ಬಿಜೆಪಿ ಹೋರಾಟಕ್ಕೆ ಪರಿಶಿಷ್ಟ ಸಮುದಾಯಗಳ ಮುಖಂಡರ ಬೆಂಬಲ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮೈಸೂರಿನಲ್ಲಿ ಇದೇ 10ರಂದು ನಡೆಯುವ ಬೃಹತ್ ಸಮಾವೇಶಜನಾಕ್ರೋಶ ಸಭೆಯಲ್ಲಿ ಬೆಂಬಲಕ್ಕೆ ನಿಲ್ಲುವುದಾಗಿ ಹಾಗೂ ಪಾಲ್ಗೊಳ್ಳುವುದಾಗಿ ಪರಿಶಿಷ್ಟ ಸಮುದಾಯಗಳ ಮುಖಂಡರು ಭರವಸೆ ಕೊಟ್ಟಿದ್ದಾರೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಮಂಡ್ಯ ಜಿಲ್ಲೆಯ ಗಾಣಗನೂರಿನಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ನಡೆದ ಪರಿಶಿಷ್ಟ ಜಾತಿಪಂಗಡಗಳ ಮುಖಂಡರ ಸಭೆಯ ಬಳಿಕ ಅವರು ಸಭೆಯ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದರು.

 

ನಮ್ಮ ಹೋರಾಟ ಇಲ್ಲಿಗೇ ನಿಲ್ಲದು. ಇಡೀ ರಾಜ್ಯದಲ್ಲಿ ಹೋರಾಟ ಮುಂದುವರೆಯಲಿದೆ. ಆ ಹೋರಾಟಕ್ಕೆ ಎಲ್ಲ ದಲಿತ ಸಂಘಟನೆಗಳುದಲಿತ ಮುಖಂಡರು ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಮಾಡಿದ ದ್ರೋಹಕ್ಕೆ ಪ್ರತಿಯಾಗಿ ದಲಿತರು ತಮ್ಮನ್ನು ಬಿಜೆಪಿ ಹೋರಾಟದಲ್ಲಿ ಜೋಡಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.ವಾಲ್ಮೀಕಿ ನಿಗಮದ 187 ಕೋಟಿಯ ಹಗರಣಮೂಡ ಹಗರಣ ಮತ್ತು ಎಸ್‌ಸಿಎಸ್‌ಟಿಗಳಿಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿದ ಪ್ರಕರಣಗಳಲ್ಲಿ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಾಜಿ ಸಚಿವ ಕೊಳ್ಳೇಗಾಲ ಮಹೇಶ್ ಅವರು ಮಾತನಾಡಿವಿಧಾನಸಭೆಯಲ್ಲಿ ಉತ್ತರ ಸಿಕ್ಕಿದ್ದರೆ ನಾವು ಬೀದಿಗೆ ಬರುತ್ತಿರಲಿಲ್ಲ. ನಿಮ್ಮ ಧ್ವನಿಗೆ ವಿಧಾನಸಭೆಗಳುಸಂಸತ್ತುಅದರಲ್ಲೂ ವಿಶೇಷವಾಗಿ ಆಡಳಿತ ಪಕ್ಷಸರಕಾರಗಳು ಕಿವಿ ಕೊಡದೆ ಇದ್ದಲ್ಲಿ ಜನರ ಬಳಿ ಹೋಗಿ ಎಂದು ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ಹೇಳಿದ್ದರು. ಅದೇಕಾರಣಕ್ಕೆ ಜನರ ಧ್ವನಿಯಾಗಲು ನಾವು ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಆರೋಪ ಮಾಡುವ ಅಗತ್ಯ ಇಲ್ಲತನಿಖೆ ಮಾಡಲಿ. ಬಿಜೆಪಿ- ಜೆಡಿಎಸ್ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ವಿಪಕ್ಷಗಳ ವಿರುದ್ಧ ಹೋರಾಟ ನಡೆಸುವ ವಿಚಿತ್ರಕೆಟ್ಟ ಸಂಪ್ರದಾಯವನ್ನು ಸಿದ್ದರಾಮಯ್ಯನವರು ಜಾರಿ ಮಾಡಿದ್ದಾರೆ. ಸಮಾಜವಾದಿ ಎನ್ನುವ ಸಿದ್ದರಾಮಯ್ಯನವರುಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ಅವರು ಸಂವಿಧಾನಪ್ರಜಾಪ್ರಭುತ್ವದ ವಿರುದ್ಧವಾಗಿ ಹೋರಾಡುವ ಒಂದು ಕೆಟ್ಟ ಸಂಪ್ರದಾಯವನ್ನು ಸೃಷ್ಟಿ ಮಾಡಿದ್ದಾರೆ ಎಂದು ಟೀಕಿಸಿದರು.

ದಲಿತರ ಧ್ವನಿದಲಿತರ ಬೇಡಿಕೆಗಳನ್ನು ಹತ್ತಿಕ್ಕಲು ವಿಷಯಾಂತರ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದಕ್ಕೆ ವಿಪಕ್ಷಗಳು ಬಗ್ಗುವುದಿಲ್ಲ. ನಿಮ್ಮನ್ನು ಬಗ್ಗುಬಡಿಯುವ ತೀರ್ಮಾನಕ್ಕೆ ಹಾಗೂ ದಲಿತರ ಬೆಂಬಲ ಪಡೆಯಲು ಇವತ್ತು ಸಭೆ ನಡೆಸಿದ್ದೇವೆ ಎಂದು ತಿಳಿಸಿದರು.

Facebook
Twitter
LinkedIn
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top