ದೇವನಹಳ್ಳಿ: ದೇಶದಲ್ಲಿ ಕೋವಿಡ್ ಲಸಿಕೆ 100 ಕೋಟಿ ಮುಟ್ಟಿದೆ ಎಂದು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿದೆ ಮೊದಲ ಡೋಸ್ ಲಸಿಕೆ ನೀಡಿರುವುದು ಕೇವಲ ಶೇಖಡಾ 31 ಆಗಿದೆ ಇದನ್ನು ಪ್ರಚಾರ ಮಾಡದೇ ದೊಡ್ಡ ಸಂಖ್ಯೆ ಮಾಡಿರುವುದನ್ನು ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ಲಸಿಕೆ ತಡವಾದ್ದರಿಂದ ಸಾವು ನೋವುಗಳಿಗೆ ಹೊಣೆಗಾರರು ಯಾರು ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಇವತ್ತಿನವರೆಗೂ ಪರಿಹಾರ ನೀಡಿಲ್ಲಾ, ಎತ್ತಿನಹೊಳೆ ಕಾಮಗಾರಿಯು ಬಿಜೆಪಿ ಸರ್ಕಾರ ಬಂದ ಮೇಲೆ ಕುಂಟುತ್ತಾ ಸಾಗಿದೆ ಇವರಿಗೆ ಅಭಿವೃದ್ಧಿಯ ಬಗ್ಗೆ ಸ್ವಲ್ಪವೂ ಇಚ್ಚಾಶಕ್ತಿ ಇಲ್ಲಾ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಯದ ಬಗ್ಗೆ ಮಾಜಿ ಸಂಸದ ವೀರಪ್ಪ ಮೊಯ್ಲಿ ಬೇಸರ ವ್ಯಕ್ತಪಡಿಸಿದರು.

ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆಯ ಕುಂಭೇಶ್ವರ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಷೋರೂಂ ಪ್ರಾರಂಭೋತ್ವವದಲ್ಲಿ ಭಾಗವಹಿಸಿ ನಂತರ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ನವೀನ್ ಕುಮಾರ್ ಕಟೀಲ್ ರವರು ರಾಹುಲ್ ಗಾಂಧಿಯವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಪಕ್ಷದ ವ್ಯಕ್ತಿತ್ವ ಮತ್ತು ಅವರ ಘನತೆ ಹೇಗೆ ಎಂದು ಎತ್ತಿ ತೋರುತ್ತದೆ. ಮಧ್ಯಮ ವರ್ಗದ ಜನರು ದಿನನಿತ್ಯ ಬಳಸುವ ಡೀಸೆಲ್, ಪೆಟ್ರೋಲ್ ಮತ್ತು ಅಡುಗೆ ಅನಿಲ ದರ ದಿನದಿಂದ ದಿನಕ್ಕೆ ಹೊರೆ ಏರಿಸುತ್ತಲೇ ಇದ್ದಾರೆ ಇದರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ಮಾಡಿದರೂ ಕಣ್ಣು ಕಿವಿ ಇಲ್ಲದೇ ಎಮ್ಮೆ ಮೇಲೆ ಮಳೆ ಸುರಿದಂತೆ ಯಾವುದಕ್ಕೂ ಕೇರ್ ಮಾಡದೇ ಅವರದ್ದೇ ಸರ್ಕಾರವೆಂಬಂತೆ ನಡೆಸುತ್ತಿದ್ದಾರೆ, ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ವಿಜಯಪತಾಕೆ ಹಾರಿಸುತ್ತಾರೆ ಮತ್ತು ಜನರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಮಾಜಿ ಶಾಸಕರಾದ ವೆಂಕಟಸ್ವಾಮಿ, ಮುನಿನರಸಿಂಹಯ್ಯ, ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣಪ್ಪ, ಕೆ.ಸಿ.ಮಂಜುನಾಥ್, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜಗನ್ನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಗೇಶ್, ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಚೇತನ್ ಗೌಡ, ದೇವನಹಳ್ಳಿ ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಮುಖಂಡರಾದ ಸೋಮಣ್ಣ, ಅತಿಯಾಸ್ ಎಲೆಕ್ಟ್ರಿಕ್ ಬೈಕ್ ಷೋರೂಂ ಮಾಲೀಕರಾದ ಶಿವಮೂರ್ತಿ, ಚಂದನ್ ಕುಮಾರ್ ಹಾಗೂ ಇನ್ನು ಹಲವರು ಇದ್ದರು.