ಸುದೀಪ್, ದರ್ಶನ್, ಧ್ರುವ, ಗಣೇಶ್ ಫ್ಯಾನ್ಸ್ ಸಿನಿಮಾ ನೋಡ್ಲೇಬೇಕು ; ನಮ್ಗೆ ಯಶ್ ಆಸ್ತಿ ಅಲ್ಲ ಫ್ಯಾನ್ಸ್ ಆಸ್ತಿ!
ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಇಳಿದಿರೋದು ಈಗ ಹೊಸ ವಿಷಯವಲ್ಲ. ಅವರು ನಿರ್ಮಿಸಿದ ಚೊಚ್ಚಲ ಸಿನಿಮಾ ‘ಕೊತ್ತಲವಾಡಿ’ ಈಗಾಗಲೇ ರೆಡಿಯಾಗಿದ್ದು ರಿಲೀಸ್ಗೆ ರೆಡಿಯಾಗಿದೆ. ಕಳೆದ ಕೆಲವು ದಿನಗಳಿಂದ ರಾಕಿ ಭಾಯ್ಯ ಅಮ್ಮನ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಛಲಕ್ಕೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಮತ್ತೆ ಕೆಲವರು ಸಿನಿಮಾ ನಿರ್ಮಾಣ ಬೇಕಿರಲಿಲ್ಲ ಎಂದು ಹೇಳಿದ್ದೂ ಇದೆ.
ಸುಮಾರು ಎರಡೂ ವರ್ಷಗಳಿಂದ ತೆರೆಮರೆಯಲ್ಲಿ ‘ಕೊತ್ತಲವಾಡಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಆದರೆ, ಈ ವಿಷಯ ಯಾರಿಗೂ ಗೊತ್ತಿರಲಿಲ್ಲ. ಚಿಕ್ಕದೊಂದು ಸುಳಿವನ್ನೂ ಬಿಡದೆ ಸಿನಿಮಾವನ್ನು ನಿರ್ಮಾಣ ಮಾಡಿ ಮುಗಿಸಿದ್ದರು. ಇನ್ನು ಅಮ್ಮನ ಸಿನಿಮಾ ಪ್ರಚಾರಕ್ಕೆ ಯಶ್ ಅಖಾಡಕ್ಕೆ ಇಳಿಯಬಹುದೆಂಬ ನಿರೀಕ್ಷೆಯಿತ್ತು. ಆದರೆ, ಪುಷ್ಪ ಅರುಣ್ ಕುಮಾರ್ ತಮ್ಮ ಮಗ ಯಶ್ ಹೆಸರನ್ನು ಎಲ್ಲೂ ಬಳಸುವುದಕ್ಕೆ ಇಚ್ಛೆ ಪಡುತ್ತಿಲ್ಲ.
ಯಶ್ ತಾಯಿ ಪುಷ್ಪಾ ಅವರನ್ನು ಟ್ರೋಲ್ ಮಾಡಿದವರು ಈಗ ಗಪ್ಚುಪ್!
ಯಶ್ ತಾಯಿ ಪುಷ್ಪಾ ಅವರನ್ನು ಟ್ರೋಲ್ ಮಾಡಿದವರು ಈಗ ಗಪ್ಚುಪ್!
ಯಶ್ ಹೆಸರು ಬಳಸಿಕೊಳ್ಳದೆ ಸಿನಿಮಾವನ್ನು ರಿಲೀಸ್ ಮಾಡಬೇಕು ಅನ್ನೋ ಹಠ. ಆದರೆ, ಇದು ಜನರಿಗೆ ಬೇರೆ ರೀತಿಯ ಸಂದೇಶ ರವಾನೆಯಾಗುತ್ತಿದೆ. ಅಮ್ಮ ಮಗನ ನಡುವೆ ಮನಸ್ತಾಪವಿದೆ. ಅದಕ್ಕೆ ಯಶ್ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗುತ್ತಿಲ್ಲ ಎನ್ನುವ ಕಮೆಂಟ್ಗಳು ಬರುತ್ತಿವೆ. ಈ ಮಧ್ಯೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್, ದರ್ಶನ್, ಧ್ರುವ, ಗಣೇಶ್, ಉಪೇಂದ್ರ ಅಭಿಮಾನಿಗಳು ‘ಕೊತ್ತಲವಾಡಿ’ ಸಿನಿಮಾ ನೋಡ್ಬೇಕು. ಯಶ್ ನಮಗೆ ಆಸ್ತಿ ಆಗ್ತಾನೋ ಇಲ್ವೋ? ಅಭಿಮಾನಿಗಳೇ ನಮಗೆ ಆಸ್ತಿ ಎಂದು ಹೇಳಿಕೊಟ್ಟಿದ್ದಾರೆ.