ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ನಿಷೇಧ: ನಿಯಮಗಳ ಗಾಳಿಗೆ ತೂರುತ್ತಿರುವ ರಾಜಕೀಯ ಪಕ್ಷಗಳು, ಕಣ್ಮುಚ್ಚಿ ಕುಳಿತ ಅಧಿಕಾರಿಗಳು!

ಬೆಂಗಳೂರು: ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮೇಲೆ ರಾಜ್ಯ ರ‍್ಕಾರ ನಿಷೇಧ ಹೇರಿದ್ದರೂ ಚುನಾವಣಾ ಪ್ರಚಾರ, ರ‍್ಯಾಲಿಗಳ ವೇಳೆ ರಾಜಕೀಯ ಪಕ್ಷಗಳು ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಕಂಡು ಬಂದಿದೆ. ನಿಯಮಗಳು ಉಲ್ಲಂಘನೆಯಾಗುತ್ತಿದ್ದು ಸಂಬಂಧಪಟ್ಟಂತಹ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

ಪರಿಸರ ಸಂರಕ್ಷಣಾ ಕಾಯಿದೆ, ೧೯೮೬ ರ ಸೆಕ್ಷನ್ ೫ ರ ಅಡಿಯಲ್ಲಿ
ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ರ‍್ನಾಟಕದ ಘನತ್ಯಾಜ್ಯ ನರ‍್ವಹಣಾ ನಿಯಮಗಳು
ಕೂಡ ಬಳಕೆಯನ್ನು ನಿಷೇಧ ಮಾಡಿದೆ. 
ನಿಯಮ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪ್ರಚಾರ ಮತ್ತು ರ‍್ಯಾಲಿಗಳಲ್ಲಿ
ಪ್ಲಾಸ್ಟಿಕ್ ಬಳಸದಂತೆ ಭಾರತದ ಚುನಾವಣಾ ಆಯೋಗ ಕೂಡ ನರ‍್ದೇಶನಗಳನ್ನು ನೀಡಿದೆ. ಆದರೂ, ರಾಜಕೀಯ ಪಕ್ಷಗಳು
ಮಾತ್ರ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಸಂಬಂಧಪಟ್ಟಂತಹ ಅಧಿಕಾರಿಗಳು ಚುನಾವಣಾ ರ‍್ತವ್ಯದಲ್ಲಿ
ನಿರತರಾಗಿರುವ ಕಾರಣ ರಾಜಕೀಯ ಪಕ್ಷ ವಿರುದ್ಧವಾಗಲೀ, ಅಭ್ರ‍್ಥಿಗಳ ವಿರುದ್ಧವಾಗಲೀ ಅಥವಾ ಆಯೋಜಕರ ಮೇಲಾಗಲಿ
ಒಂದೇ ಒಂದು ಪ್ರಕರಣವನ್ನೂ ದಾಖಲಿಸಿಲ್ಲ.

ರಾಜಕೀಯ ಕರ‍್ಯಕ್ರಮಗಳಿಗೆ ಅನುಮತಿ ನೀಡುವಾಗ ಪ್ಲಾಸ್ಟಿಕ್ ಬಳಕೆ ಇಲ್ಲದಂತೆ ನೋಡಿಕೊಳ್ಳುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ರ‍್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ರ‍್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಬಿಬಿಎಂಪಿಯ ಹಿರಿಯ ಮರ‍್ಷಲ್ ಮಾತನಾಡಿ, “ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರ‍್ನಾಟಕದಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ, ಕೆಲವು ಸ್ಥಳಗಳಲ್ಲಿ ಮಾತ್ರ ತ್ಯಾಜ್ಯ ವಿಂಗಡಣೆ ನಡೆಯುತ್ತಿದೆ, ಸರ‍್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನರ‍್ವಹಣೆಗೆ ನಿಯಂತ್ರಣವಿಲ್ಲದಂತಾಗಿದೆ. ಪ್ಲಾಸ್ಟಿಕ್ ಬಾಟಲಿಗಳು ಸಂಗ್ರಹಿಸಿ ಮರುಬಳಕೆ ಮಾಡಲಾಗುತ್ತಿದೆ, ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳಿಗೆ ಕಡಿಮೆ ಗಮನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕೆಎಸ್‌ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು ಬಿಬಿಎಂಪಿಗೆ ಸಂಬಂಧಿಸಿದ್ದಾಗಿದೆ. ಇದುವರೆಗೆ ಯಾವುದೇ ರಾಜಕೀಯ ಪಕ್ಷ, ಅಭ್ರ‍್ಥಿ ಅಥವಾ ಸಂಘಟಕರ ವಿರುದ್ಧ ದೂರು ದಾಖಲಿಸಿಲ್ಲ ಎಂದು ಹೇಳಿದ್ದಾರೆ.

ಬಹುತೇಕ ಸಿಬ್ಬಂದಿ ಚುನಾವಣಾ ರ‍್ತವ್ಯದಲ್ಲಿರುವುದರಿಂದ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ವಿಚಾರಣೆ ಮಾಡುತ್ತೇವೆ ಮತ್ತು ದೂರು ಬಂದ ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Facebook
Twitter
LinkedIn
Telegram
WhatsApp
Email
Print

1 thought on “ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ನಿಷೇಧ: ನಿಯಮಗಳ ಗಾಳಿಗೆ ತೂರುತ್ತಿರುವ ರಾಜಕೀಯ ಪಕ್ಷಗಳು, ಕಣ್ಮುಚ್ಚಿ ಕುಳಿತ ಅಧಿಕಾರಿಗಳು!”

Leave a Comment

Your email address will not be published. Required fields are marked *

Translate »
Scroll to Top