ಸುಧಾಮೂರ್ತಿ ಸಹೋದರ ಶ್ರೀನಿವಾಸ್ ಆರ್. ಕುಲಕರ್ಣಿಅವರಿಗೆ ಖಗೋಳಶಾಸ್ತ್ರದ ಪ್ರತಿಷ್ಠಿತ Shaw ಪ್ರಶಸ್ತಿ ಪುರಸ್ಕಾರ!

ಬೆಂಗಳೂರು: ಭಾರತೀಯ ಮೂಲದ ಅಮೆರಿಕಾ ವಿಜ್ಞಾನಿ ಮತ್ತು ಸುಧಾಮರ‍್ತಿ ಅವರ ಸಹೋದರ ಶ್ರೀನಿವಾಸ್ ಆರ್ ಕುಲಕರ್ಣಿ ಅವರು ಖಗೋಳಶಾಸ್ತ್ರ ವಿಭಾಗದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ‘ಶಾ ಪುರಸ್ಕಾರ ನೀಡಲಾಗಿದೆ.

‍ಕರ್ನಾಟಕ ಮೂಲದ ಶ್ರೀನಿವಾಸ್ ಆರ್. ಕುಲಕರ್ಣಿ ಅವರು ಅಮೆರಿಕದಲ್ಲಿ ಖಗೋಳ ಶಾಸ್ತ್ರದ ಪ್ರಾಧ್ಯಾಪಕರಾಗಿ ಕರ‍್ಯ ನರ‍್ವಹಿಸುತ್ತಿದ್ದಾರೆ. ಶ್ರೀನಿವಾಸ್ ಆರ್. ಕುಲರ‍್ಣಿ ಅವರು ಖಗೋಳ ಶಾಸ್ತ್ರದ ಹಲವು ಮಹತ್ವದ ಸಂಶೋಧನೆಗಳನ್ನು ಮಾಡಿದ್ದಾರೆ. ಮಿಲಿಸೆಕೆಂಡ್ ಪಲ್ರ‍್ಸ್‌, ಗಾಮಾ – ರೇ ರ‍್ಸ್ಟ್, ಸೂಪರ್ ನೋವಾ ಹಾಗೂ ಹಲವು ಮರ‍್ಪಡುವ ಹಾಗೂ ಸಂಚರಿಸುವ ಬಾಹ್ಯಾಕಾಶ ವಸ್ತುಗಳ ಕುರಿತಾಗಿ ಸಂಶೋಧನೆ ಮಾಡಿದ್ದಾರೆ.

2024ರ ಸಾಲಿನ ‘ಶಾ ಪ್ರಶಸ್ತಿ ವಿಜೇತರ ಪಟ್ಟಿ ಕಳೆದ ಮಂಗಳವಾರವಷ್ಟೇ ಪ್ರಕಟವಾಗಿದೆ. ಈ ಪೈಕಿ ಶ್ರೀನಿವಾಸ್ ಆರ್. ಕುಲರ‍್ಣಿ ಅವರು ಅಗ್ರಗಣ್ಯರಾಗಿ ಹೊರ ಹೊಮ್ಮಿದ್ದಾರೆ.

ಕುಲಕರ್ಣಿ ಅವರ ಸಂಶೋಧನೆಗಳ ಮೂಲಕ ಮಾನವ ಜನಾಂಗ ಬಾಹ್ಯಾಕಾಶದ ಬಗ್ಗೆ ತನ್ನ ತಿಳುವಳಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ ಎಂದು ಶಾ ಪುರಸ್ಕಾರ ಪ್ರತಿಷ್ಠಾನವು ಶ್ಲಾಘನೆ ವ್ಯಕ್ತಪಡಿಸಿದೆ.

ಶ್ರೀನಿವಾಸ್ ಆರ್. ಕುಲಕರ್ಣಿ ‍ಅವರು ಭಾರತೀಯರು, ಅದಕ್ಕಿಂತಲೂ ಹೆಚ್ಚಾಗಿ ಕನ್ನಡಿಗರು. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಕುರುಂದ್ವಾಡ್ ಎಂಬ ಪುಟ್ಟ ಪಟ್ಟಣವಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಈ ಪಟ್ಟಣದಲ್ಲಿ ೧೯೫೫ರಲ್ಲಿ ಜನಿಸಿದ ಶ್ರೀನಿವಾಸ್ ಆರ್. ಕುಲಕರ್ಣಿ ಅವರು ಬೆಳವಣಿಗೆ ಕಂಡು ಪ್ರರ‍್ಧಮಾನಕ್ಕೆ ಬಂದಿದ್ದು ಕರ್ನಾಟಕದ ಹುಬ್ಬಳ್ಳಿಯಲ್ಲಿ. ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ಶ್ರೀನಿವಾಸ್ ಆರ್. ಕುಲಕರ್ಣಿ‍ 1978ರಲ್ಲಿ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್‌ ವ್ಯಾಸಂಗ ಮಾಡಿದರು. ಬಳಿಕ 1983ರಲ್ಲಿ ಅಮೆರಿಕದ ಕ್ಯಾಲಿಫರ‍್ನಿಯಾದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡಿದರು. ಕ್ಯಾಲಿಫರ‍್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಖಗೋಳ ಶಾಸ್ತ್ರದ ಪ್ರಾಧ್ಯಾಪಕರಾಗಿ ಕರ‍್ಯ ನರ‍್ವಹಿಸುತ್ತಿದ್ದಾರೆ.

 

ರ‍್ಮನಿಯಿಂದ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್ ಬುಕ್ ಮಾಡುತ್ತಾರೆ. ಆದ್ರೆ, ಕೊನೆ ಕ್ಷಣದಲ್ಲಿ ಟಿಕೆಟ್ ರದ್ದು ಮಾಡುತ್ತಿದ್ದಾರೆ. ಒಟ್ಟು ಮೂರು ಬಾರಿ ಟಿಕೆಟ್ ಬುಕ್ ಮಾಡುವುದು ಬಳಿಕ ರದ್ದು ಮಾಡಿದ್ದಾರೆ. ಇದರೊಂದಿಗೆ ವಿದೇಶದಲ್ಲಿದ್ದುಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top