ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಹಾಲಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಶ್ರೀರಾಮುಲು ಸಹ ಸ್ಪರ್ಧೆಗೆ ಆಸಕ್ತಿ ತೋರುತ್ತಿದ್ದಾರೆ.
ತಾವು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸುವುದು ಖಚಿತ ಎನ್ನುವ ಆತ್ಮ ವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ. ಇದೀಗ ಮಾಜಿ ಸಚಿವ ಜನಾರ್ಧನ ರೆಡ್ಡಿ ಪರಮಾಪ್ತ ಶ್ರೀರಾಮುಲು ಸಹ ಪಕ್ಷದ ವಿರುದ್ಧ ಬಂಡೆದಿದ್ದು, ಭಿನ್ನಮತೀಯರ ಗುಂಪಿಗೆ ಆನೆ ಬಲ ಬಂದAತಾಗಿದೆ.
ಶ್ರೀರಾಮುಲು ಜೊತೆ ಯತ್ನಾಳ್ ಮತ್ತು ಭಿನ್ನಮತೀಯರು ಸತತ ಸಂಪರ್ಕದಲ್ಲಿದ್ದಾರೆ. ಸಾಧ್ಯವಾದರೆ ಶ್ರೀ ರಾಮುಲು ಅವರನ್ನು ಅಧ್ಯಕ್ಷಗಾದಿಗೆ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ರಾಮುಲು ಸಕಾರಾತಕವಾಗಿ ಸ್ಪಂದಿಸಿದ್ದಾರೆ ಎನ್ನುವ ಮಾಹಿತಿಯಿದೆ. ಯತ್ನಾಳ್ ಬಣಕ್ಕೆ ದೊಡ್ಡ ಬೂಸ್ಟ್ ಸಿಕ್ಕಂತಾಗಿದೆ.
ಕೋರ್ ಕಮಿಟಿ ಸಭೆಯ ನಂತರ ರಾಧಾ ಮೋಹನ್ ಅಗರ್ವಾಲ್ ಅವರು, ಬಿಜೆಪಿಯ 60ಕ್ಕೂ ಹೆಚ್ಚು ಶಾಸಕರನ್ನು ಭೇಟಿಯಾಗಿದ್ದರು. ಅದರಲ್ಲಿ 2-3 ಶಾಸಕರ ಹೊರತಾಗಿ, ಎಲ್ಲರೂ ವಿಜಯೇಂದ್ರ ಪರವಾಗಿ ಏನೋ ನಿಂತಿದ್ದರು. ಆದರೆ, ಶ್ರೀರಾಮುಲು ರಂಗ ಪ್ರವೇಶಿಸಿದರೆ, ಕಣ ರಂಗೇರುವ ಸಾಧ್ಯತೆ ಹೆಚ್ಚಾಗಿದೆ. ಶ್ರೀರಾಮುಲು ಅವರ ರಾಜಕೀಯ ಬಳ್ಳಾರಿ ಭಾಗಕ್ಕೆ ಹೆಚ್ಚಾಗಿ ಸೀಮಿತವಾಗಿದ್ದರೂ, ಒಂದು ವೇಳೆ ಇವರು ಅಧ್ಯಕ್ಷ ಸ್ಥಾನದ ಹುರಿಯಾಳು ಆದರೆ, ಯತ್ನಾಳ್ ಮತ್ತು ಜಾರಕಿಹೊಳಿ ಕಡೆಯಿಂದ ಹಂಡ್ರೆAಡ್ ಪ್ರರ್ಸೆಂಟ್ ಸಹಕಾರ ಸಿಗಬಹುದು. ಅವರ ಉದ್ದೇಶ, ಹೇಗಾದರೂ ಮಾಡಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಹಾಗಾಗಿ, ಅಧ್ಯಕ್ಷೀಯ ಚುನಾವಣೆ ನಿರೀಕ್ಷಿಸಿದಷ್ಟು ವಿಜಯೇಂದ್ರ ಸುಲಭ ತುತ್ತು ಆಗುವ ಸಾಧ್ಯತೆ ಕಮಿ ಎಂದು ವಿಶ್ಲೇಷಿಸಲಾಗುತ್ತಿದೆ.
ಇಷ್ಟೇ ಅಲ್ಲದೇ, ಶ್ರೀರಾಮುಲು ವಿರುದ್ಧ ಪಕ್ಷದ್ರೋಹದ ಆರೋಪ ಮಾಡಿರುವ ಜನಾರ್ದನ ರೆಡ್ಡಿಯನ್ನು ತಕ್ಷಣದಿಂದಲೇ ಪಕ್ಷದಿಂದ ಉಚ್ಚಾಟಿಸಬೇಕು ಎನ್ನುವ ಹೊಸ ಬೇಡಿಕೆಯನ್ನು ಯತ್ನಾಳ್ ಬಣ ಇಟ್ಟಿತು. ಆ ಮೂಲಕ, ಬಿಜೆಪಿ ವರಿಷ್ಠರಿಗೆ ಯತ್ನಾಳ್ ಬಣ ಹೊಸ ತಲೆನೋವನ್ನು ತಂದೊಡ್ಡಿದೆ. ಕೋರ್ ಕಮಿಟಿ ಸಭೆಯಲ್ಲಿ ಉಸ್ತುವಾರಿಯಾಗಿ ಬಂದಿದ್ದ ರಾಧಾ ಮೋಹನ್ ದಾಸ್ ಅಗರ್ವಾಲ್, ತೂಕವಾಗಿ ಮಾತನಾಡಿದ್ದರೆ, ಬಿಜೆಪಿಯ ಆಂತರಿಕ ಕಲಹ ಇನ್ನಷ್ಟು ಹೆಚ್ಚಾಗುತ್ತಿರಲಿಲ್ಲವೇನೋ? ಶ್ರೀರಾಮುಲು – ಜನಾರ್ದನ ರೆಡ್ಡಿ ನಡುವಿನ ವೈಷಮ್ಯ ಹೊರಜಗತ್ತಿಗೆ ಅಷ್ಟಾಗಿ ಗೊತ್ತಾಗದೇ ಇರುವ ಸಾಧ್ಯತೆಗಳಿದ್ದವು.
ಸಂಡೂರಿನಲ್ಲಿ ಬಿಜೆಪಿ ಸೋಲಿಗೆ ಶ್ರೀರಾಮುಲು ಕಾರಣ ಎಂದು ರಾಧಾ ಮೋಹನ್ ಹೇಳಿರುವುದು ಬಿಜೆಪಿಯ ಆಂತರಿಕ ಕಲಹ ಇನ್ನೊಂದು ಮಜಲಿಗೆ ಹೋಗಲು ಕಾರಣವಾಯಿತು. ಶ್ರೀರಾಮುಲು, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ದ ಕೆಲಸ ಮಾಡಿದ್ದೇ ಸೋಲಿಗೆ ಕಾರಣ ಎಂದು ಜನಾರ್ದನ ರೆಡ್ಡಿಯ ದೂರನ್ನು ಅವರು ಉಲ್ಲೇಖಿಸಿದ್ದು, ಪಕ್ಷದಲ್ಲೇ ಹಲವು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು. ಇದಾದ ನಂತರ, ರೆಡ್ಡಿಯ ಹೇಳಿಕೆ ಬಿಜೆಪಿ ಬಣ ಬಡಿದಾಟಕ್ಕೆ ಇನ್ನಷ್ಟು ತುಪ್ಪವನ್ನು ಸುರಿಯಿತು. ಸತೀಶ್ ಜಾರಕಿಹೊಳಿಯವನ್ನು ಹಣೆಯಲು ಅದೇ ಸಮುದಾಯದ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೆಳೆಯಲು ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ ಎನ್ನುವ ಇವರ ಆರೋಪ, ಶ್ರೀರಾಮುಲು ಅವರ ಕೋಪಕ್ಕೆ ಕಾರಣವಾಯಿತು.
ಯಾವಾಗ ವಿಜಯೇಂದ್ರ ವಿರುದ್ದ ಶ್ರೀರಾಮುಲು ಅಸಮಾಧಾನದ ಮಾತನ್ನು ಆಡಿದರೋ, ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಬಣ ಚುರುಕಾಯಿತು. ನಿಮ ಜೊತೆ ನಾವಿದ್ದೇವೆ, ಬೇಸರಿಸಿಕೊಳ್ಳಬೇಡಿ, ನಮದೆಲ್ಲರದ್ದೂ ಒಂದೇ ಸಮಸ್ಯೆ ಎಂದು ಶ್ರೀರಾಮುಲು ಪರ ನಿಂತಿತು.