death news

ನಾರಿಮನ್ ನಿಧನಕ್ಕೆ ಸಚಿವ ಎಂಬಿ.ಪಾಟೀಲ್ ಸಂತಾಪ

ಬೆಂಗಳೂರು: ಕಾವೇರಿ ಜಲ ವಿವಾದದಲ್ಲಿ ರಾಜ್ಯದ ಪರ ವಾದಿಸಿ, ನ್ಯಾಯ ಒದಗಿಸಿದ ಖ್ಯಾತ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಅವರ ನಿಧನಕ್ಕೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಸ್ತೆ ಅಪಘಾತ : ರೈತ ಮುಖಂಡ ಕಾರ್ತಿಕ್ ನಿಧನ

ಹೊಸಪೇಟೆ : ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಬೂದಗುಂಪಾ ಕ್ರಾಸ್ ಬಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ರೈತ ನಾಯಕ ಜೆ. ಕಾರ್ತಿಕ್ ( 40 ) ಸಾವನ್ನಪ್ಪಿದ್ದಾರೆ.

ಹಿರಿಯ ಪತ್ರಕರ್ತ ಮಿಂಚು ಶ್ರೀನಿವಾಸ್ ನಿಧನ

ಬೆಂಗಳೂರು: ಹಿರಿಯ ಪತ್ರಕರ್ತರು, ಛಾಯಾಗ್ರಾಹಕರು, ವರದಿಗಾರರು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ಕೆ.ಮಿಂಚು ಶ್ರೀನಿವಾಸ್ ಅವರು ಮಂಗಳವಾರ ರಾತ್ರಿ ನಿಧನರಾದರು.

ಕಲುಷಿತ ನೀರು ಪೂರೈಕೆಯಿಂದ ಓರ್ವ ಬಾಲಕ ಸಾವು

ಹಲವರು ಆಸ್ಪತ್ರೆಗೆ ದಾಖಲು: ಪಿಡಿಒ ರೇಣುಕಾರನ್ನು ತರಾಟಗೆ ತೆಗೆದುಕೊಂಡ ಗ್ರಾಮಸ್ಥರು. ಅರಕೇರಾ : ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರು ಅಸ್ವಸ್ಥರಾದ ಘಟನೆ ಜರುಗಿದ್ದು, ಓರ್ವ ಬಾಲಕ ಶುಕ್ರವಾರ ಸಾವಿಗೀಡಾದ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಸುಮಾರು 50 ಕ್ಕೂ ಹೆಚ್ಚು ಜನ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದು, ಕೆಲವರು ಗುಣಮುಖರಾಗಿದ್ದಾರೆ. ಇನ್ನುಳಿದವರಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿರುವ ಕುಡಿಯುವ ನೀರಿನ ಪೈಪ್ ಚರಂಡಿಯಲ್ಲಿ …

ಕಲುಷಿತ ನೀರು ಪೂರೈಕೆಯಿಂದ ಓರ್ವ ಬಾಲಕ ಸಾವು Read More »

ನಿಧನ ವಾರ್ತೆ

ಕವಿತಾಳ ,ಫೆ,20 : ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ದುರುಗಮ್ಮ ಮ್ಯಾಗಳಮನಿ ಕವಿತಾಳ ವಯಸ್ಸು – 94 ಇಂದು ಬೆಳಿಗ್ಗಿನ ಜಾವ ಆರು ಘಂಟೆಯ ಸುಮಾರಿಗೆ ವಯೋ ಸಹಜತೆಯಿಂದ ಮೃತ ಪಟ್ಟಿರುತ್ತಾರೆ. ಇವರಿಗೆ ಒಬ್ಬ ತಂಗಿ, ಒಬ್ಬ ಮಗ, ನಾಲ್ಕು ಜನ ಹೆಣ್ಣು ಮಕ್ಕಳು, 30 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು. ಇವರ ಅಂತ್ಯ ಕ್ರಿಯೆಯೂ ಇಂದು ಸಂಜೆ ಪಟ್ಟಣದ ರುದ್ರ ಭೂಮಿಯಲ್ಲಿ ನಡೆಯಲಿದೆ.

Translate »
Scroll to Top