ಡೇಟಾಬೇಸ್ (ದತ್ತಸಂಚಯ) ಮೂಲಕ ಸಹಕಾರಿ ಕ್ಷೇತ್ರದ ವಿಸ್ತರಣೆ, ಅಭಿವೃದ್ಧಿ ಮತ್ತು ವಿತರಣೆಯನ್ನು ಖಾತ್ರಿ ಪಡಿಸಿಕೊಳ್ಳಲಾಗುವುದು: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ
ನವದೆಹಲಿ : ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಡೇಟಾಬೇಸ್ಅನ್ನು ಉದ್ಘಾಟಿಸಿದರು. ಸಹಕಾರಿ ಆಂದೋಲನದೊಂದಿಗೆ ಸಂಬಂಧ ಹೊಂದಿರುವ ಶಾ, ‘ಸಹಕಾರಿ ಕ್ಷೇತ್ರದ ವಿಸ್ತರಣೆ, ಅಭಿವೃದ್ಧಿ ಮತ್ತು ವಿತರಣೆಯನ್ನು ಡೇಟಾಬೇಸ್ ಮೂಲಕ ಖಚಿತಪಡಿಸಿಕೊಳ್ಳಲಾಗುವುದು’ ಎಂದು ಹೇಳಿದರು.