ಬಳ್ಳಾರಿ: ಈ ವರ್ಷ ಎಪ್ರಿಲ್ ತಿಂಗಳಲ್ಲಿ ಬಳ್ಳಾರಿ ಪಾಲಿಕೆಯ ಕಟ್ಟಡದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಸಾರ್ವಜನಿಕರ ವಿವಿಧ ತೆರಿಗೆಗಳಿಂದ ಸಂಗ್ರಹವಾದ ಹಣ 75 ಲಕ್ಷ ರೂ ಕಳ್ಳತನವಾದ ಘಟನೆ ನಡೆದಿತ್ತು. ಆದರೆ ಕಚೇರಿಯಲ್ಲಿ ಯಾವುದೇ ಕೀಗಳನ್ನ ಮುರಿದಿರಲಿಲ್ಲ ಎಂದು ದೂರುದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧರಾಮೃಶ್ವರ ಗಡದ್ ಹಾಗೂ ಪಿ.ಎಸ್.ಐ.ಗಳಾದ ಸೌಮ್ಯ ನಾರಾಯಣ ಸ್ವಾಮಿ ಮತ್ತು ಅವರ ಅಪರಾಧ ವಿಭಾಗದ ಸಿಬ್ಬಂದಿಯವರ ತಂಡವು ಪ್ರಕರಣ ಬೇಧಿಸಲು ಶುರುಮಾಡಿತ್ತು. ಪೊಲೀಸ್ ವರಿಷ್ಟಾಧಿಕಾರಿ ರಂಜೀತ್ ಕುಮಾರ್ ಬಂಡಾರು ನಿರ್ದೇಶನದಂತೆ ಅರೋಪಿ ಎಸ್.ಟಿ,ಎಂ.ಕೆ ಚಂದ್ರಶೇಖರಯ್ಯ ತಂದೆ ವಿರೇಶಯ್ಯ ಬಳ್ಳಾರಿಯ ಶ್ರೀಧರ ಗಡ್ಡೆ ಬಳಿ ಸುಮಾರು 72 ಲಕ್ಷ ರೂ, ಕಳ್ಳತನಕ್ಕೆ ಬಳಸಿದ್ದ ಎಸ್.ಪಿ-125 ಹೊಂಡಾ, ಕದ್ದ ಹಣದಲ್ಲಿ ಖರೀಸಿದ್ದ 2 ಫೋನ್ಗಳನ್ನ ಜಪ್ತಿಮಾಡಿದ್ದಾರೆ.
ಸದರಿ ಪ್ರಕರಣಕ್ಕೆ ಸಂಭಂದಿಸಿದಂತೆ ಕಛೇರಿಯಲ್ಲಿ ಡಾಟಾ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಆಂದ್ರಾಳ್ ನಿವಾಸ ಕೆ.ಮಹಾಲಿಂಗನಿಂದ ಬೀಗವನ್ನ ಪಡೆದು ಕಳ್ಳತನದ ನಂತರ ಪುನಃ ಕೀಗಳನ್ನ ತಂದು ಮನೆ ಬಾಗಿಲಲ್ಲಿ ತಂದು ಇಟ್ಟಿದ್ದಾನೆ ಎಂದು ತಿಳಿದುಬಂದಿದ್ದು,
ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ, ಮತ್ತು ಪ್ರಮುಖ ಆರೋಪಿಯನ್ನಲಾಗಿರುವ ಮಹಾಲಿಂಗ ಪರಾರಿಯಾಗಿದ್ದು, ಆದಷ್ಟು ಬೇಗನೆ ಪತ್ತೆ ಹಚ್ಚಲಾಗುವುದು ಎಂದು ತಿಳಿದುಬಂದಿದೆ.