ಕುಷ್ಟಗಿ:- ತಾಲೂಕಿನ ಸರ್ಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಕಾನೂನು ಅರಿವು ಮತ್ತು ಮಕ್ಕಳ ಹಕ್ಕುಗಳ ಕಾರ್ಯಕ್ರಮಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಹಾಗೂ ಶಿಕ್ಷಕರಾದ ಅರವಿಂದ ಕುಮಾರ್ ದೇಸಾಯಿ ಅವರು ವಿಶೇಷ ಉಪನ್ಯಾಸ ನೀಡಿ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ ವಿಷಯಗಳ ಕುರಿತು ಉಪನ್ಯಾಸ ನೀಡಿ ಕಾನೂನುಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು ಮಕ್ಕಳೊಂದಿಗೆ ಸಂವಾದ ನಡೆಸಿ ಮಕ್ಕಳ ಸಂದೇಹಗಳಿಗೆ ಉತ್ತರಿಸಿದರು.ಹಿರಿಯ ಶಿಕ್ಷಕಿಯಾದ ವಿಶಾಲಕ್ಷಮ್ಮ ಕಾರ್ಯಕ್ರಮ ಕುರಿತು ಮಾತನಾಡಿದರು.
ಅತಿಥಿಗಳಾಗಿ ಶಾಕೀರ್ ಬಾಬಾ ಶರಣಪ್ಪ ಪರಸಾಪುರ ದೈಹಿಕ ಶಿಕ್ಷಕರಾದ ಎಚ್ಡಿ ನದಾಫ್ ಸಿದ್ದನಗೌಡ ಪೊಲೀಸ್ ಪಾಟೀಲ್ ಕರೀಂಸಾಹೇಬ್ ಇದ್ದಲಗಿ ಶರಫಾಭೀ ಇದ್ದರು ಅಧ್ಯಕ್ಷತೆಯನ್ನು ಮುಖ್ಯಗುರುಗಳು ರಾಯಪ್ಪ ಹೂಗಾರ್ ವಹಿಸಿ ಮಾತನಾಡಿ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯುವುದಕ್ಕೆ ಮಕ್ಕಳ ಹಕ್ಕುಗಳ ಕಾಯ್ದೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಸಂಸತ್ತಿನ ಪ್ರಧಾನಿ ಸುಮಾ ಮಸ್ಕಿಮಠ ಹಾಗೂ ಸಂಸತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ಭಿತ್ತಿ ಚಿತ್ರಗಳ ಸ್ಪರ್ಧೆ ಏರ್ಪಡಿಸಲಾಯಿತು ಮಕ್ಕಳ ದಿನಾಚರಣೆಯಂದು ಬಹುಮಾನ ವಿತರಿಸಲಾಗುವುದದು