chief minister

ಮುಂದಿನ ವಾರ ದೆಹಲಿಗೆ ಬರುವಂತೆ ಮುಖ್ಯಮಂತ್ರಿಗೆ ಬುಲಾವ್

ಬೆಂಗಳೂರು,ಜನವರಿ,19-ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಬಿಜೆಪಿ ವರಿಷ್ಟರು ಗ್ರೀನ್ ಸಿಗ್ನಲ್ ನೀಡಿದ್ದು ಈ ಸಂಬಂಧ ಚರ್ಚಿಸಲು ಮುಂದಿನ ವಾರ ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಲಾವ್ ನೀಡಿದ್ದಾರೆ. ಬಿಜೆಪಿಯ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ಸಂಪುಟ ಪುನರ್ ರಚನೆಗೆ ವರಿಷ್ಟರ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಮತ್ತು ಸಚಿವರ ಜತೆ ರಹಸ್ಯ ಚರ್ಚೆ ಆರಂಭಿಸಿದ್ದಾರೆ. ಇದರ ಆರಂಬಿಕ ಸುತ್ತಿನಲ್ಲಿ ಇಂದು ಮಾಜಿ …

ಮುಂದಿನ ವಾರ ದೆಹಲಿಗೆ ಬರುವಂತೆ ಮುಖ್ಯಮಂತ್ರಿಗೆ ಬುಲಾವ್ Read More »

ಕೋವಿಡ್ ನಿರ್ಬಂಧ ಸಡಲಿಕೆ: ತಜ್ಞರ ಸಭೆ ನಂತರ ತೀರ್ಮಾನ

ಬೆಂಗಳೂರು, ಜನವರಿ 19: ಕೋವಿಡ್ ನಿಯಮ ಸಡಿಲಿಕೆ ಕುರಿತು ತಜ್ಞರ ಸಭೆಯಲ್ಲಿ ಚರ್ಚಿಸಿ ದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಈ ಬಾರಿಯ ಕೋವಿಡ್ ಹಿನ್ಮೆಲೆಯಲ್ಲಿ ಆಸ್ಪತ್ರೆ ದಾಖಲಾತಿ ಪ್ರಮಾಣ ಕಡಿಮೆಯಿದೆ. ಹಾಗಾಗಿ ದಿನನಿತ್ಯದ ಕೆಲಸ ಮಾಡಿಕೊಂಡು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದರೆ ಅನುಕೂಲವಾಗುತ್ತದೆ ಎಂಬ ಭಾವನೆ ಇದೆ. ತಜ್ಞರು ಇದನ್ನು ಪರಾಮರ್ಶೆ ಮಾಡುತ್ತಿದ್ದು, ಅವರು …

ಕೋವಿಡ್ ನಿರ್ಬಂಧ ಸಡಲಿಕೆ: ತಜ್ಞರ ಸಭೆ ನಂತರ ತೀರ್ಮಾನ Read More »

ಕೋವಿಡ್ ಏರಿಕೆ: ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

ಮುಖ್ಯಾಂಶಗಳು *ಸೋಂಕು ಕಡಿಮೆಯಾದ ನಂತರ ಜಲಧಾರೆ*ಕಾಂಗ್ರೆಸ್ ಪಕ್ಷದಂತೆ ನಮಗೆ ಧಾವಂತ ಇಲ್ಲ*ನೀರಾವರಿ ವಿಷಯದಲ್ಲಿ ಕಾಂಗ್ರೆಸ್ ರಾಜ್ಯದ ದಿಕ್ಕು ತಪ್ಪಿಸುತ್ತಿದೆ*ಜಲಧಾರೆ ಬಗ್ಗೆ ಜನರ ಮನೆ ಬಾಗಿಲಿಗೇ ಮಾಹಿತಿ*ಶೀಘ್ರದಲ್ಲೇ ವಿಧಾನಸಭೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಬೆಂಗಳೂರು,ಜನವರಿ,18 : ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣಕ್ಕೆ ಈ ತಿಂಗಳ 26ರಿಂದ ಆರಂಭವಾಗಬೇಕಿದ್ದ ಜನತಾ ಜಲಧಾರೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು ಮಾಜಿ ಮುಖ್ಯಮಂತ್ರಿಗಳು. ರಾಜ್ಯದ ಎಲ್ಲಾ ಭಾಗದಲ್ಲೂ …

ಕೋವಿಡ್ ಏರಿಕೆ: ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ Read More »

ದೇಶದ ಪ್ರಧಾನಿ ಗೆ ಅಭಿನಂದನೆ ಸಲ್ಲಿಸಿದ ಭಾಜಪಾ ಜಿಲ್ಲಾಧ್ಯಕ್ಷ

ಕೊಪ್ಪಳ,ಜನವರಿ, 18 :- ಭಾರತದಲ್ಲಿ ಕೋವಿಡ್ ಲಸಿಕೆ ಒಂದು ವರ್ಷ: ವಿಶ್ವದ ಅತಿ ದೊಡ್ಡ ಮತ್ತು ವೇಗವಾದ ಲಸಿಕೆ ಅಭಿಯಾನ- ಚರ್ಚೆಗೆ ಪೂರಕ ಬಿಂದುಗಳು ನಿಖರವಾಗಿ ಒಂದು ವರ್ಷದ ಹಿಂದೆ, ಭಾರತವು ಲಸಿಕೆ ಹಾಕುವ ಪ್ರಯಾಸಕರ ಅಭಿಯಾನವನ್ನು ಪ್ರಾರಂಭಿಸಿತು. ಭೀಕರ ಕೋವಿಡ್ ಸಾಂಕ್ರಾಮಿಕದ ಮಧ್ಯೆ 135 ಕೋಟಿ ಜನರು ಸಿಲುಕುವ ಅಪಾಯವಿತ್ತು. ಆದರೆ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಅಸಾಧ್ಯ ಅಂದುಕೊಂಡಿದ್ದ ಕೆಲಸ ಸಾಧ್ಯವಾಯಿತು. ಇಡೀ ಜಗತ್ತು ನಮ್ಮನ್ನು ಮೆಚ್ಚಿದೆ. ಇದು ಗೌರವಾನ್ವಿತ ಪ್ರಧಾನಿ …

ದೇಶದ ಪ್ರಧಾನಿ ಗೆ ಅಭಿನಂದನೆ ಸಲ್ಲಿಸಿದ ಭಾಜಪಾ ಜಿಲ್ಲಾಧ್ಯಕ್ಷ Read More »

ರಾಷ್ಟ್ರೀಯ ನವೋದ್ಯಮ ದಿನದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಬೆಂಗಳೂರು,ಜನವರಿ,16 : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ  ಹೆಚ್ಚುವರಿಯಾಗಿ 75 ನವೋದ್ಯಮಗಳಿಗೆ ಸೇರಿದಂತೆ ಈ ವರ್ಷ ರಾಜ್ಯದಲ್ಲಿ ಒಟ್ಟು 200 ನವೋದ್ಯಮಗಳಿಗೆ ಗರಿಷ್ಠ ತಲಾ 50 ಲಕ್ಷ ರೂ.ಗಳವರೆಗೆ ಮೂಲನಿಧಿ (ಸೀಡ್ ಫಂಡ್) ಕೊಡಲಾಗುವುದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪ್ರಪ್ರಥಮ `ರಾಷ್ಟ್ರೀಯ ನವೋದ್ಯಮ ದಿನ’ದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ ಸರಿಸುಮಾರು 500 ಸ್ಟಾರ್ಟ್ ಅಪ್ ಗಳಿಗೆ ಅನುದಾನ ಕೊಡಲಾಗಿದ್ದು, ಮೂಲನಿಧಿ ಕೊಡುವ ಉಪಕ್ರಮ ಬೇರಾವ …

ರಾಷ್ಟ್ರೀಯ ನವೋದ್ಯಮ ದಿನದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ Read More »

ಚೆನ್ನವೀರ ಕಣವಿ ಶೀಘ್ರ ಚೇತರಿಕೆಗೆ ಮುಖ್ಯಮಂತ್ರಿಗಳ ಹಾರೈಕೆ

ಬೆಂಗಳೂರು, ಜನವರಿ 16: ಉಸಿರಾಟದ ತೊಂದರೆಯಿಂದ ಧಾರವಾಡದ ಎಸ್.ಡಿ.ಎಂ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಡಿನ ಹಿರಿಯ ಸಾಹಿತಿ, ಕವಿ, ನಾಡೋಜ ಡಾ|| ಚೆನ್ನವೀರ ಕಣವಿ ಅವರು ಶೀಘ್ರ ವಾಗಿ ಗುಣಮುಖರಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ. ಕಣವಿ ಅವರ ಆರೋಗ್ಯದ ಕುರಿತು ಅವರ ಕುಟುಂಬದ ಸದಸ್ಯರೊಂದಿಗೆ ಇಂದು ಮಾತನಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮುಖ್ಯ ಮಂತ್ರಿಗಳು ಡಾ|| ಚೆನ್ನವೀರ ಕಣವಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಟ್ವೀಟ್ ಮಾಡಿದ್ದಾರೆ.

ಅನುದಾನದ ಸದುಪಯೋಗಕ್ಕೆ ಈರಣ್ಣ ಕಡಾಡಿ ಮನವಿ

ಬೆಂಗಳೂರು,ಜನವರಿ,14 : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ರೂ. 642.26 ಕೋಟಿ ಮಂಜೂರು ಮಾಡಿದ್ದು, ಇದು ಹಿಂದಿನ ಯಾವುದೇ ಸರ್ಕಾರಗಳಿಗಿಂತ ದೊಡ್ಡ ಪ್ರಮಾಣದ ಅನುದಾನವಾಗಿದೆ. ಇದನ್ನು ರೈತರು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕೆಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರೂ ಆದ ಈರಣ್ಣ ಕಡಾಡಿ ಅವರು ವಿನಂತಿಸಿದ್ದಾರೆ. ಗರಿಷ್ಠ ಅನುದಾನ ನೀಡಿರುವ ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟಕ್ಕೆ ಈರಣ್ಣ ಕಡಾಡಿ ಅವರು ಧನ್ಯವಾದ ಸಮರ್ಪಿಸಿದ್ದಾರೆ. ಪ್ರಧಾನಿ …

ಅನುದಾನದ ಸದುಪಯೋಗಕ್ಕೆ ಈರಣ್ಣ ಕಡಾಡಿ ಮನವಿ Read More »

ಮುಖ್ಯಮಂತ್ರಿ ಅವರಿಂದ ಪತ್ರಿಕಾ ಪ್ರಕಟಣೆ

ಬೆಂಗಳೂರು,ಜನವರಿ,13 : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿರುವ ಮುಖ್ಯಮಂತ್ರಿಗಳು ನಾನು ಮೇಕೆದಾಟು ಯೋಜನೆಯ ಬಗ್ಗೆ ನಿಮ್ಮೆಲ್ಲರ ವಿಶ್ವಾಸದೊಂದಿಗೆ ಅನುಷ್ಠಾನಕ್ಕಾಗಿ ಬೇಕಾಗಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಿದ್ದನಿದ್ದೇನೆ. ಕೊರೊನಾ ಮಹಾಮಾರಿಯ ಮೂರನೇ ಅಲೆಯು ತೀವ್ರವಾಗಿ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಜನಜೀವನ ವಿಶೇಷವಾಗಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಹೆಚ್ಚು ಜನರನ್ನು ಸೇರಿಸಿ ಪಾದಯಾತ್ರೆ ಮುಂತಾದವುಗಳನ್ನು ಮಾಡುವುದು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸರಿ ಇರುವುದಿಲ್ಲ ಈಗಾಗಲೇ ಮಾನ್ಯ …

ಮುಖ್ಯಮಂತ್ರಿ ಅವರಿಂದ ಪತ್ರಿಕಾ ಪ್ರಕಟಣೆ Read More »

ನಿಯಮ ಉಲ್ಲಂಘಿಸುವವರ ವಿರುದ್ಧ ಭೇದಭಾವವಿಲ್ಲದೆ ಕ್ರಮ ಸಿಎಂ

ಬೆಂಗಳೂರು,ಜ,10 : ಕೋವಿಡ್ ನಿಯಮ ಉಲ್ಲಂಘಿಸುವವರು ಯಾರೇ ಆಗಿರಲಿ. ಯಾವುದೇ ಭೇದ ಭಾವವಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆ ಕೈಗೊಂಡವರ ಪೈಕಿ 30 ಜನರ ಮೇಲೆ ಎಫ್ ಐ ಆರ್ ಆಗಿರುವ ಬಗ್ಗೆ ಪ್ರತಿಕ್ರಯಿಸಿದರು. ಪಾದಯಾತ್ರೆಯ ಸಂಘಟಕರು, ಕಾನೂನು ಉಲ್ಲಂಘನೆ ಮಾಡಿರುವವರ ಮೇಲೆ ಕಾನೂನಿನ ಕ್ರಮ ಜರುಗಿಸಲಾಗುತ್ತಿದೆ ಎಂದರು. ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವವರ ಆರೋಗ್ಯದ ಚಿಂತೆ ಸರ್ಕಾರಕ್ಕಿದೆ. ಸುದೀರ್ಘವಾಗಿ ನಡೆದು ಬಂದವರ ಆರೋಗ್ಯ …

ನಿಯಮ ಉಲ್ಲಂಘಿಸುವವರ ವಿರುದ್ಧ ಭೇದಭಾವವಿಲ್ಲದೆ ಕ್ರಮ ಸಿಎಂ Read More »

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಭೆ ನಡೆಸಿದ ಮುಖ್ಯಮಂತ್ರಿ

ಬೆಂಗಳೂರು,ಡಿ,30 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳ ಸಭೆ ನಡೆಸಿದರು. ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್. ಈಶ್ವರಪ್ಪ ಹಾಗೂ ಸಚಿವ ಸಂಪುಟದ ಇತರ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Translate »
Scroll to Top