Ballari

ಬಳ್ಳಾರಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ

ಬಳ್ಳಾರಿ,ಜ.೨೪: ಬಳ್ಳಾರಿ ನಗರದಲ್ಲಿ ಅತ್ಯಾಧುನಿಕವಾಗಿ, ಅಂತರ್‌ರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ, ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ಇಂದು ಕ್ರಿಕೆಟ್ ಸ್ಟೇಡಿಯಂ ಸ್ಥಳ ಪರಿಶೀಲನೆ ನಡೆಸಿದರು. ಬಳ್ಳಾರಿ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿಯೇ ಇರುವ ೧೮ ಎಕರೆಗೂ ಹೆಚ್ಚು ಸ್ಥಳವನ್ನು, ನೂತನವಾಗಿ ನಿರ್ಮಿಸಲುದ್ದೇಶಿಸಿರುವ ಅಂತರ್‌ರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂಗಾಗಿ ತೆಗೆದಿರಿಸಲಾಗಿದ್ದು, ಶಾಸಕ ಸೋಮಶೇಖರರೆಡ್ಡಿಯವರು ಇಂದು ಬೆಳಿಗ್ಗೆ, ಜಿಲ್ಲೆಯ ಅಧಿಕಾರಿಗಳು ಹಾಗೂ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಸದಸ್ಯರೊಂದಿಗೆ, …

ಬಳ್ಳಾರಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ Read More »

ಸಚಿವ ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ: ಸೋಮಶೇಖರರೆಡ್ಡಿ ಖುಷ್

ಬಳ್ಳಾರಿ,ಜ.25: ಬಳ್ಳಾರಿ ಜಿಲ್ಲೆಯ ನೂತನ ಉಸ್ತುವಾರಿ ಸಚಿವರನ್ನಾಗಿ ನಮ್ಮ ಆತ್ಮೀಯರು, ಹಿತೈಷಿಗಳೂ ಆಗಿರುವ ರಾಜ್ಯದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ನೇಮಕ ಮಾಡಿರುವುದು ನನಗೆ ಅತ್ಯಂತ ಸಂತೋಷ, ಖುಷಿ ತಂದಿದ್ದು, ಸ್ವಾಗತಿಸುತ್ತೇನೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದ್ದಾರೆ.ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡುವಂತೆ ನಾನು ಕಳೆದ ಅನೇಕ ತಿಂಗಳುಗಳಿಂದಲೂ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಹಾಗೂ ಬಿಜೆಪಿ ವರಿಷ್ಠರನ್ನು ಮನವಿ ಮಾಡುತ್ತಾ ಬಂದಿದ್ದೇನೆ. ಮುಖ್ಯಮಂತ್ರಿಗಳು ಕಡೆಗೂ ನಮ್ಮ ಮನವಿಗೆ, ಹಂಬಲದ ಬೇಡಿಕೆಗೆ …

ಸಚಿವ ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ: ಸೋಮಶೇಖರರೆಡ್ಡಿ ಖುಷ್ Read More »

ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ, ಅಧಿಕಾರಿಗಳ ವಶಕ್ಕೆ

ಸಿರುಗುಪ್ಪ,ಜನವರಿ,25 : ನಗರದ ಹೊರವಲಯದ ಅರಳಿಗನೂರು ರಸ್ತೆಯ ಲಕ್ಷ್ಮಿ ನರಸಿಂಹ ರೈಸ್ ಇಂಡಸ್ಟ್ರೀಸ್ ಆವರಣದಲ್ಲಿ ಅಕ್ರಮವಾಗಿ ಸಾಗಿಸಲು ಲಾರಿಯಲ್ಲಿ ಲೋಡ್ ಮಾಡಿದ್ದ ೫೦ ಕೆ. ಜಿ ತೂಕದ ೫೬೩ ಚೀಲ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿ ಹಲವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ೨೫,೮೯೦ ಕೆ.ಜಿ ತೂಕದ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಸರಕಾರದ ಎಪಿಎಲ್ ದರದ ಪ್ರಕಾರ ಕೆ.ಜಿಗೆ ೧೫ ರೂ. ನಂತೆ ಒಟ್ಟು ೩, ೮೮, ೩೫೦ ರೂ. ಮೌಲ್ಯದ …

ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ, ಅಧಿಕಾರಿಗಳ ವಶಕ್ಕೆ Read More »

ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಸಿದ್ಧ

ಹೊಸಪೇಟೆ,ಜನವರಿ,25 : ನಗರದ ಡ್ಯಾಂ ಟಿಎಸ್‌ಪಿ ಕಾರ್ಖಾನೆ ಆವರಣದಲ್ಲಿ ಸಿದ್ಧಗೊಂಡಿರುವ ನೂತನ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ತಾತ್ಕಾಲಿಕ ಕಟ್ಟಡ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಜ.೨೬ರಂದು ಲೋಕಾರ್ಪಣೆಗೊಳ್ಳಲಿದೆ. ಸಚಿವ ಆನಂದ್ ಸಿಂಗ್ ನೂತನ ಕಚೇರಿಗೆ ಚಾಲನೆ ನೀಡಲಿದ್ದು, ವಿಜಯನಗರ ಜಿಲ್ಲೆಯ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ. ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಯನ್ನು ೨೦೨೧ರ ಫೆಬ್ರವರಿ ೮ರಂದು ಅಧಿಕೃತವಾಗಿ ಘೋಷಣೆ ಮಾಡಿತ್ತು. ಅಕ್ಟೋಬರ್ ೨ ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕೃತ ಚಾಲನೆ ನೀಡಿದ್ದಾರೆ. ಆಗಿನಿಂದ ಜಿಲ್ಲಾಧಿಕಾರಿಯವರು ನಗರದ …

ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಸಿದ್ಧ Read More »

ಅಖಿಲ ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನಾ ದಿನ

ಬಳ್ಳಾರಿ,ಜನವರಿ,25 : ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ವರ್ಷ ಪಠ್ಯಕ್ರಮಗಳು ನಡೆಯಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆ ಅವರಿಗೆ ಕೇವಲ ಏಳು ತಿಂಗಳುಗಳಷ್ಟೇ ತರಗತಿಗಳು ನಡೆದಿವೆ. ಒಂದೆಡೆ ಸಂಪೂರ್ಣವಾಗಿ ತರಗತಿಗಳು ನಡೆಯದ ಕಾರಣ ಪಠ್ಯಕ್ರಮ ಪೂರ್ಣಗೊಂಡಿಲ್ಲ. ಅವಶ್ಯಕ ಕ್ಲಿನಿಕಲ್ ಪೋಸ್ಟಿಂಗ್ ನಡೆದಿಲ್ಲ. ಅಲ್ಲದೇ ಈ ವಿದ್ಯಾರ್ಥಿಗಳು ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಓಮೈಕ್ರಾನ್ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಆದರೆ ಇದ್ಯಾವುದನ್ನು ಪರಿಗಣಿಸದ RGUHS ಇದೇ ಫೆಬ್ರವರಿ …

ಅಖಿಲ ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನಾ ದಿನ Read More »

ಬಳ್ಳಾರಿಯಲ್ಲಿ 12ನೇ ರಾಷ್ಟ್ರೀಯ ಮತದಾರರ ದಿನ ಆಚರಣೆ

ಬಳ್ಳಾರಿ, ಜ.25: ಮತದಾರರ ಗುರುತಿನ ಚೀಟಿ ಎನ್ನುವುದು ಕೇವಲ ಐಡಿ ಕಾರ್ಡ್ ಅಲ್ಲ;ದೇಶದ ಯೋಗ್ಯ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತ್ತು ದೇಶದ ವ್ಯವಸ್ಥೆ ಸರಿಯಾಗಿ ಮುನ್ನಡೆಸುವಂತೆ ಮಾಡುವ ಪ್ರಮುಖ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೇಳಿದರು. ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ವತಿಯಿಂದ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಅತ್ಯಂತ ಅಮೂಲ್ಯವಾದುದು. …

ಬಳ್ಳಾರಿಯಲ್ಲಿ 12ನೇ ರಾಷ್ಟ್ರೀಯ ಮತದಾರರ ದಿನ ಆಚರಣೆ Read More »

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಿ.ಶ್ರೀರಾಮುಲು ನೇಮಕ

ಬಳ್ಳಾರಿ,: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ್ದು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಿ.ಶ್ರೀರಾಮುಲು ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಇದ್ದ ಸಚಿವ ಆನಂದ್ ಸಿಂಗ್ ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ನೀಡಿದ್ದರು.

ನೂತನ ಜಿಲ್ಲಾ ಉಸ್ತುವಾರಿ ಸಚಿವರುಗಳ ಪಟ್ಟಿ

ಬೆಂಗಳೂರು ನಗರ – ಬೊಮ್ಮಾಯಿ ಬೆಳಗಾವಿ – ಗೋವಿಂದ ಕಾರಜೋಳ ಚಿಕ್ಕಮಗಳೂರು – ಕೆ.ಎಸ್.ಈಶ್ವರಪ್ಪ ಬಳ್ಳಾರಿ – ಶ್ರೀರಾಮುಲು ಚಾಮರಾಜನಗರ – ವಿ. ಸೋಮಣ್ಣ ವಿಜಯಪುರ -ಉಮೇಶ್ ಕತ್ತಿ ಉಡುಪಿ – ಎಸ್.ಅಂಗಾರ ತುಮಕೂರು – ಆರಗ ಜ್ಞನೇಂದ್ರ ರಾಮನಗರ – ಅಶ್ವತ್ಥ ನಾರಾಯಣ ಬಾಗಲಕೋಟೆ – ಸಿಸಿ ಪಾಟೀಲ್ ಕೊಪ್ಪಳ – ಆನಂದ ಸಿಂಗ್ ಉತ್ತರ ಕನ್ನಡ – ಕೋಟಾ ಯಾದಗಿರಿ – ಪ್ರಭು ಚವ್ಹಾಣ್ ಕಲಬುರಗಿ – ಮುರುಗೇಶ್ ನಿರಾಣಿ ಹಾವೇರಿ – ಶಿವರಾಮ್ …

ನೂತನ ಜಿಲ್ಲಾ ಉಸ್ತುವಾರಿ ಸಚಿವರುಗಳ ಪಟ್ಟಿ Read More »

ಅಂಗವಿಕಲರಿಗೆ ಉಚಿತ ಗಾಲಿ ಕುರ್ಚಿ

ಮರಿಯಮ್ಮನ ಹಳ್ಳಿ : ಒಬ್ಬ ವ್ಯಕ್ತಿ ಧೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಪರಿಪೂರ್ಣವಾಗಿರುವ ಸುಂದರ ಅವಸ್ಥೆಯೇ ಆರೋಗ್ಯ ಇದು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವ್ಯಾಖ್ಯಾನ. ಆರೋಗ್ಯವೆಂಬುವುದು ನಮ್ಮೆಲ್ಲಾ ಅವಶ್ಯಕತೆಗಳಲ್ಲೊಂದಾಗಿದ್ದು ಪ್ರತಿಯೊಬ್ಬರೂ ಆರೋಗ್ಯದಿಂದಿರಬೇಕೆಂದು ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮುಖ್ಯಸ್ಥರಾದ ಗಣೇಶ್ ಹೆಗಡೆ ರವರು ನುಡಿದರು. ಅವರು ಪಟ್ಟಣ ಸಮೀಪದ ತುಂಗ ಭದ್ರಾ ಅತಿಥಿ ಗೃಹದಲ್ಲಿ ಬಿ.ಎಂ.ಎಂ.ಇಸ್ಪಾತ್ ಕಂಪನಿ ಹಾಗೂ ಜೆ.ಎಸ್.ಡಬ್ಲೂ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆಯ್ದ ಅಂಗವಿಕಲರಿಗೆ ಉಚಿತ ಗಾಲಿ …

ಅಂಗವಿಕಲರಿಗೆ ಉಚಿತ ಗಾಲಿ ಕುರ್ಚಿ Read More »

Translate »
Scroll to Top