ಮರಿಯಮ್ಮನಹಳ್ಳಿ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ, ಪಟ್ಟಣದ ಆರಾಧ್ಯದೈವ ಗಳಾದ ಶ್ರೀಲಕ್ಷ್ಮಿನಾರಾಯಣಸ್ವಾಮಿ ಹಾಗು ಶ್ರೀ ಆಂಜನೇಯಸ್ವಾಮಿಗಳ ಜೋಡಿ ರಥೋತ್ಸವದ ದೇವತಾ ಕಾರ್ಯಗಳು ಯುಗಾದಿ ಪಾಡ್ಯದಂದು, ಕಿನ್ನಾಳದ ಗಂಗೂರ ಮನೆತನದ ಆಗಮದವರ ಪೌರೋಹಿತ್ಯದಲ್ಲಿ ಆರಂಭಗೊಳ್ಳುತ್ತವೆ.
ಏಪ್ರಿಲ್ 7ರಂದು ಗುರುವಾರ ಚೈತ್ರ ಶುದ್ದಷಷ್ಟಿ ಹನುಮಂತೋತ್ಸವ (ನಿಶ್ಚಿತಾರ್ಥ), ಏಪ್ರಿಲ್8ರಂದು ಚೈತ್ರ ಶುದ್ಧ ಸಪ್ತಮಿ ಶುಕ್ರವಾರ ಗರುಡೋತ್ಸವ (ದೇವರಲಗ್ನ),9ರಂದು ಚೈತ್ರ ಶುದ್ಧ ಅಷ್ಟಮಿ ಶನಿವಾರರದಂದು ಬಿಳಿ ಆನೆ ಉತ್ಸವ,10ರಂದು ಚೈತ್ರ ಶುದ್ಧ ಶನಿವಾರ ನವಮಿಯಂದು ರಥೋತ್ಸವ,ಭಾನುವಾರ ಚೈತ್ರ ಶುದ್ಧ ದಶಮಿಯ೦ದು ಕಡುಬಿನ ಕಾಳಗ, ಚೈತ್ರ ಶುದ್ಧ ದಶಮಿಯಂದು ಸೋಮವಾರ ವಸಂತೋತ್ಸವ(ಓಕುಳಿ),ಪೂರ್ಣಾಹುತಿ,ಕಂಕಣವಿಸರ್ಜನೆ ನಡೆಯಲಿವೆ. ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
ಕಿನ್ನಾಳದ ಆಗಮದವರೆಂದೆ ಹೆಸರಾದ ಗಂಗೂರ ಮನೆತನದವರಿಂದ ಹಲವು ತಲೆಮಾರುಗಳಿಂದ ಹಲವಾರು ವರ್ಷಗಳಿಂದ ಕಿನ್ನಾಳದ ಗಂಗೂರ ಮನೆತನದವರು ನಡೆಸಿಕೊಂಡು ಬರುತ್ತಿದ್ದಾರೆ. ಇವರನ್ನು ಆಗಮದವರೆಂದು ಕರೆಯಲಾಗುತ್ತದೆ. ಪ್ರತಿವರ್ಷ ನಡೆಯುವ ರಥೋತ್ಸವ ಕಾರ್ಯ ಕ್ರಮಗಳನ್ನು ಇವರ ಮನೆತನದವರ ಪೌರೋಹಿತ್ಯ ದಲ್ಲೇ ನಡೆಯುವವು. ಸುಮಾರು10-12 ಜನ ಪುರೋಹಿತರ ನೇತೃತ್ವದಲ್ಲಿ ಪ್ರತಿದಿನ ಹೋಮ, ಹವನಗಳು ಚೈತ್ರ ಶುದ್ಧ ಪಾಡ್ಯದಿ೦ದ ಆರಂಭಗೊಂಡು ಚೈತ್ರ ಶುದ್ಧ ಏಕಾದಶಿಯವರೆಗೂ ಕಾರ್ಯಕ್ರಮಗಳು ನಡೆಯಲಿವೆ.