೂಲಭೂತ ಸೌಲಭ್ಯಗಳ ವಂಚಿತ ಹೆರಕಲ್‌ಗ್ರಾಮ
ಸಿರುಗುಪ್ಪ: ತಾಲೂಕಿನ ಹೆರಕಲ್ ಗ್ರಾಮದಲ್ಲಿರುವ ಬಸ್ ನಿಲ್ದಾಣವು ಶಿಥಿಲಾವ್ಯವಸ್ಥೆಯಲ್ಲಿದ್ದು ಅಪಾಯಕ್ಕೆ ಕಾದು ಕುಳಿತಿದೆ. ಸೂಕ್ತ ಚರಂಡಿ ವ್ಯವಸ್ಥೆ, ಸಿ.ಸಿ ಅಥವಾ ಡಾಂಬರೀಕರಣ ರಸ್ತೆ, ಕುಡಿಯುವ ಶುದ್ದ ನೀರಿನ ಸಮಸ್ಯೆಗಳಂತಹ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದೆ. ಗ್ರಾಮದಲ್ಲಿ ಹದಗೆಟ್ಟ ಮುಖ್ಯರಸ್ತೆ, ಹತ್ತಾರು ವರ್ಷಗಳೇ ಕಳೆದರೂ ಸಿ.ಸಿ ಕಾಣದ ಬೀದಿಗಳು, ಇನ್ನೊಂದೆಡೆ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ, ಸಿಸಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿರುವು ದರಿಂದ ಸಂಚಾರಕ್ಕೆ ಅಸ್ತವ್ಯಸ್ತವಾದರೇ ಕೆಲವಡೆ ಚರಂಡಿಯಲ್ಲಿ ಹೂಳು ತೆಗೆಯದೇ ಗಬ್ಬು ನಾರುತ್ತಿದೆ. ನೆರೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಮನೆಗಳೊಂದಿಗೆ …