ಬಳ್ಳಾರಿ,ಮಾ.19 : ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಖನಿಜ ನಿದಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ ಸಿಂಥೆಟಿಕ್ ರನ್ನಿಂಗ್ ಟ್ರ್ಯಾಕ್,ಸಿಂಥೆಟಿಕ್ ಹಾಕಿ ಕೋರ್ಟ್ ನಿರ್ಮಾಣ ಕಾಮಗಾರಿ ಸೇರಿದಂತೆ 5 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಶನಿವಾರ ಚಾಲನೆ ನೀಡಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಅಡಿ 136.88ಲಕ್ಷ ರೂ.ವೆಚ್ಚದಲ್ಲಿ ಸಿಂಥೆಟಿಕ್ ರನ್ನಿಂಗ್ ಟ್ರ್ಯಾಕ್,153.25ಲಕ್ಷ ರೂ.ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದ ಆಸನಗಳ ಸಾಮಥ್ರ್ಯ ಸುಧಾರಣೆ ಮತ್ತು ಬಂಡ್ ವರ್ಕ್, 2ಕೋಟಿ ರೂ.ವೆಚ್ಚದಲ್ಲಿ ಸಿಂಥೆಟಿಕ್ ಟರ್ಫಿಂಗ್ ಕಾಮಗಾರಿ, 97.31ಲಕ್ಷ ರೂ.ವೆಚ್ಚದಲ್ಲಿ ಆರ್‍ಸಿಸಿ ಡ್ರೈನ್ ಮತ್ತು ಅಪ್‍ಗ್ರೇಡೇಶನ್ ಆಫ್ ಫ್ಲಡ್ ಲೈಟ್ಸ್ ಮತ್ತು ಇತರ ಕಾಮಗಾರಿ, ಜಿಲ್ಲಾ ಖನಿಜ ನಿಧಿ ಅನುದಾನದ ಅಡಿ 2.70 ಕೋಟಿ ರೂ.ವೆಚ್ಚದಲ್ಲಿ ಸಿಂಥೆಟಿಕ್ ಹಾಕಿ ಕೋರ್ಟ್ ನಿರ್ಮಾಣ ಸೇರಿದಂತೆ 5 ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಭೂಮಿಪೂಜೆ ನೆರವೇರಿಸಿದರು.
ಭೂಮಿಪೂಜೆ ನೆರವೇರಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ದೇಶದಲ್ಲಿ ಇಂದು ಕ್ರೀಡಾ ಸಂಸ್ಕøತಿ ಬದಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ – ಕ್ರೀಡೆಗಳಿಗೆ ಹಿಂದೆಂದೂ ಕೊಡದಷ್ಟು ಮಹತ್ವ ನೀಡಲಾಗ್ತಿದೆ. ರಾಜ್ಯದಲ್ಲಿ ಅತ್ಯಾಧುನಿಕ ಕ್ರೀಡಾ ಸಾಮಗ್ರಿಗಳ ಖರೀದಿಗೆ ಬಜೆಟ್‍ನಲ್ಲಿ 100 ಕೋಟಿ ಒದಗಿಸಲಾಗಿದೆ ಎಂದರು. ರಾಜ್ಯದಲ್ಲಿ ಸ್ಥಳೀಯ ಕ್ರೀಡೆಗಳ ಉತ್ತೇಜನಕ್ಕೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 504 ಕೋಟಿ ವೆಚ್ಚದಲ್ಲಿ “ಕ್ರೀಡಾ ಅಂಕಣಗಳನ್ನು” ಸ್ಥಾಪಿಸಲು ಯೋಜನೆ ಘೋಷಣೆ ಆಗಿದೆ. 2024ರ ಒಲಿಪಿಂಕ್ಸ್‍ಗೆ ನಮ್ಮ ರಾಜ್ಯದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನ ಸಜ್ಜು ಮಾಡಲು 75 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ ಎಂದು ವಿವರಿಸಿದ ಸಚಿವ ಬಿ.ಶ್ರೀರಾಮುಲು ಅವರು ಹಿಂದೆಂದೂ ಕೊಡದ ಮಹತ್ವ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡಾ ರಂಗಕ್ಕೆ ನೀಡುತ್ತಿವೆ ಎಂದರು. ಕ್ರೀಡೆಗೆ ಉತ್ತೇಜನ ನೀಡುವ ಮೂಲಕ ನಮ್ಮ ಸರಕಾರ ಆರೋಗ್ಯವಂತ ಸಮಾಜ ಹಾಗೂ ಆರೋಗ್ಯಕರ ಭಾರತ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ ಅವರು ಬಳ್ಳಾರಿ ಜಿಲ್ಲೆಯಲ್ಲಿ ಸೆಂಟರ್ ಫಾರ್ ಸ್ಪೋಟ್ರ್ಸ ಎಕ್ಸಲೆನ್ಸ್ ಸ್ಥಾಪಿಸುವ ಉದ್ದೇಶ ಇದ್ದು, ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಉತ್ತಮ ಹೆಜ್ಜೆ ಅಗಲಿದೆ. ನಮ್ಮ ಮಕ್ಕಳು ಮುಂಬರುವ ದಿನಗಳಲ್ಲಿ ಈ ಎಲ್ಲ ವ್ಯವಸ್ಥೆಯ ಉಪಯೋಗ ಪಡೆದು, ಕ್ರೀಡಾ ರಂಗದಲ್ಲಿ ಜಿಲ್ಲೆಗೆ, ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.
ಕ್ರೀಡೆಗೆ ಸಂಬಂಧಿಸಿದಂತೆ 8.57 ಕೋಟಿ ವೆಚ್ಚದಡಿ 5 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅತ್ಯಂತ ಖುಷಿಯಿಂದ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಈ ಮೂಲಕ ನಮ್ಮ ಜಿಲ್ಲೆಯ ಕ್ರೀಡಾ ವಲಯಕ್ಕೆ ಒಂದು ಭದ್ರ ಬುನಾದಿ ಹಾಕುತ್ತಿದ್ದೇವೆ ಎಂದರು. ಖೇಲೋ ಇಂಡಿಯಾ ಮಾದರಿಯಲ್ಲಿ ನಮ್ಮ ಮಕ್ಕಳಿಗೆ ಮತ್ತು ನಮ್ಮ ಯುವಪ್ರತಿಭೆಗಳಿಗೆ ಖೇಲೋ ಬಳ್ಳಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದರು. ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನ ಗುರುತಿಸಿ, ದೇಶದ ಅಸ್ತಿಯಾಗಿ ಬೆಳೆಸೋ ಯೋಜನೆ ಖೇಲೋ ಇಂಡಿಯಾ ಆಗಿದ್ದು, ಅದರ ಅಡಿ ಪ್ಲೇಫೀಲ್ಡ್‍ಗಳ ಅಭಿವೃದ್ಧಿ,ಕ್ರೀಡೆಗಳಿಗೆ ಬೇಕಾದ ಮೂಲಭೂತಸೌಕರ್ಯ ಅಭಿವೃದ್ಧಿ ಸೇರಿದಂತೆ 12 ಮುಖ್ಯ ಅಂಶಗಳನ್ನ ಗುರುತಿಸಲಾಗಿದೆ. ಇಂದು ಬಳ್ಳಾರಿಯಲ್ಲಿ ಪ್ಲೇಫೀಲ್ಡ್‍ಗಳ ಅಭಿವೃದ್ಧಿ,ಕ್ರೀಡೆಗಳಿಗೆ ಬೇಕಾದ ಮೂಲಭೂತಸೌಕರ್ಯ ಅಭಿವೃದ್ಧಿ ಕೆಲಸ ಆಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಲಿಂಗಮೂರ್ತಿ, ಎಸ್ಪಿ ಸೈದುಲು ಅಡಾವತ್,ಬುಡಾ ಅಧ್ಯಕ್ಷ ಪಾಲನ್ನ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್ ರಾಠೋಡ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೋಹನ್ ಸೇರಿದಂತೆ ಸಾರ್ವಜನಿಕರು,ಕ್ರೀಡಾಪಟುಗಳು ಇದ್ದರು.