ಹಬ್ಬಕ್ಕೆ ಮೆರಗು ತಂದ ದೇಶದ ಪ್ರಮುಖ ಆಭರಣ ಸಂಸ್ಥೆಗಳು
ಬೆಂಗಳೂರು : ವರ ಮಹಾಲಕ್ಷ್ಮಿ ಹಬ್ಬಕ್ಕಾಗಿ ಬೆಂಗಳೂರಿನ ಜನರಿಗೆ ಮೂರು ದಿನಗಳ ದಕ್ಷಿಣ ಭಾರತದ ಅತಿ ದೊಡ್ಡ ‘ಏಷ್ಯಾ ಜ್ಯುವೆಲ್ಸ್ ಶೋ 2024’ ಆರಂಭವಾಗಿದ್ದು, ರೆಸಿಡೆನ್ಸಿ ರಸ್ತೆಯ ರಿಟ್ಜ್-ಕರ‍್ಲ್ಟನ್ ಹೋಟೆಲ್ ನಲ್ಲಿ ಆಭರಣಗಳ ಉತ್ಸವ ಅನಾವರಣಗೊಂಡಿದೆ.
ಒಂದೇ ಸೂರಿನಡಿ ಭಾರತದ ಶ್ರೇಷ್ಠ ವಿನ್ಯಾಸಕರ ಅತ್ಯುತ್ತಮ ಬ್ರಾಂಡ್ ಗಳನ್ನು ಆಭರಣ ಕಂಪೆನಿಗಳು ಹೊತ್ತು ತಂದಿವೆ. ಬೆಳಿಗ್ಗೆ 10.30 ರಿಂದ ರಾತ್ರಿ 8 ಗಂಟೆವರೆಗೆ ಆಭರಣಗಳನ್ನು ಖರೀದಿಸಲು ಸೂಕ್ತ ವೇದಿಕೆ ಕಲ್ಪಿಸಲಾಗಿದೆ.
ಆಭರಣ ಮೇಳಕ್ಕೆ ನಟಿ, ರೂಪದರ್ಶಿ ಪ್ರಿಯಾಂಕ ಅರೋರ, ಭಾಗ್ಯಶ್ರೀ ಶಿವಂದ್ ಪಾಟೀಲ್, ಶೀ ಫಾರ್ ಸೊಸೈಟಿ ವುಮೆನ್ ಸಂಸ್ಥಾಪಕ ಅಧ್ಯಕ್ಷೆ ಹರ್ಷಿಣಿ ವೆಂಕಟೇಶ್ ಚಾಲನೆ ನೀಡಿದರು. ಮಹಿಳಾ ಉದ್ಯಮಿಗಳಾದ ಸಚಿನಾ ಮೋಹನ್, ಪವಿತ್ರಾ ರೆಡ್ಡಿ, ನಿತು ಅರ‍್ವಾಲ್, ಸೋನಿಯಾ ನಾಯ್ಡು ಮತ್ತು ಸೀಮಾ ಪಾಂಡೆ ಉಪಸ್ಥಿತರಿದ್ದರು.
ದೇಶಾದ್ಯಂತ ಉನ್ನತ ಆಭರಣ ತಯಾರಕರಿಂದ ಹಿಂದೆಂದೂ ಕಾಣದ ಅತ್ಯುತ್ತಮ ಆಭರಣ ವಿನ್ಯಾಸಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲಾಗುತ್ತದೆ.
ಆಭರಣ ಮೇಳದ ಸಂಯೋಜಕರಾದ ಹರೀಶ್ ಮಾತನಾಡಿ, 50ನೇ ವರ್ಷದ ಏಷ್ಯಾ ಜ್ಯುವೆಲ್ಸ್ ಶೋ ಅತ್ಯಂತ ಮಹತ್ವ ಪಡೆದುಕೊಂಡಿದೆ. ಅಮೂಲ್ಯ ಕಲ್ಲುಗಳನ್ನು ಒಂದೇ ಸೂರಿನಡಿ ತರುವ, ದಕ್ಷಿಣ ಭಾರತದಲ್ಲಿ ಸೊಗಸಾದ ಮತ್ತು ವಿಶ್ವ ದರ್ಜೆಯ ಆಭರಣಗಳನ್ನು ಖರೀದಿಸಲು ಇದು ಪರಿಪೂರ್ಣ ತಾಣವಾಗಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅಭರಣ ಪ್ರದರ್ಶನ ಏರ್ಪಡಿಸಿದ್ದು, ಚಿನ್ನದ ಬೆಲೆ ಕಡಿಮೆ ಆಗಿರುವುದರಿಂದ ಖರೀದಿ ಮಾಡಲು ಮಹಿಳೆಯರಿಗೆ ಸುವರ್ಣಕಾಶ ದೊರೆತಂತಾಗಿದೆ ಎಂದರು.
ಗಜರಾಜ್ ಜ್ಯುವೆಲ್ಲರ್ಸ್ (ಬೆಂಗಳೂರು), ನಿಖರ್ ಜ್ಯುವೆಲ್ಸ್ (ಬೆಂಗಳೂರು), ಸೃಷ್ಟಿ ಜ್ಯುವೆಲ್ಸ್ (ಬೆಂಗಳೂರು), ಸಿಂಹ ಜ್ಯುವೆಲ್ಲರ್ಸ್ (ಬೆಂಗಳೂರು), ವರಶ್ರೀ ಜ್ಯುವೆಲ್ಸ್ (ಬೆಂಗಳೂರು), ಎಂಪಿ ಜ್ಯುವೆಲ್ಲರ್ಸ್ (ಬೆಂಗಳೂರು), ಸೆಹಗಲ್ ಜ್ಯುವೆಲ್ಲರ್ಸ್ (ದೆಹಲಿ), ನೇಹಾ ಕ್ರಿಯೇಷನ್ಸ್ (ಮುಂಬೈ), ಹೇಮಾ ಕೊಠಾರಿ – ಮುಂಬೈ, ಶ್ರೀಹರಿ ಡಯಾಗೆಮ್ಸ್ ಬೈ ಅನಿರುದ್ಧ್ (ದೆಹಲಿ), ಹೌಸ್ ಆಫ್ ಇಭಾನ್ (ಮುಂಬೈ), ಸೋಹಮ್ ಕ್ರಿಯೇಷನ್ಸ್ (ಮುಂಬಯಿ), ಕರಣ್ ಜೋಹರ್, ಶ್ರೀ ಗಣೇಶ್ ಡೈಮಂಡ್ಸ್ & ಜ್ಯುವೆಲ್ಲರಿ (ಬೆಂಗಳೂರು), ಶ್ರೀ ಪರಮನೈ ಜ್ಯುವೆಲ್ಸ್ (ದೆಹಲಿ), ಸುನಿಲ್ ಜ್ಯುವೆಲ್ಲರ್ಸ್ (ಜೈಪುರ), ಆಭೂಷಣ್ ಜ್ಯುವೆಲ್ಲರ್ಸ್ (ಬೆಂಗಳೂರು), ಫಿಯೋನಾ ಡೈಮಂಡ್ಸ್ (ಬೆಂಗಳೂರು), ಜ್ಯುವೆಲ್ಲರಿ ಬೈ ನಿಖಿತಾ (ಬೆಂಗಳೂರು), ತ್ರಿ-ದಿಯಾ (ಬೆಂಗಳೂರು), ಕಹಾ ಡೈಮಂಡ್ಸ್ (ಬೆಂಗಳೂರು), ಎಫ್ ಝಡ್ ಜೆಮ್ಸ್ (ಜೈಪುರ) ಆಭರಣ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿವೆ.