ಬಳ್ಳಾರಿ: “ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ಭಾವೈಕ್ಯತೆ ಮೈಗೂಡಿಸಿಕೊಂಡರೆ, ದೇಶ ಸುಭದ್ರ ಮತ್ತು ಸಮೃದ್ಧಿಯಾಗಿ ಇರುತ್ತದೆ ಹಾಗೂ ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಮನೋವಿಕಾಸ ಬದಲಾಗುತ್ತದೆ” ಎಂದು ಬಳ್ಳಾರಿಯ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸತೀಶ್ ಎ ಹಿರೇಮಠ್ ತಿಳಿಸಿದರು.
ಸ್ಮಿಯಾಕ್ ಟ್ರಸ್ಟ್ ವತಿಯಿಂದ 76ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಇಂದು ಬಳ್ಳಾರಿಯ ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಗೌರವಾಧ್ಯಕ್ಷ ಬಸವರಾಜ್ ಬಿಸಿಲಹಳ್ಳಿ ಮಾತನಾಡಿ, “ಸಮಾಜದ ಬದಲಾವಣೆಗೆ ಇಂದಿನ ವಿದ್ಯಾರ್ಥಿಗಳಿಗೆ ದೇಶಭಕ್ತಿಯನ್ನು ಪ್ರಚೋದಿಸುವ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ತಿಂಗಳಲ್ಲಿ “ಭಾರತ ಮಾತೆಗೆ ಭಾವೈಕ್ಯತೆಯ ಆರತಿ” ದೇಶಭಕ್ತಿ ಸಮೂಹ ಗೀತಗಾಯನ ಮತ್ತು ನೃತ್ಯ ರೂಪಕಗಳ ಪ್ರದರ್ಶನವನ್ನು ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ಇತರ ಜಿಲ್ಲೆಗಳ ಕಲಾವಿದರು/ ವಿದ್ಯಾರ್ಥಿಗಳಿಂದ ಆಯೋಜಿಸಲಾಗುವುದು” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಅಣ್ಣಿ ವಿರುಪಾಕ್ಷಪ್ಪ ಸ್ಪರ್ಧೆಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
2022-23 ಸಾಲಿನಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಮತ್ತು ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದ ಕು. ಸಹನ ಚೆಲ್ಲೂರು, ಪಿಯುಸಿ ವಾಣಿಜ್ಯ ವಿಭಾಗ, ಬಿಪಿಎಸ್ ಸಿ ಪಿಯು ಕಾಲೇಜು, ಮತ್ತು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಯಿಂದ ಮಾಸ್ಟರ್ಸ ಇನ್ ಲೈಬ್ರರಿ ಸೈನ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ ಕು. ವಸುಧಾ ಬಿ.ಹೆಚ್. ಬಿಸಿಲಹಳ್ಳಿ, ಇವರನ್ನು ಅಭಿನಂದಿಸಲಾಯಿತು.
438 ವಿದ್ಯಾರ್ಥಿಗಳು ಮತ್ತು ಇತರರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಯಿತು. ವಿಜೇತರಿಗೆ ಮುಂದಿನ ತಿಂಗಳಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗುವುದು
ಕಾರ್ಯಕ್ರಮ ವೇದಿಕೆಯಲ್ಲಿ ಶರಣ ಬಸವರಾಜ್, ಡಾ. ವೈ. ಸುಮ, ಭ್ರಮರಾಂಭ, ಮಲ್ಲನಗೌಡ ಕಿತ್ತೂರು, ನಾಗೇಶ್ವರ ರಾವ್ ಇದ್ದರು.
ಸುಧೀಂದ್ರ ನಾಡಿಗೇರ, ಸುಮಾ ನಾಡಿಗೇರ, ಕೆ ಕೋದಂಡ ರಾಮ, ಜಿ ಹರಿಪ್ರಸಾದ್, ಅನುಪಮ, ಶ್ರೀದೇವಿ ದಂಡಿನ, ವಿಜಯಲಕ್ಷ್ಮಿ, ಗಾಯಕಿ ರೇಣುಕಾ, ನಜೀರ್ ಪಾಷಾ, ಏಕಾಂತ, ಲಕ್ಷ್ಮಣ ಜಾಧವ್, ವೀರಭದ್ರ ಗೌಡ, ನವೀನ್, ಶರ್ಮಸ್ ಅಲಿ, ವಿಜಯಕುಮಾರ್, ನೇತಿ ರಘುರಾಮ ಸ್ಪರ್ಧೆಗಳನ್ನು ನಿರ್ವಹಿಸಿದರು.
ದೀಪಕ್ ಪ್ರಾರ್ಥನೆ ಸಲ್ಲಿಸಿದರು. ಚೆಲ್ಲೂರು ಲಕ್ಷ್ಮಿ ನಿರೂಪಣೆ ಮಾಡಿದರು.