ಬಳ್ಳಾರಿ; ಭಾಷೆ ಈಗ ಕೇವಲ ವ್ಯವಹಾರಕ್ಕೆ ಮಾತ್ರ ಸೀಮಿತಗೊಂಡಿರುವುರಿಂದ ಅದರ ಮೌಲ್ಯ ಕಡಿಮೆಯಾಗಿದೆ. ಅದಕ್ಕಾಗಿ ಭಾಷೆಯನ್ನು ಹೊಸ ಹೊಸ ತಂತ್ರಜ್ಞಾನದಿಂದ ವಿಶ್ವದಲ್ಲಿನ ಘಟನೆ, ಸಂಶೋದನೆಯನ್ನು ತಕ್ಷಣ ಕನ್ನಡ ಭಾಷೆಯಲ್ಲಿ ದೊರೆಯುಂತೆ ಆಗಬೇಕು ಎಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಅವರು ಇಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ನಾಗರೀಕತೆ ಬೆಳವಣಿಗೆಯೇ ಸಂಸ್ಕೃತಿಯ ಬೆಳವಣಿಗೆ ಎಂಬುದನ್ನು ತಪ್ಪು ಎಂದು ಈ ವಿವಿ ಶೋಧನೆ ಮಾಡಬೇಕಿದೆ. ಚರಿತ್ರೆ ನಮ್ಮನಡೆ ನುಡಿಯನ್ನು ರೂಪುಗೊಳಿಸಲಿದೆ. ಅದಕ್ಕೆ ಭಾಷೆ ಮತ್ತು ಸಂಸ್ಕೃತಿ ಬೇಕು. ಭಾಷೆಯಲ್ಲಿಯೇ ಸಂತೋಷ, ದುಖಃ, ಸಂಭ್ರಮ ಇದೆ. ಭಾಷೆ ಇಲ್ಲದೆ ಬದುಕೇ ಇಲ್ಲ. ನಾಡಿನ, ದೇಶದ ವ್ಯಕ್ತಿತ್ವ ಭಾಷೆಯಿಂದಲೇ ರೂಪುಗೊಂಡಿದೆಂದರು. ಕನ್ನಡವನ್ನು ಪ್ರೀತಿಸಿದರೆ ನೂರಾರು ಸಂಶೋಧನೆ ದೊರೆಯಲಿದೆ. ಕೇವಲ ಭಾಷೆ ಎಂದು ಕೊಂಡರೆ ಸಂಶೋದನೆಯ ಗಟ್ಟಿ ನೆಲೆ ಇಲ್ಲದಾಗುತ್ತೆ.
ಬರಗಾಲದ, ಪ್ರವಾಹದ ಬದುಕಿನ ಸಂಶೋಧನೆ ಮಾಡಿ ಎಂದು ಆಧ್ಯಾಪಕರಿಗೆ ಹೇಳಿದರು.
ಕನ್ನಡ ವಿವಿಗೆ ಎಂ.ಪಿ.ಪ್ರಕಾಶ್ ಅವರ ಪ್ರಯತ್ನವನ್ನು ಸ್ಮರಿಸಿದ ಮುಖ್ಯ ಮಂತ್ರಿಗಳು. ವಿವಿಗೆ ಶಕ್ತಿಯನ್ನು ತುಂಬುವ ಕೆಲಸ ಮಾಡಲಿದೆ. ಕೋವಿಡ್ ನಿಂದ ವಿವಿಗಳ ಅಭಿವೃದ್ಧಿಗೆ ಸಮಸ್ಯೆ ಆಯ್ತು ಎಂದ ಅವರು ವಿವಿ ಅಭಿವೃದ್ಧಿಗೆ ಕೇಳಿರುವ 80 ಕೋಟಿ ರೂಗಳ ಯೋಜನೆಯನೆಗೆ ಅನುದಾನ ಒದಗಿಸಲಿದೆ. ಕೂಡಲೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಿಧಿಯಡಿ 20 ಕೋಟಿ ರೂ ಬಿಡುಗಡೆ ಮಾಡಲಿದೆಂದರು. ಉದಾರಿಕರಣದಿಂದ ನೀವು ಬದಲಾಗಬೇಕು. ಮುಚ್ಚಿಡುವ ಕನ್ನಡ ಆಗಬಾರದು ತೆರೆದಿಡುವ ಕನ್ನಡ ಆಗಬೇಕು ಎಂದು ಹೇಳಿದರು.