“ಕರ್ನಾಟಕದಲ್ಲಿ ಯುವ ಸಮೂಹದ ಧ್ವನಿ  ಸಶಕ್ತಗೊಳಿಸುವ” ಕುರಿತ ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್ ಪ್ರಾದೇಶಿಕ ಸುತ್ತಿಗೆ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ

ಬೆಂಗಳೂರು :  ಕರ್ನಾಟಕ ಶಾಸಕಾಂಗದ ಸಹಯೋಗದೊಂದಿಗೆ ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್ ಸಹಯೋಗದಲ್ಲಿ ಎರಡು ದಿನಗಳ ಯುವ ಸಂಸತ್ತಿನ ಬೆಂಗಳೂರು ಆವೃತ್ತಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡಿದರು. 

 

ವಿಕಾಸ ಸೌಧದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ  ಯುವಕರನ್ನು ಸಶಕ್ತಗೊಳಿಸಲು ಮತ್ತು ಅರ್ಥಪೂರ್ಣ ರಾಜಕೀಯ ಸಂವಾದ ಮತ್ತು ಆಡಳಿತದಲ್ಲಿ ತೊಡಗಿಸಿಕೊಳ್ಳುವ ಗುರಿ ಹೊಂದಿರುವ ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ರಾಜ್ಯ ಸಭೆ ಮಾಜಿ ಸದಸ್ಯ ಪ್ರೊ ಎಂ.ವಿ. ರಾಜೀವ್ ಗೌಡ, ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ಸಿಐಐ ಯಂಗ್ ಇಂಡಿಯನ್ಸ್ ಬೆಂಗಳೂರು ಚಾಪ್ಟರ್ ಅಧ್ಯಕ್ಷ ಮೊಹಮ್ಮದ್ ಜಹ್ರಿನ್ ಬಿನ್ ಅಜೀಜ್,  ಯಂಗ್ ಇಂಡಿಯನ್ ಸಂಸ್ಥೆಯ ದರ್ಶನ್ ಮುತಾ, ಅಸೀಂ ಅಭಯಂಕರ್ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.   

ರಾಜ್ಕೋಟ್ ಮತ್ತು ಚೆನ್ನೈನಲ್ಲಿ ನಡೆದ ಯಶಸ್ವಿ ಸುತ್ತಿನ ನಂತರ ಮೂರನೇ ಸುತ್ತಿನ ಯಂಗ್ ಪಾರ್ಲಿಮೆಂಟ್ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ನವೆಂಬರ್ನಲ್ಲಿ ದೆಹಲಿಯಲ್ಲಿ ರಾಷ್ಟ್ರಮಟ್ಟದ ಫೈನಲ್ ಸ್ಪರ್ಧೆ ನಡೆಯಲಿದೆ.

ಪ್ರಣಾಳಿಕೆ ರಚನೆ, ಸಮಿತಿ ಸಭೆಗಳ ಮಹತ್ವ, ಹವಾಮಾನ ಬದಲಾವಣೆ, ಕೌಶಲ್ಯ ಕಾರ್ಯಕ್ರಮಗಳು, ಮಾದಕವಸ್ತು ದುರ್ಬಳಕೆ ತಡೆಗಟ್ಟುವಿಕೆ, ವೃತ್ತಿ ಆಯ್ಕೆಯ ಅರಿವು ಮತ್ತು ಕಾನೂನು ಮತ್ತು ನಾಗರಿಕ ಶಿಕ್ಷಣದಂತಹ ಒತ್ತುವ ವಿಷಯಗಳ ಮೇಲೆ ಇಡೀ ದಿನ ಕಾರ್ಯಕ್ರಮವನ್ನು ಕೇಂದ್ರೀಕರಿಸಲಾಗಿದೆ.

 

ನಾಳೆ ಆಗಮನದೊಂದಿಗೆ ಪ್ರಾರಂಭವಾಗುತ್ತದೆ, ನಂತರ ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಮತ್ತಿತರೆ ಕಲಾಪದ ಮಹತ್ವದ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರು ಮಾತನಾಡಲಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top