ದೇವನಹಳ್ಳಿ,ಮಾ,19 : ಬಲಿಜ ಸಂಘವು ಧಾರ್ಮಿಕ ಸೇವೆಯಲ್ಲಿ ಅಲ್ಲದೇ ಕ್ರೀಡೆಗಳಲ್ಲೂ ಅಷ್ಟೇ ತೊಡಗಿಸಿಕೊಳ್ಳುತ್ತಾರೆ ಇದು ಅಭಿನಂದನಾರ್ಹ ಹಾಗೂ ಎಲ್ಲರೂ ಪ್ರತಿ ದಿನ ಕ್ರೀಡೆಯಲ್ಲಿ ತೊಡಗಿಕೊಂಡು ತಮ್ಮ ಆರೋಗ್ಯವಂತರಾಗಿ ತಮ್ಮ ಬದುಕು ಕಟ್ಟಿಕೊಳ್ಳಬೇಕೆಂದು ಪುರಸಭಾ ಅಧ್ಯಕ್ಷೆ ರಾಜೇಶ್ವರಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟರನಣಸ್ವಾಮಿ ದೇವಾಲಯ, ಸದ್ಗುರು ಶ್ರೀ ಯೋಗಿನಾರೇಯಣ ಯತೀಂದ್ರ ಬಲಿಜ ಯುವಸಮೂಹ, ವಿಜಯಪುರ ಟೌನ್ ಬಲಿಜ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಎರಡನೇ ವರ್ಷದ ಬಲಿಜ ಪ್ರೀಮಿಯರ್ ಲೀಗ್ 2022 ರ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಯುವ ಪೀಳಿಗೆ ಕ್ರೀಡೆಯಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುವ ಅವಕಾಶದ ಜೊತೆಗೆ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುತ್ತಾರೆ ಎಂದು ತಿಳಿಸಿದರು.
ಕ್ರೀಡೆಗಳು ಮನುಷ್ಯನ ಮಾನಸಿಕ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಸ್ಥಿರವಾಗಿರಿಸುತ್ತದೆ. ಅಲ್ಲದೇ ದಿನಪೂರ್ತಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಅಡಗಿರುತ್ತದೆ. ಕ್ರೀಡೆಯು ಸಹ ಒಂದು ಕಲೆಯಂತೆಯೇ ಕಾಣಬಹುದು. ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಯಲ್ಲಿ ಜ್ಞಾನ ವಿಕಸನವು ಆಗುತ್ತದೆ. ಭಾರತದಲ್ಲಿಕ್ರೀಡೆಗಳಿಗೆ ಮತ್ತು ಕ್ರೀಡಾ ಪಟುಗಳಿಗೆ ಹೆಚ್ಚು ಗೌರವವಿದೆ ಎಂದು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಟೌನ್ ಬಲಿಜ ಸಂಘದ ಅಧ್ಯಕ್ಷ ಮಹಾತ್ಮಾಂಜಿನೇಯ, ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ಗೌರವಾಧ್ಯಕ್ಷ ಪಿ.ನಾರಾಯಣಪ್ಪ, ರಾಮಕೃಷ್ಣಪ್ಪ, ಆರ್.ಮುನಿ ರಾಜು, ಶಿವಕುಮಾರ್, ನಾಗಯ್ಯ, ವೇಣುಗೋಪಾಲ್, ಮುನಿಕೃಷ್ಣಪ್ಪ, ನಾಗಾರ್ಜುನ್ ಮತ್ತಿತರರು ಇದ್ದರು.