ಸಂಡೆ ಫಾರ್ ಸೋಶಿಯಲ್ ವರ್ಕ್

ಮಸ್ಕಿ,ಜ,10 :ಅಭಿನಂದನ್ ಸಂಸ್ಥೆಯು ಆರಂಬಿಸಿದ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ27ನೇ ವಾರದ ಸೇವಾ ಕಾರ್ಯವನ್ನು ಬಳಗಾನೂರಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜನೆ ಮಾಡಲಾಯಿತು. ಆಸ್ಪತ್ರೆಯ ಆವರಣದಲ್ಲಿ ಬೆಳೆದಿದ್ದ ಮುಳ್ಳುಗಳನ್ನು, ಕಸವನ್ನು ತೆಗೆದು, ಸ್ವಚ್ಛಗೊಳಿಸಿ, ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಕೃತಿ ಫೌಂಡೇಶನ್ ಮುಖ್ಯಸ್ಥರಾದ ಶಿವುಕುಮಾರ ಸ್ವಾಮಿ ಅವರು ಅಭಿನಂದನ್ ಸಂಸ್ಥೆಯು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವದು ಗೊತ್ತಿರುವ ಸಂಗತಿ, ಇದರೊಂದಿಗೆ ಭಾರತವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಈ ಸಂಡೇ ಫಾರ್ ಸೋಶಿಯಲ್ ವರ್ಕ್ ಬಹಳ ಶ್ಲಾಘನೀಯ. ಈ ಅಭಿಯಾನದ ಮೂಲಕ ಯುವಕರನ್ನು ಸಮಾಜ ಸೇವೆಯತ್ತ ಪ್ರಚೋಧಿಸುವ ಕೆಲಸವನ್ನು ಮಾಡುತ್ತಿರುವ ಅಭಿನಂದನ್ ಸಂಸ್ಥೆಗೆ ಒಳ್ಳೆಯದಾಗಲಿ ಹಾಗೂ ಈ ವಾರದ ಸೇವಾ ಕಾರ್ಯವನ್ನು ನಮ್ಮೂರಿನಲ್ಲಿ ಹಮ್ಮಿಕೊಂಡಿರುವುದಕ್ಕೆ ಈ ಸಂಸ್ಥೆಯ ಎಲ್ಲಾ ಸ್ವಯಂ ಸೇವಕರಿಗೆ ಧನ್ಯವಾದಗಳು ಎಂದರು.

ಕೆ ಎಸ್ ಬಿ ಬ್ಯಾಂಕ್ ಸಿಬ್ಬಂಧಿಯಾದ ಶಿವರಾಜ್, ಪ್ರಕೃತಿ ಫೌಂಡೇಶನ ಪಧಾಧಿಕಾರಿಗಳು, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಪದಾಧಿಕಾರಿಗಳಾದ ಬಸವರಾಜ ಬನ್ನಿಗಿಡ, ಶೃತಿ ಹಂಪರಗುಂದಿ, ಆಶಾ ಕ್ಯಾತನಟ್ಟಿ, ಮಲ್ಲಿಕಾರ್ಜುನ ಬಡಿಗೇರ, ಅಮೀತ್ ಕುಮಾರ್ ಪುಟ್ಟಿ, ಕಿಶೋರ್, ಈರೇಶ್ ದೇವರಮನಿ ಸಿಂಧನೂರು, ಶ್ರೀಶೈಲ, ಬಳಗಾನೂರಿನ ಯುವಕರು, ಆಸ್ಪತ್ರೆ ಸಿಬ್ಬಂದಿಗಳು, ಮತ್ತಿರರು ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

Translate »
Scroll to Top