ಬೆಂಗಳೂರು: ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ಸೇನೆ ನೀಡಿರುವ ತಕ್ಕ ಪ್ರತ್ಯುತ್ತರ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ಶೌರ್ಯ, ಸಾಹಸಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಮುಕ್ತ ಕಂಠದಿಂದ ಅಭಿನಂದನೆ ಸಲ್ಲಿಸಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್, ಪಾಕಿಸ್ತಾನದ ವಿರುದ್ಧ ಸಶಸ್ತ್ರ ಪಡೆಗಳು ದಿಟ್ಟ ಪ್ರತ್ಯುತ್ತರ ನೀಡುತ್ತಿವೆ. ಪಾಕಿಸ್ತಾನದ ಕುಹಕ ಕೃತ್ಯಗಳಿಗೆ ಸೂಕ್ತ ಶಾಸ್ತಿ ಮಾಡಲಾಗಿದೆ. ಇμÁ್ಟದರೂ ಅವರು ಮತ್ತೆ ಅವರು ಕಾಲು ಕೆದರಿ ಬರುತ್ತಿದ್ದು, ಅವರಿಗೆ ಸರಿಯಾದ ಪಾಠ ಕಲಿಸಲಾಗಿದೆ. ಭಾರತೀಯ ಸೇನೆ ಎಲ್ಲಾ ರೀತಿಯಲ್ಲೂ ಯಶಸ್ವಿಯಾಗಿದೆ ಎಂದರು.
ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ದೇಶದ 140 ಕೋಟಿ ಜನ ಒಗ್ಗಟ್ಟಾಗಿದ್ದು, ಈ ಯುದ್ಧದ ಸನ್ನಿವೇಶ ಸೃಷ್ಟಿಸುವ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲಾಗಿದೆ. ಸೇನೆಯ ಶೌರ್ಯ ಮತ್ತು ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ ಎಂದರು.
ಜಾತಿ ಗಣತಿ ವರದಿ ಬಗ್ಗೆ ಚರ್ಚೆಯಾಗಿಲ್ಲ
ಬಹು ನಿರೀಕ್ಷಿತ ಸಾಮಾಜಿಕ, ಶೈಕ್ಷಣಿಕ ಕುರಿತ 2015ರ ಅಧ್ಯಯನ ವರದಿ ಬಗ್ಗೆ ಇಂದು ಯಾವುದೇ ಚರ್ಚೆಯಾಗಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸಮಗ್ರ ಅವಲೋಕನ ನಡೆಸಲು ತೀರ್ಮಾನಿಸಲಾಗಿದೆ.
ಸಭೆಯ ನಂತರ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಸಾಮಾಜಿಕ, ಶೈಕ್ಷಣಿಕ 2015 ಅಧ್ಯಯನ ವರದಿ, ಅಂಕಿ ಅಂಶಗಳ ಮಾಹಿತಿಯನ್ನು ಸಂಪುಟಕ್ಕೆ ಈಗಾಗಲೇ ಸಲ್ಲಿಸಿದೆ. ಈ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದು, ಹಲವಾರು ಸಚಿವರು ಈಗಾಗಲೇ ತಮ್ಮ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖುದ್ದಾಗಿ ಸಲ್ಲಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಸಹ ಈಗಾಗಲೇ ವರದಿ ಸಲ್ಲಿಸಿದ್ದಾರೆ ಎಂದರು.
ಆದರೆ ಎಷ್ಟು ಮಂದಿಯಿಂದ ವರದಿ ಸಲ್ಲಿಕೆಯಾಗಿದೆ ಎಂಬ ಕುರಿತು ಮಾಹಿತಿ ಇಲ್ಲ. ಇನ್ನೂ ಕೆಲವು ಕೆಲವು ಸಚಿವರಿಂದ ಅಭಿಪ್ರಾಯಗಳನ್ನು ಪಡೆಯಬೇಕಾಗಿದೆ. ಮುಂದಿನ ವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು.
ಅಂಗವೈಕಲ್ಯ ಹೊಂದಿರುವ ಗ್ರೂಪ್ ಎ ಜ್ಯೂನಿಯರ್, ಗ್ರೂಪ್ ಬಿಗೆ ವರ್ಗದಲ್ಲಿ ಶೇ 4 ರಷ್ಟು ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಸಂಪುಟ ತೀರ್ಮಾನಿಸಿದೆ. 2016 ರ ನಿಯಮಗಳಂತೆ ಎದ್ದುಕಾಣುವ ಅಂಗ ವೈಕಲ್ಯ ಹೊಂದಿರುವವರಿಗೆ ಶೇ 4 ರಷ್ಟು ಬಡ್ತಿಯಲ್ಲಿ ಮೀಸಲಾತಿ ದೊರೆಯಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಸರ್ಕಾರಿ ನೌಕರರ ವರ್ಗಾವರ್ಗಿಯಲ್ಲಿ ಎಲ್ಲಾ ಸಚಿವಾಲಯಗಳಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಮೊದಲ ಹಂತದಲ್ಲಿ ಅಬಕಾರಿ ಇಲಾಖೆಯಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ ಜಾರಿ ಮಾಡುವಂತೆ ನಿರ್ದೇಶನ ನೀಡಿದ್ದಾರೆ ಎಂದರು.
ವರ್ಗಾವಣೆ ಮಾರ್ಗಸೂಚಿ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಯಿತು ಸರ್ಕಾರಿ ನೌಕರರ ವೃಂದ ಬಲದಲ್ಲಿ ಶೇ 6 ರಷ್ಟು ಮೀರದಂತೆ ಮೇ 15 ರಿಂದ ಜೂನ್ 14 ರ ವರೆವರೆಗೆ ಒಂದು ತಿಂಗಳ ಕಾಲ ವರ್ಗವಾರ್ಗಿ ನಡೆಸಲು ಅವಕಾಶ ನೀಡಲಾಗಿದೆ. ಗ್ರೂಪ್ ಎ ಮತ್ತು ಬಿ ವೃಂದವರ ವರ್ಗಾವಣೆಗೆ ಆಯಾ ಸಚಿವರಿಗೆ, ಗ್ರೂಪ್ ‘ಸಿ’ ಮತ್ತು ‘ಡಿ’ ವೃಂದದ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
2025-26ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗಳನ್ನು ಹೊರಡಿಸಲು ಮತ್ತು ಸದರಿ ಮಾರ್ಗಸೂಚಿಯನ್ನು ಪರಿಷ್ಕರಿಸಲು ಹಾಗೂ ವರ್ಗಾವಣಾ ಅವಧಿಯನ್ನು ವಿಸ್ತರಿಸಲು ಮುಖ್ಯಮಂತ್ರಿ ಅವರಿಗೆ ಅಧಿಕಾರ ನೀಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಸೂಪರ್ ಸ್ಪೆμÁಲಿಟಿ ವೈದ್ಯರುಗಳ ವಯೋನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ರಾಮನಗರ ಜಿಲ್ಲೆಯಲ್ಲಿ 46 ಕೆರೆಗಳಿಗೆ ನೀರು ತುಂಬಿಸುವ, ಸರಗೂರು – ಹೊಸಪುರ ಬಳಿ ಶಿಂಶಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ, , ರಾಮನಗರ, ಕುಣಿಗಲ್ ಸೇರಿ ಸತ್ತೇಗಾಲ್ ಕುಡಿಯುವ ನೀರು ಪೂರೈಸುವ ಯೋಜನೆಯ 90 ಕೋಟಿ ರೂ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ 10.44 ಕೋಟಿ ರೂ ಮೊತ್ತದಲ್ಲಿ ಅಗ್ನಿಶಾಮಕ ಕಟ್ಟಡ ನಿರ್ಮಾಣ, 15 ನೇ ಹಣಕಾಸು ಆಯೋಗದಡಿ 329.90 ಕೋಟಿ ರೂ ವೆಚ್ಚದಲ್ಲಿ ವಿವಿಧೆಡೆ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 244 ಕೋಟಿ ರೂ ಮೊತ್ತವನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ ಎಂದರು.
ಪ್ರಧಾನಮಂತ್ರಿ ಆವಾಸ್ 2.0 ಯೋಜನೆ ಜಾರಿ ಮಾಡುವ ಜೊತೆಗೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮ ಪಂಚಾಯಿತಿ. ಇದೇ ರೀತಿ ಹಿರೇಬಾಗೇವಾಡಿಯನ್ನು ಸಹ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಹೊಸ ಆಸ್ಪತ್ರೆಗೆ ಅವಶ್ಯವಿರುವ ವೈದ್ಯಕೀಯ ಯಂತ್ರೋಪಕರಣಗಳು ಹಾಗೂ ಪೀಠೋಪಕರಣಗಳನ್ನು 26.98 ಕೋಟಿಗಳ ಮೊತ್ತದಲ್ಲಿ ಖರೀದಿಸಲು ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 450 ಹಾಸಿಗೆಗಳ ಹೊಸ ಆಸ್ಪತ್ರೆಯ ಕಟ್ಟಡ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಸದರಿ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಅರ್ಪಿಸುವ ಮೂಲಕ ಜಿಲ್ಲೆಯ ಬಡ ರೋಗಿಗಳ ಮತ್ತು ವಿದ್ಯಾರ್ಥಿಗಳ ಕಲಿಕೆ ಸಾಮಥ್ರ್ಯ ಹೆಚ್ಚಿಸಲು ಆಸ್ಪತ್ರೆಯ ವಿಭಾಗವಾರು ಮತ್ತು ಪೀಠೋಪಕರಣಗಳ ಪರಿಷ್ಕತ ಸಂಕ್ಷಿಪ್ತ ಬೇಡಿಕೆಯನ್ನು ಪ್ರಸ್ತಾಪಿಸಲಾಗಿದೆ ಎಂದರು.