ಬೆಂಗಳೂರು: ಗ್ರಾಹಕರ ಅನುಕೂಲತೆಗೆ ಅನುಗುಣವಾಗಿ ಮನೆ ಬಾಗಿಲಿಗೆ ಸರಕು ಪೂರೈಸುವುದರಲ್ಲಿ ಭಾರತದಲ್ಲಿ ಪ್ರವರ್ತಕ ಸಂಸ್ಥೆಯಾಗಿರುವ ಸ್ವಿಗಿ ಲಿಮಿಟೆಡ್ (ಕಂಪನಿ), 2024ರ ನವೆಂಬರ್ 6ರಂದು ತನ್ನ ಇನಿಶಿಯಲ್ ಪಬ್ಲಿಕ್ ಆಫರ್ (ಐಪಿಒ) ಆರಂಭಿಸಲಿದೆ.
ಈ ಬಿಡ್/ ಕೊಡುಗೆಯು 2024ರ ನವೆಂಬರ್ 8 (ಶುಕ್ರವಾರ) ಕೊನೆಗೊಳ್ಳಲಿದೆ. ಸಾಂಸ್ಥಿಕ ಹೂಡಿಕೆದಾರರ ಬಿಡ್ಡಿಂಗ್, ಬಿಡ್/ಕೊಡುಗೆ ತೆರೆಯುವ ದಿನಾಂಕದ ಮೊದಲು ಒಂದು ಕೆಲಸದ ದಿನವಾಗಿರಲಿದ್ದು, 2024ರ ನವೆಂಬರ್ 5ರಂದು ನಡೆಯಲಿದೆ.
ಈ ಕೊಡುಗೆಯ ಬೆಲೆ ಪಟ್ಟಿಯನ್ನು ಪ್ರತಿ ಈಕ್ವಿಟಿ ಷೇರಿಗೆ ₹ 371 ರಿಂದ ₹ 390 ರಂತೆ ನಿಗದಿಪಡಿಸಲಾಗಿದೆ. ಕನಿಷ್ಠ 38 ಈಕ್ವಿಟಿ ಷೇರುಗಳಿಗೆ ಮತ್ತು ನಂತರ 38 ಈಕ್ವಿಟಿ ಷೇರುಗಳ ಗುಣಕಗಳಲ್ಲಿ ಬಿಡ್ ಮಾಡಬಹುದಾಗಿದೆ.
Facebook
Twitter
LinkedIn
WhatsApp
Telegram
Email
Print