ಬಳ್ಳಾರಿ ಎಸ್ಪಿ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ:ಕಂಟ್ರೋಲ್‌ ರೂಂ ಪರಿಶೀಲನೆ

ಬಳ್ಳಾರಿ : ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಮಂಗಳವಾರ ಭೇಟಿ ನೀಡಿ ಎಸ್ಪಿ‌ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂ ಪರಿಶೀಲಿಸಿದರು. ಕಂಟ್ರೋಲ್ ರೂಂ ಕಾರ್ಯವೈಖರಿ, ಟ್ರಾಫಿಕ್ ನಿರ್ವಹಣೆ, ಅಪರಾಧಗಳ ತ್ವರಿತಪತ್ತೆ, ನಗರ ಸಂಪೂರ್ಣ ನಿಗಾ ವಹಿಸುವಿಕೆ,ಕಾನೂನು ಸುವ್ಯವಸ್ಥೆ-ಶಾಂತಿಪಾಲನೆ ಕುರಿತ ಮಾಹಿತಿಗಳನ್ನು ಎಸ್ಪಿ ಸೈದುಲು ಅಡಾವತ್ ಅವರಿಂದ ತಿಳಿದುಕೊಂಡರು.


ಎಸ್ಪಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂನಿಂದ ಬಳ್ಳಾರಿ ನಗರ ಸಂಪೂರ್ಣ ಪೊಲೀಸ್ ಇಲಾಖೆಯ‌ ನಿಗಾದಲ್ಲಿದೆ. ಸುಗಮ ಸಂಚಾರ ನಿರ್ವಹಣೆ,ಅಪರಾಧಗಳ ಪತ್ತೆಗೆ ಅನುಕೂಲಕರವಾಗಿದೆ ಎಂಬ ವಿಷಯ ಸೇರಿದಂತೆ ಪೊಲೀಸ್ ಇಲಾಖೆಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಡಿಸಿ ಪವನಕುಮಾರ್ ಮಾಲಪಾಟಿ, ಎಡಿಸಿ ಪಿ.ಎಸ್‌.ಮಂಜುನಾಥ, ಎಸಿ ಡಾ.ಆಕಾಶ ಶಂಕರ್ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top